Browsing: land slide

ಭೂಕುಸಿತ ಸಂಭವಿಸಿದ ಶಾಂತಿನಗರ ನಿವಾಸಿ ವಿಶ್ವನಾಥ ನಾಯ್ಕರ ಮನೆಗೆ ಕೊಂಬೆಟ್ಟು ಮರಾಟಿ ಯುವ ವೇದಿಕೆಯ ಕಾರ್ಯಕಾರಿ ಸಮಿತಿಯ ಸದಸ್ಯರು ಭೇಟಿ ನೀಡಿ ಅವಘಡದ ಗಂಭೀರತೆಯನ್ನು ಪರಿಶೀಲಿಸಿದರು.

Read More

ಬೆಂಗಳೂರು : ಈಗಾಗಲೇ ಸಕಲೇಶಪುರ – ಬಾಳ್ಳುಪೇಟೆ ನಡುವೆ ರೈಲು ಹಳಿಗಳ ಮೇಲೆ ಭೂ ಕುಸಿತ ಉಂಟಾದ ಪರಿಣಾಮ ಐದು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು. ಅಲ್ಲದೇ ಎರಡು ರೈಲುಗಳ ವೇಳೆ ಕಡಿತ, ಮತ್ತೆರಡು ರೈಲುಗಳ ಸಂಚಾರ ಮಾರ್ಗವನ್ನು ಬದಲಿಸಲಾಗಿತ್ತು. ಈ ಬೆನ್ನಲ್ಲೇ ಮತ್ತೆ 10 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

Read More

34 ನೆಕ್ಕಿಲಾಡಿಯ ಆನೆಬೈಲು ಬಳಿಯ ಉಡ್ಲದಕೋಡಿ ಎಂಬಲ್ಲಿ ಮನೆಯ ಮೇಲೆ ಗುಡ್ಡ ಕುಸಿದು ಬಿದ್ದಿದ್ದು, ಮನೆಮಂದಿ ಅಪಾಯದಿಂದ ಪಾರಾಗಿದ್ದಾರೆ. ವಾಹನಗಳು ಮಣ್ಣಿನಡಿ ಸಿಲುಕಿ ಜಖಂಗೊಂಡಿವೆ.

Read More

ಸೋಮವಾರ ರಾತ್ರಿ ಬೆಚ್ಚಗೆ ಮಲಗಿದ್ದವರಿಗೆ ಇಂತಹದ್ದೊಂದು ಭೀಕರ ಘಟನೆ ನಡೆದು ಹೋಗುತ್ತದೆ ಎಂಬ ಅರಿವು ಇರಲು ಸಾಧ್ಯವೇ ಇರಲಿಲ್ಲ. ಅಷ್ಟು ಸಮೃದ್ಧವಾಗಿ ಬೆಳೆದು ನಿಂತ ಸಸ್ಯಶ್ಯಾಮಲೆಯ ಮಡಿಲು ವಯನಾಡು. ಆದರೆ, ಇಂದು ದೇಹದ ಒಂದು ಭಾಗದ ಚರ್ಮವನ್ನು ಕಿತ್ತು ತೆಗೆದಂತಹ ಚಿತ್ರಣ ನಮ್ಮ ಮುಂದಿದೆ.

Read More

ಪುತ್ತೂರು: ಶಿರಾಡಿ ಘಾಟಿನ ಮಾರೇನಹಳ್ಳಿಯಲ್ಲಿ ಮತ್ತೆ ಭಾರೀ ಭೂಕುಸಿತ ಸಂಭವಿಸಿದೆ.

ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿರುವ ಶಿರಾಡಿ ಘಾಟ್ ರಸ್ತೆ, ಇದೀಗ ಮತ್ತೆ ಭೂಕುಸಿತಕ್ಕೆ ಒಳಗಾಗಿದೆ. ಮಾರೇನಹಳ್ಳಿಯಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದಾಗಿ ಹಲವು ವಾಹನಗಳು ಮಣ್ಣಿನಡಿ ಸಿಲುಕಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ವಿವರ ಇನ್ನಷ್ಟೇ ಲಭ್ಯವಾಗಿದೆ.

ಹೀಗೆ ಸಂಚರಿಸಿ:

ಮಂಗಳೂರು – ಬೆಂಗಳೂರು ಸಂಚಾರಕ್ಕೆ ಇದೀಗ ಶಿರಾಡಿ ಸಂಪೂರ್ಣ ಬಂದ್ ಆಗಿದೆ. ಆದ್ದರಿಂದ ತುರ್ತು ತೆರಳುವವರು ಸಂಪಾಜೆ – ಮಡಿಕೇರಿಯಾಗಿ ಅಥವಾ ಬೆಳ್ತಂಗಡಿ – ಚಾರ್ಮಾಡಿ ಘಾಟ್ ರಸ್ತೆಯ ಮೂಲಕ ತೆರಳಬಹುದು ಎಂದು ಮಾಹಿತಿ ಲಭ್ಯವಾಗಿದೆ.

Read More