Thursday, November 21
Share News

ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಬೈಯ್ಯುವವರೇ ಹೆಚ್ಚು. ಆದರೆ ಇದೀಗ ಆತ್ಮಹತ್ಯೆಗೆ ಯಂತ್ರವನ್ನೇ ಆವಿಷ್ಕರಿಸಲಾಗಿದೆ.

ಹೌದು, ಸ್ವಿಟ್ಜರ್ಲೆಂಡ್ ಇಂತಹ ಯಂತ್ರವೊಂದನ್ನು ಆವಿಷ್ಕರಿಸಿದೆ. ಈ ಯಂತ್ರದ ಸಹಾಯದಿಂದ ಒಂದೇ ನಿಮಿಷದಲ್ಲಿ ನೋವಿಲ್ಲದೇ ಸಾಯಬಹುದಂತೆ. ಶೀಘ್ರದಲ್ಲೇ ಇದು ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನು ಓದಿ: ಕಾರ್ಗಿಲ್ ಬೆಟ್ಟದ ಮೇಲಿನ ರಣರೋಚಕ ಯುದ್ಧದ ಚಿತ್ರಣ ಬಿಚ್ಚಿಟ್ಟ ಕಾರ್ಗಿಲ್ ಹುಲಿ, ಸೇನಾ ಪದಕ ಪುರಸ್ಕೃತ ಕ್ಯಾ. ನವೀನ್ ನಾಗಪ್ಪ

ಈ ಆತ್ಮಹತ್ಯಾ ಯಂತ್ರದ ಬಳಕೆಗೆ ಸ್ವಿಟ್ಜರ್ಲೆಂಡ್ ಸರ್ಕಾರ ಅನುಮೋದನೆ ನೀಡಿದೆ. ಸಾರ್ಕೋ ಎಂಬ ಸಂಸ್ಥೆ ಈ ಯಂತ್ರವನ್ನು ಆವಿಷ್ಕರಿಸಿದೆ.

2019ರಲ್ಲೇ ಈ ಯಂತ್ರದ ಆವಿಷ್ಕಾರ ನಡೆದಿತ್ತು. ಇದೀಗ ಇನ್ನಷ್ಟು ಆಧುನಿಕತೆಯೊಂದಿಗೆ ಅಪ್ ಡೇಟ್ ಮಾಡಲಾಗಿದೆ.

ಮನುಷ್ಯನಿಗೆ ಆಮ್ಲಜನಕ ತುಂಬಾ ಅವಶ್ಯಕ. ಆದರೆ ಸಾಯಲೆಂದು ಬರುವ ವ್ಯಕ್ತಿ ಗುಂಡಿ ಅದುಮಿದೊಡನೆ, ಆಮ್ಲಜನಕದ ಬದಲು ನೈಟ್ರೋಜನ್ ಬಿಡುಗಡೆ ಆಗುತ್ತದೆ. ಇದರಿಂದ ವ್ಯಕ್ತಿ ಆಕ್ಸಿಜನ್ ಸಿಗದೇ ಹೈಪೋಕ್ಸಿಯಾದಿಂದ ಕೇವಲ ಒಂದೇ ನಿಮಿಷದಲ್ಲಿ ಪ್ರಾಣ ಬಿಡುತ್ತಾನೆ ಎಂದು ಸಂಸ್ಥೆ ಹೇಳಿಕೊಂಡಿದೆ.


Share News

Comments are closed.

Exit mobile version