ವಿಟ್ಲ: ರೀಫಿಲ್ಗೆ ಇಟ್ಟಿದ್ದ ಗ್ಯಾಸ್ ಸಿಲಿಂಡರ್ನ್ನು ಹಗಲು ಹೊತ್ತಿನಲ್ಲೇ ಕಳ್ಳರು ಎಗರಿಸಿದ ಘಟನೆ ವಿಟ್ಲ ಸಮೀಪದ ಕುಂಡಡ್ಕ ಹಡೀಲು ಎಂಬಲ್ಲಿ ನಡೆದಿದೆ. ಆರೋಪಿಯನ್ನು ಇಡ್ತಿದು ಒಡ್ಯಡ್ಕ ನಿವಾಸಿ ಅಶ್ರಫ್ ಯಾನೆ ಅಚ್ಚುಕು ಎಂದು ಗುರುತಿಸಲಾಗಿದೆ.
ಹಡೀಲು ನಿವಾಸಿ ಪ್ರವೀಣ್ ಎಂಬವರ ಮನೆಯಲ್ಲಿ ರೀಫಿಲ್ಗೆ ಇಟ್ಟಿದ್ದ ಗ್ಯಾಸ್ ಸಿಲಿಂಡನ್ನು ಕಳ್ಳರು ಹಗಲು ಹೊತ್ತಿನಲ್ಲೇ ಕದ್ದು ಪರಾರಿಯಾಗಿದ್ದು, ಸಿಸಿ ಕ್ಯಾಮೆರಾದಲ್ಲಿ ಕಳ್ಳತನದ ದೃಶ್ಯ ಸೆರೆಯಾಗಿದೆ. ಕೂಡಲೇ ಸಾರ್ವಜನಿಕರು ಕಳ್ಳರ ಹಾದಿಯನ್ನು ಬೆನ್ನುಹತ್ತಿ ಬೇರಿಕೆ ಬಳಿ ಕಳ್ಳರನ್ನು ಅಡ್ಡಗಟ್ಟಿ ವಿಚಾರಿಸಿದ್ದಾರೆ. ಈ ವೇಳೆ ಸಾಕ್ಷಿ ಸಮೇತ ಖದೀಮರು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದು, ಕೂಡಲೇ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ವಿಟ್ಲ ಠಾಣಾ ಪೊಲೀಸರು ಆರೋಪಿ ಅಶ್ರಫ್ ಯಾನೆ ಅಚೂಕು ಸಹಿತ ಕಳವಾದ ಗ್ಯಾಸ್ ಸಿಲಿಂಡರ್ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈತನೊಂದಿಗೆ ಇನ್ನೊಬ್ಬ ಆಟೋ ಚಾಲಕನೂ ಇದ್ದ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದು, ಈತ ಪರಾರಿಯಾಗಿದ್ದಾನೆ.