Friday, November 22
Share News

ಬೆಳ್ತಂಗಡಿ : ಯಕ್ಷ ಭಾರತಿ ರಿ. ಕನ್ಯಾಡಿ ಇದರ ದಶಮಾನೋತ್ಸವದ ಪ್ರಯುಕ್ತ ತುಳು ಶಿವಳ್ಳಿ ಸಭಾ.ರಿ ಬೆಳ್ತಂಗಡಿ ಆಶ್ರಯದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ , ಲಯನ್ಸ್ ಕ್ಲಬ್,ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆ, ಯೆನಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ಮತ್ತು ಜುಲೈಕಾ ಕ್ಯಾನ್ಸರ್ ಆಸ್ಪತ್ರೆ ದೇರಳಕಟ್ಟೆ ಸಹಕಾರದಲ್ಲಿ ಉಚಿತ ಆರೋಗ್ಯ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರವು ಕನ್ಯಾಡಿಯ ಹರಿಹರಾನುಗ್ರಹ ಕಲ್ಯಾಣ ಮಂಟಪದಲ್ಲಿ ಜರಗಿತು.

ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮತ್ತು ಲಕ್ಷ್ಮಿ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್. ಕೆ ಶಿಬಿರವನ್ನು ಉದ್ಘಾಟಿಸಿ ಯಕ್ಷಗಾನ, ಸಂಸ್ಕಾರ ಶಿಕ್ಷಣ ಜೊತೆಗೆ ಆರೋಗ್ಯ ಸೇವೆಯ ಸಾಮಾಜಿಕ ಕಾಳಜಿಯನ್ನು ಯಕ್ಷ ಭಾರತಿ ಸಂಸ್ಥೆಯು ಹೊಂದಿರುವುದು ಮಾದರಿಯಾಗಿದೆ. ಬದುಕಿನ ಅವಶ್ಯಕತೆಗಳಲ್ಲಿ ಕಲಾಸ್ವಾದನೆ, ಅರೋಗ್ಯ, ಸಂಸ್ಕಾರವು ಪ್ರಮುಖವಾಗಿದ್ದು ಈ ನಿಟ್ಟಿನಲ್ಲಿ ಯಕ್ಷ ಭಾರತಿ ಅಭಿನಂದನೀಯ ಕಾರ್ಯವನ್ನು ಮಾಡುತ್ತಿದೆ ಎಂದು ತಿಳಿಸಿದರು.

ಡಾ.ಅಶ್ವಿನಿ ಶೆಟ್ಟಿ ಯೆನಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ದೇರಳಕಟ್ಟೆ ,ಕಕ್ಕಿಂಜೆ ಶ್ರೀಕೃಷ್ಣ ಆಸ್ಪತ್ರೆಯ ಡಾ. ಮುರಳಿ ಕೃಷ್ಣ ಇರ್ವತ್ರಾಯ, ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಮಲಾ,ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ದೇವದಾಸ ಶೆಟ್ಟಿ , ಉಜಿರೆ ಶ್ರೀ ಧ. ಮ. ಕಾಲೇಜು ರಾ. ಸೆ. ಯೋ. ಯೋಜನಾಧಿಕಾರಿ ಡಾ. ಮಹೇಶ್ ಶೆಟ್ಟಿ, ಧರ್ಮಸ್ಥಳ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರೀತಮ್ ಡಿ, ಮುಂಡಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಗೌಡ, ಉಜಿರೆ ಜನಾರ್ದನ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷ ಗಂಗಾಧರ್ ರಾವ್ ಶುಭಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಯಕ್ಷ ಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಪ್ರಸ್ಥಾವನೆಗೈದರು.

