pashupathi
ರಾಜಕೀಯಸ್ಥಳೀಯ

ಎಸ್ಸೆಸ್ಸೆಫ್ ಸಂಪ್ಯ ಯುನಿಟ್ ಅಧ್ಯಕ್ಷರಾಗಿ ಕಾಮಿಲ್ ಮದನಿ, ಕಾರ್ಯದರ್ಶಿಯಾಗಿ ಝುಬೈರ್ ಆಯ್ಕೆ

tv clinic
ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಎಸ್ಸೆಸ್ಸೆಫ್ ಇದರ ಸಂಪ್ಯ ಶಾಖೆಯ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಜನವರಿ 2ರಂದು ಸಂಪ್ಯ ತಾಜುಲ್ ಉಲಮಾ ಮಂಝಿಲ್ ನಲ್ಲಿ ನಡೆಯಿತು. 

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ಎಸ್ಸೆಸ್ಸೆಫ್ ಇದರ ಸಂಪ್ಯ ಶಾಖೆಯ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಜನವರಿ 2ರಂದು ಸಂಪ್ಯ ತಾಜುಲ್ ಉಲಮಾ ಮಂಝಿಲ್ ನಲ್ಲಿ ನಡೆಯಿತು. 

akshaya college

ಯೂನಿಟ್ ಅಧ್ಯಕ್ಷ ಕಾಮಿಲ್ ಮದನಿ ಸಭಾಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯನ್ನು ಎಸ್.ವೈ.ಎಸ್ ಸಂಪ್ಯ ಯೂನಿಟ್ ಉಪಾಧ್ಯಕ್ಷ ಮೂಸ ಮದನಿ ಉದ್ಘಾಟಿಸಿ ಶುಭಹಾರೈಸಿದರು. ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ನಿಂದ ವೀಕ್ಷಕರಾಗಿ ಆಗಮಿಸಿದ  ಝುಬೈರ್ ಬನ್ನೂರು ರವರ ನೇತೃತ್ವದಲ್ಲಿ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಬಿ.ಕೆ ಕಾಮಿಲ್ ಮದನಿ, ಪ್ರಧಾನ ಕಾರ್ಯದರ್ಶಿಯಾಗಿ ಝುಬೈರ್, ಕೋಶಾಧಿಕಾರಿಯಾಗಿ ಬಿ.ಕೆ ಸ್ವಾದಿಕ್ ಅಲಿ, ದಅವಾ ಕಾರ್ಯದರ್ಶಿಯಾಗಿ ನೌಷಾದ್ ಹಿಮಮಿ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಬಾಸಿಲ್, ರೈಂಬೋ ಕಾರ್ಯದರ್ಶಿಯಾಗಿ ಮಿಕ್ದಾದ್ ಆಯ್ಕೆಯಾದರು.

ಕಾರ್ಯಕ್ರಮದಲ್ಲಿ ಎಸ್.ವೈ.ಎಸ್ ಯೂನಿಟ್ ಅಧ್ಯಕ್ಷರಾದ ಕೆ.ಎಂ.ಎಚ್ ಝುಹುರಿ ಕೊಂಬಾಳಿ, ಕೆ.ಎಂ.ಜೆ ಪುತ್ತೂರು ನಾಯಕರಾದ ಇಸ್ಮಾಯಿಲ್ ಹಾಜಿ ಕೊಂಬಾಳಿ, ಯೂನಿಟ್ ಪ್ರ.ಕಾರ್ಯದರ್ಶಿ ರಝಾಕ್ ವಾಗ್ಲೆ, ನಾಯಕರಾದ ಅಬ್ದುಲ್ ಹಮೀದ್ ರೆಂಜ, ಎಸ್.ವೈ.ಎಸ್ ಯೂನಿಟ್ ಪ್ರ.ಕಾರ್ಯದರ್ಶಿ ಅಝೀಝ್ ಕಲ್ಲರ್ಪೆ, ಕೋಶಾಧಿಕಾರಿ ಅಶ್ರಫ್ ಕಲ್ಲರ್ಪೆ ಮೊದಲಾದವರು  ಉಪಸ್ಥಿತರಿದ್ದರು.

ಕಾರ್ಯದರ್ಶಿ ಝುಬೈರ್ ಸ್ವಾಗತಿಸಿ ವಂದಿಸಿದರು.

ಇದೇ ಸಂದರ್ಭದಲ್ಲಿ ಕೆಎಂಜೆ, ಎಸ್.ವೈ.ಎಸ್ ಸಂಪ್ಯ ಇದರ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 120