ಪುತ್ತೂರು: ವಿಶೇಷ ಚೇತನರ ಕಾರ್ಯದಲ್ಲಿ ತೊಡಗಿರುವ ವಿಶೇಷ ಚೇತನ ವ್ಯಕ್ತಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ರವೀಂದ್ರ ಅವರನ್ನು ಪುತ್ತೂರು ರೋಟರ್ಯಾಕ್ಟ್ ಕ್ಲಬ್ ವಾರದ ಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ರೋಟರಿ ಕ್ಲಬ್ ಪುತ್ತೂರು ಇದರ ಕಾರ್ಯದರ್ಶಿ ದಾಮೋದರ್, ಯುವಜನ ಸೇವಾ ನಿರ್ದೇಶಕಿ ಪ್ರೀತಾ ಹೆಗ್ಡೆ ಮುಖ್ಯ ಅತಿಥಿಗಳಾಗಿದ್ದರು.
ಇದೇ ಸಂದರ್ಭ ರೋಟರ್ಯಾಕ್ಟ್ ಸದಸ್ಯರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಪಿ.ವಿ ಸುಬ್ರಮಣಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ವಿಶಾಲ್, ಸಮುದಾಯ ಅಭಿವೃದ್ಧಿ ನಿರ್ದೇಶಕ ಪುರುಷೋತ್ತಮ, ಕಾರ್ಯಕ್ರಮ ಸಂಘಟಕ ನವೀನ್ ಚಂದ್ರ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕೋಶಾಧಿಕಾರಿ ಶಶಿಧರ್ ಕೆ. ಮಾವಿನಕಟ್ಟೆ ಕಾರ್ಯಕ್ರಮ ನಿರೂಪಿಸಿದರು.