Wednesday, December 18
Share News

ಉಪ್ಪಿನಂಗಡಿ: ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಸುವರ್ಣ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಮಹಾಭಾರತ ಸರಣಿಯ 56ನೇ ತಾಳಮದ್ಧಳೆ ಭಾನುಮತಿ ಕಲ್ಯಾಣ ಬೆಳ್ತಂಗಡಿ ಇಳಂತಿಲ ಗ್ರಾಮದ ಬನ್ನೆಂಗಳ ಸಮೃದ್ಧಿ ನಿವಾಸದಲ್ಲಿ ಜರಗಿತು.

ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ, ಸುರೇಶ್ ರಾವ್. ಬಿ,ನಿತೀಶ್ ಕುಮಾರ್.ವೈ ಹಿಮ್ಮೇಳದಲ್ಲಿ ದಿವಾಕರ ಆಚಾರ್ಯ ನೇರೆಂಕಿ, ಚಂದ್ರಶೇಖರ ಆಚಾರ್ಯ ಗೇರುಕಟ್ಟೆ,ಶ್ರೀಪತಿ ಭಟ್ ಉಪ್ಪಿನಂಗಡಿ

ಅರ್ಥಧಾರಿಗಳಾಗಿ ಪಾತಾಳ ಅಂಬಾ ಪ್ರಸಾದ್,ಗುಡ್ಡಪ್ಪ ಬಲ್ಯ (ಬಾಹ್ಲಿಕ ರಾಜ )ಶ್ರೀಮತಿ ಶ್ರುತಿ  ವಿಸ್ಮಿತ್ (ವನಚರರು, ಮಂತ್ರಿ )ಮಾಸ್ಟರ್ ಸುಶಾಂತ(ನಾರದ ) ರವೀಂದ್ರ ದರ್ಬೆ (ಕೌರವ )ಶ್ರೀಧರ ಎಸ್ಪಿ ಸುರತ್ಕಲ್(ಕರ್ಣ )ಶ್ರೀಮತಿ ಗೀತಾ ಕುದ್ದಣ್ಣಾಯ  (ಮಾಗಧ )ಮಹಾಲಿಂಗೇಶ್ವರ ಭಟ್.ಕೆ (ಶಿಶುಪಾಲ ) ಶ್ರೀಮತಿ ಪುಷ್ಪಾ ತಿಲಕ್(ಭೀಷ್ಮ ) ಸತೀಶ ಶಿರ್ಲಾಲ್ (ಭೀಮ )ಹರೀಶ ಆಚಾರ್ಯ ಬಾರ್ಯ(ಅರ್ಜುನ )ದಿವಾಕರ ಆಚಾರ್ಯ ಗೇರುಕಟ್ಟೆ (ಬಾಹ್ಲಿಕನ ಮಂತ್ರಿ )ಭಾಗವಹಿಸಿದ್ದರು.

ಪ್ರಾಯೋಜಕರಾದ ಭಾಗವತ ಸುರೇಶ್ ರಾವ್ ಬನ್ನೆಂಗಳ, ಆಶಾರಾವ್ ಇವರನ್ನು ಯಕ್ಷಗಾನ ಸಂಘದ ವತಿಯಿಂದ ಗೌರವಿಸಲಾಯಿತು. ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ, ಪೆರಿಯಡ್ಕ ಸಾಂಸ್ಕೃತಿಕ ಕಲಾವೇದಿಕೆ ಅಧ್ಯಕ್ಷ ಮಹಾಲಿಂಗೇಶ್ವರ ಭಟ್. ಕೆ ಉಪನ್ಯಾಸಕ ಗುಡ್ಡಪ್ಪ ಬಲ್ಯಉಪಸ್ಥಿತರಿದ್ದರು.

ಸಂಜೀವ ಪಾರೆಂಕಿ ಸನ್ಮಾನಿತರಿಗೆ ಶುಭಹಾರೈಸಿದರು. ರೋಟೆರಿಯನ್ ರವೀಂದ್ರ ದರ್ಬೆ ಸನ್ಮಾನ ಪತ್ರ ವಾಚಿಸಿದರು. ತಾಳಮದ್ದಳೆಯಲ್ಲಿ ಭಾಗವಹಿಸಿದ ಕಲಾವಿದರನ್ನುಶಾಲು, ಸ್ಮರಣಿಕೆ  ನೀಡಿ ಸುರೇಶ್ ರಾವ್ ಗೌರವಿಸಿದರು. ಸಂಘದ ಕಾರ್ಯದರ್ಶಿ ಶ್ರೀಪತಿ ಭಟ್ ಸ್ವಾಗತಿಸಿ ಹರೀಶ್ ಆಚಾರ್ಯ ಬಾರ್ಯ ಕಾರ್ಯಕ್ರಮ ನಿರೂಪಿಸಿದರು.


Share News

Comments are closed.

Exit mobile version