pashupathi
ಸ್ಥಳೀಯ

ಫೆ. 1: ಆಯುರ್ ಬ್ಯೂಟಿ ಸೆಂಟರಿನಿಂದ 30 ಗರ್ಭಿಣಿಯರ ಮಡಿಲು ತುಂಬುವ ಕಾರ್ಯಕ್ರಮ

tv clinic
ಆಯುರ್ ಬ್ಯೂಟಿ ಸೆಂಟರ್ ವತಿಯಿಂದ 30 ಗರ್ಭಿಣಿಯರ ಮಡಿಲು ತುಂಬುವ ಕಾರ್ಯಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕಳೆದ 12 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಆಯುರ್ ಬ್ಯೂಟಿ ಸೆಂಟರ್ ಸಂಭ್ರಮದ ಸವಿ ನೆನಪಿಗಾಗಿ ಆಯ್ದ 30 ಮಂದಿ ಗರ್ಭಿಣಿಯರಿಗೆ ಮಡಿಲು ತುಂಬಿಸುವ ಕಾರ್ಯಕ್ರಮವನ್ನು ಫೆ.1ರಂದು ಮುಕ್ರಂಪಾಡಿ ಸುಭದ್ರಾ ಕಲಾ ಮಂದಿರದಲ್ಲಿ ನಡೆಸಲಿದೆ ಎಂದು ಸಂಸ್ಥೆಯ ಮುಖ್ಯಸ್ಥೆ ವಸಂತಲಕ್ಷ್ಮೀ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಾನು ಮುಕ್ರಂಪಾಡಿಯಲ್ಲಿ ಕಳೆದ 12 ವರ್ಷಗಳಿಂದ ಆಯುರ್ ಬ್ಯೂಟಿ ಸೆಂಟರ್ ನಡೆಸಿಕೊಂಡು ಬರುತ್ತಿದ್ದೇನೆ. ವೃತ್ತಿಯಲ್ಲಿ ಪರಿಣತಿ ಪಡೆದು ಹೊಸ ಮೈಲುಗಲ್ಲು ಸ್ಥಾಪಿಸಿದ ಸಂದರ್ಭದಲ್ಲಿ ಸಮಾಜ ಸೇವೆಯ ಅಂಗವಾಗಿ ಆರ್ಥಿಕವಾಗಿ ಹಿಂದುಳಿದ 12 ಮಂದಿ ಯುವತಿಯರಿಗೆ 10 ದಿನಗಳ ಉಚಿತ ಸೌಂದರ್ಯ ತರಬೇತಿಯನ್ನು ನೀಡಲಾಗಿದೆ. ಇದರ ಜೊತೆಗೆ ಆಯ್ದ 30 ಮಂದಿ ಗರ್ಭಿಣಿಯರಿಗೆ ಸೀರೆಯನ್ನು ಕೊಡುವ ಮೂಲಕ ಮಡಿಲು ತುಂಬಿಸುವ ಕಾರ್ಯಕ್ರಮವನ್ನು ಆಯೋಜಿಸಿಕೊಳ್ಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆ “ಬೇಟಿ ಪಡಾವೋ ಬೇಟಿ ಬಚಾವೋ ಕಾರ್ಯಕ್ರಮಕ್ಕೆ ಹತ್ತು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸಮಾಜಕ್ಕೆ ಅಳಿಲ ಸೇವೆ ನೀಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಬೆಳಗಾಂನ ಸಮಾಜ ಸೇವಕಿ, ಕೆಎಲ್‌ಇ ಮಹಾವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ ನ ಆಜೀವ ಸದಸ್ಯೆ ಜಯಶ್ರೀ ಚುನಮರಿ, ಬಿಜೆಪಿ ಮಹಿಳಾ ಮೋರ್ಚಾದ ಪ್ರಮುಖರು, ಇನ್ನಿತರ ಗಣ್ಯರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.

ವಸಂತಲಕ್ಷ್ಮೀಯವರ ಪತಿ ನ್ಯಾಯವಾದಿ ಶಶಿಧರ ಬಿ.ಎನ್, ಆಶಾ ಭಗವಾನ್, ರಜತಾ ಗಿರೀಶ್ ಹಾಗೂ ಕೃಷ್ಣಮಾಲ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಜು.24(ನಾಳೆ): ಜರ್ನಲಿಸ್ಟ್ ಯೂನಿಯನ್‌ನಿಂದ ಪತ್ರಿಕಾ ದಿನಾಚರಣೆ-ಹಿರಿಯ ಪತ್ರಕರ್ತ ಡಾ. ನರೇಂದ್ರ ರೈ ದೇರ್ಲರಿಗೆ ಸನ್ಮಾನ

ಪುತ್ತೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ಪತ್ರಿಕಾ…

1 of 116