ಪುತ್ತೂರು: ಇಲ್ಲಿನ ತೆಂಕಿಲ ವಿವೇಕಾನಂದ ಶಾಲಾ ಬಳಿ ಪುಷ್ಪಾ ಸ್ಕ್ವೇರ್ ಗುರುವಾರ ಸಂಜೆ ಉದ್ಘಾಟನೆಗೊಂಡಿತು.
ಪ್ರಗತಿಪರ ಕೃಷಿಕ ಸುಬ್ರಾಯ ನಾಯ್ಕ್ ಕೊಳಕೆಮಾರ್ ದೀಪ ಪ್ರಜ್ವಲಿಸಿದರು. ಮಂಗಳೂರು ಶಕ್ತಿ ಸಮೂಹ ಸಂಸ್ಥೆಗಳ ಡಾ. ಕೆ.ಸಿ. ನಾಯ್ಕ್ ಉದ್ಘಾಟಿಸಿದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಕಸಾಪ ಪುತ್ತೂರು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ವಿಜಯ ಸಾಮ್ರಾಟ್ ಸಂಸ್ಥಾಪಕ ಅಧ್ಯಕ್ಷ ಸಹಜ್ ರೈ ಬಳಜ್ಜ, ಹರಿಕೃಷ್ಣ ಪಾಣಾಜೆ, ರೋಟರಿ ಯುವ ಅಧ್ಯಕ್ಷ ಕುಸುಮ್ ರಾಜ್ ಮೊದಲಾದವರು ಉಪಸ್ಥಿತರಿದ್ದರು.
ನಿಧಿ ಎಂ.ಯು. ಪ್ರಾರ್ಥಿಸಿದರು. ವಾಣಿಜ್ಯ ಸಂಕೀರ್ಣದ ಮಾಲಕ ಅಭಿಜಿತ್ ಕೊಳಕೆಮಾರು ಸ್ವಾಗತಿಸಿದರು. ಅಭೀಷ್ ಕೊಳಕೆಮಾರು ವಂದಿಸಿದರು. ರಾಜೇಶ್ ಬೆಜ್ಜಂಗಳ ಕಾರ್ಯಕ್ರಮ ನಿರೂಪಿಸಿದರು.