Thursday, November 21
Share News

ಪುತ್ತೂರು: ಉಪ್ಪಿನಂಗಡಿ uppinangady ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಮಹಾಭಾರತ ಸರಣಿಯಲ್ಲಿ ಅಕ್ಷಯಪಾತ್ರೆ ಪ್ರದಾನ ಮತ್ತು ಕಿಮ್ಮೀರ ವಧೆ ತಾಳಮದ್ದಳೆ ಭಾನುವಾರ ಜರಗಿತು.

ಭಾಗವತರಾಗಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಪದ್ಮನಾಭ ಕುಲಾಲ್, ಹರೀಶ ಆಚಾರ್ಯ ಬಾರ್ಯ ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಗುರುಮೂರ್ತಿ ಅಮ್ಮಣ್ಣಾಯ ಅರ್ಥಧಾರಿಗಳಾಗಿ ಅಂಬಾ ಪ್ರಸಾದ ಪಾತಾಳ (ಧರ್ಮರಾಯ, ದ್ರೌಪದೀ), ಹರೀಶ್ ಆಚಾರ್ಯ ಉಪ್ಪಿನಂಗಡಿ (ಭೀಮ), ಸಂಜೀವ ಪಾರೆಂಕಿ ( ಧೌಮ್ಯ), ದಿವಾಕರ ಆಚಾರ್ಯ ಗೇರುಕಟ್ಟೆ (ಮೈತ್ರೇಯ), ಶ್ರೀಧರ ಯಸ್. ಪಿ (ಕೌರವ, ಶ್ರೀ ಕೃಷ್ಣ,ಸೂರ್ಯ), ಜಯರಾಮ ಬಲ್ಯ (ಕಿಮ್ಮೀರ), ಪ್ರದೀಪ್ ಆಚಾರ್ಯ (ಬ್ರಾಹ್ಮಣರು) ಭಾಗವಹಿಸಿದ್ದರು.

ಗೀತಾ ಕುದ್ದಣ್ಣಾಯ ಕಾರ್ಯಕ್ರಮದ ಪ್ರಾಯೋಜಕರಾಗಿದ್ದರು.


Share News

Comments are closed.

Exit mobile version