ಶ್ರೀನಿವಾಸರಾವ್ ಕಲ್ಮಂಜ ಪ್ರಾರ್ಥಿಸಿದರು
ದಶಮಾನೋತ್ಸವ ಸಮಿತಿಯ ಕಾರ್ಯದರ್ಶಿ ರೋ.ವಿದ್ಯಾ ಕುಮಾರ್ ಕಾಂಚೋಡು ಸ್ವಾಗತಿಸಿ ಸಹ ಕಾರ್ಯದರ್ಶಿ ಶ್ರೀಮತಿ ಗೀತಾ ಕುರ್ಮಾಣಿ ವಂದಿಸಿದರು. ಮುರಳಿ ಕೃಷ್ಣ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಯೆನಪೋಯ ಆಸ್ಪತ್ರೆಯ ನವಾಜ್ ಮತ್ತು ಶಮೀರ್ ಶಿಬಿರದ ಸಂಯೋಜಕರಾಗಿದ್ದರು.

ಯಕ್ಷ ಭಾರತಿ ಪದಾಧಿಕಾರಿಗಳಾದ ಹರೀಶ್ ರಾವ್ ಮುಂಡ್ರುಪ್ಪಾಡಿ ,ಹರಿದಾಸ ಗಾಂಭೀರ ಧರ್ಮಸ್ಥಳ, ಮಹೇಶ ಕನ್ಯಾಡಿ, ಕುಸುಮಾಕರ ಕುತ್ತೋಡಿ,ಶಿತಿಕಂಠ ಭಟ್ಉಜಿರೆ , ಭವ್ಯ ಹೊಳ್ಳ ಉಜಿರೆ ,ಸೂರ್ಯಾನಂದ ರಾವ್,ಸುದರ್ಶನ್ ಕೆ. ವಿ, ಮುರಳಿಧರ ದಾಸ್, ಗುರುಪ್ರಸಾದ್ ಶ್ರೀ ಮಾತಾಆರ್ಟ್ಸ್ಉಜಿರೆ,ಡಿ.ಕೃಷ್ಣ ಕನ್ಯಾಡಿ,,ಕೌಶಿಕ ರಾವ್ ಕನ್ಯಾಡಿ, ಯಶೋಧರ ಇಂದ್ರ, ಶಶಿಧರ ಕನ್ಯಾಡಿ, ಕೌಸ್ತುಭ ಮತ್ತುಉಜಿರೆ ಶ್ರೀ ಧ. ಮ. ಕಾಲೇಜು ರಾ.ಸೇ. ಯೋಜನೆಯ ಸದಸ್ಯರು ಶಿಬಿರದ ಸಂಯೋಜನೆಗೆ ಸಹಕರಿಸಿದರು.

ಕೃಷಿ ಪತ್ತಿನ ಸಹಕಾರಿ ಸಂಘ ಮುಂಡಾಜೆ, ಬಂಟರೆ ಯಾನೆ ನಾಡವರ ಸಂಘ ಉಜಿರೆ, ಹಿಂದೂ ಧಾರ್ಮಿಕ ಸೇವಾ ಸಮಿತಿ ಕನ್ಯಾಡಿ, ಬ್ರಹ್ಮಶ್ರೀ ಗುರು ನಾರಾಯಣ ಸೇವಾ ಸಮಿತಿ ಧರ್ಮಸ್ಥಳ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ಕಲ್ಮಂಜ, ಒಕ್ಕಲಿಗರ ಸೇವಾ ಸಂಘ ನಾರ್ಯ ಸಹಕಾರ ನೀಡಿದ್ದರು.

11 ಆರೋಗ್ಯ ಸೇವಾ ವಿಭಾಗಗಳಲ್ಲಿ ತಜ್ಞ ವೈದ್ಯರು 150ಕ್ಕಿಂತಲೂ ಹೆಚ್ಚು ಫಲಾನುಭವಿಗಳನ್ನು ತಪಾಸಣೆಮಾಡಿ ಚಿಕಿತ್ಸೆಯ ಮಾಹಿತಿ ನೀಡಿದರು.


Share News

Comments are closed.

Exit mobile version