Gl harusha
ಸ್ಥಳೀಯ

ಯುವ ಒಕ್ಕಲಿಗ ಗೌಡ ಸೇವಾ ಸಂಘದ ಪುತ್ತೂರು ತಾಲೂಕು ಮಟ್ಟದ ಕ್ರೀಡಾ ಸಂಭ್ರಮ”

ಯುವ ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಫೆ. 2ರಂದು ತಾಲೂಕು ಮಟ್ಟದ ಕ್ರೀಡಾ ಕೂಟವನ್ನು ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಅಮರನಾಥ ಗೌಡ ಬಪ್ಪಳಿಗೆ ಹೇಳಿದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಯುವ ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಫೆ. 2ರಂದು ತಾಲೂಕು ಮಟ್ಟದ ಕ್ರೀಡಾ ಕೂಟವನ್ನು ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಅಮರನಾಥ ಗೌಡ ಬಪ್ಪಳಿಗೆ ಹೇಳಿದರು.

srk ladders
Pashupathi
Muliya

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಕ್ರೀಡಾ ಕೂಟವನ್ನು ಮುಂಡೂರು ವಲಯದವರು ಪ್ರಾಯೋಜಕತ್ವವನ್ನು ವಹಿಸಿಕೊಂಡಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಬೆಳಗ್ಗೆ ಗಂಟೆ 7ಕ್ಕೆ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಿಂದ ಕೀಡೆ ನಡೆಯುವ ಸಾಂದೀಪನಿ ವಿದ್ಯಾ ಸಂಸ್ಥೆ ತನಕ ಕ್ರೀಡಾಜ್ಯೋತಿ ತೆರಳಲಿರುತ್ತದೆ. ಆ ನಂತರ ಕ್ರೀಡಾಂಗಣ ಉದ್ಘಾಟನೆಯು ಬೆಳಗ್ಗೆ ಗಂಟೆ 8.45ಕ್ಕೆ ಆಗಲಿದ್ದು, ಉದ್ಘಾಟನೆಯನ್ನು ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆ ಸಂಚಾಲಕ ಭಾಸ್ಕರ ಆಚಾರ್ ಹಿಂದಾರು ವಹಿಸಲಿದ್ದಾರೆ. ಬೆಳಗ್ಗೆ 11.30ಕ್ಕೆ ಸಭಾ ಕಾರ್ಯಕ್ರಮವು ನಡೆಯಲಿದ್ದು. ಈ ಸಂದರ್ಭದಲ್ಲಿ ಮಂಗಳೂರು ಆದಿಚುಂಚನಗಿರಿ ಶಾಖಾ ಮಠದ  ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ಆರ್ಶೀವಚನ ನೀಡಲಿದ್ದಾರೆ. ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ಸಂಜೀವ ಮಠಂದೂರು ಭಾಗವಹಿಸಲಿರುತ್ತಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೆನ್ನಪ್ಪ ಗೌಡ ಕೋಲಾಡಿ ವಹಿಸಲಿದ್ದಾರೆ ಎಂದರು.

ಸಾಯಂಕಾಲ ಗಂಟೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಇದರ ಅಧ್ಯಕ್ಷತೆಯನ್ನು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮೋಹನ ಗೌಡ ಇಡ್ಯಡ್ಕ ಹಾಗೂ ಇತರ ಗಣ್ಯ ವ್ಯಕ್ತಿಗಳು ಭಾಗವಹಿಸಲಿರುತ್ತಾರೆ. ಸುಮಾರು 600 ಕ್ರೀಡಾ ಪಟುಗಳಿಂದ ವಿವಿಧ ಕ್ರೀಡಾ ಕಾರ್ಯಕ್ರಮಗಳ ನಡೆಯಿರುತ್ತದೆ ಎಂದು ವಿವರಿಸಿದರು.

ಪ್ರತಿಕಾ ಗೋಷ್ಠಿಯಲ್ಲಿ ಪುರುಷೋತ್ತಮ ಮುಂಗ್ಲಿಮನೆ, ಆನಂದ ಗೌಡ ತೆಂಕಿಲ, ಚೆನ್ನಪ್ಪ ಗೌಡ, ಮೋಹನ್ ಜಿ. ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಸುಬ್ರಹ್ಮಣ್ಯಕ್ಕೆ ದಿನದ 3 ಹೊತ್ತು ರೈಲು ಸೇವೆ| ಮಂಗಳೂರು – ಪುತ್ತೂರು ರೈಲು ಓಡಾಟ ವಿಸ್ತರಣೆ: ಬದಲಾದ ಸಮಯ ಹೀಗಿದೆ

ಮಂಗಳೂರು-ಕಬಕ ಪ್ಯಾಸೆಂಜ‌ರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