ಸ್ಥಳೀಯ

ಮಂಗಳೂರು ನಿವೃತ್ತ ಎಸ್.ಐ. ಗಡಿನಾಡ ಕನ್ನಡಿಗ ವಾಸುದೇವ ಬಟ್ಟತ್ತೂರು ನಿಧನ

ಮಂಗಳೂರಿನಲ್ಲಿ ಸುದೀರ್ಘಕಾಲ ಪೋಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ಎಸ್.ಐ ಆಗಿ ನಿವೃತ್ತರಾಗಿದ್ದ, ಗಡಿನಾಡ ಕನ್ನಡಿಗ ವಾಸುದೇವ ಬಟ್ಟತ್ತೂರು (75) ನಿಧನರಾದರು. 

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರಿನಲ್ಲಿ ಸುದೀರ್ಘಕಾಲ ಪೋಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ಎಸ್.ಐ ಆಗಿ ನಿವೃತ್ತರಾಗಿದ್ದ, ಗಡಿನಾಡ ಕನ್ನಡಿಗ ವಾಸುದೇವ ಬಟ್ಟತ್ತೂರು (75) ನಿಧನರಾದರು. ನಿವೃತ್ತಿಯ ಬಳಿಕ ಕಾಸರಗೋಡಿನ ಪೊಯಿನಾಚಿ ಸಮೀಪದ ಪರಂಪರಾಗತ ಕೃಷಿಭೂಮಿಯಲ್ಲಿ ಕೃಷಿ ನಡೆಸುತ್ತಾ, ಮೂಲಜಾಗದಲ್ಲಿ ನೆಲೆಸಿದ್ದ ಅವರಿಗೆ ನಿನ್ನೆ ದಿಢೀರನೆ ಲಕ್ವಾ ಬಾಧಿಸಿದಾಗ ಕೂಡಲೇ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದರೂ ಇಂದು ಮಧ್ಯಾಹ್ನ ಅವರು ಹೃದಯಾಘಾತದಿಂದ ಮೃತಪಟ್ಟರು.

akshaya college

ನಿವೃತ್ತಿಯ ಅನಂತರ ತಾಯ್ಕೆಲ ತೊರೆಯದೇ ಹುಟ್ಟೂರಲ್ಲೇ ನೆಲೆಸಿದ್ದ ಅವರು ತರವಾಡು ದೇವಳ ಸಹಿತ ಊರಿನ ದೇವಾಲಯ ಕೈಂಕರ್ಯಗಳಲ್ಲಿ ಧಾರ್ಮಿಕವಾಗಿ ಸಕ್ರಿಯರಾಗಿದ್ದರು. ಪಾಲಕ್ಕುನ್ಸ್ ಮಹಾಲಿಂಗೇಶ್ವರ ದೇವಾಲಯ ಬ್ರಹ್ಮಕಲಶದಲ್ಲಿ ಸಕ್ರಿಯರಾಗಿ ದುಡಿದಿದ್ದ ಅವರು ಪಾಂಡುರಂಗ ದೇವಸ್ಥಾನದ ಅಧ್ಯಕ್ಷರಾಗಿದ್ದರು.

ಮೃತರ ಪತ್ನಿ ಸುಲೋಚನಾ ಈ ಹಿಂದೆಯೇ ಮೃತಪಟ್ಟಿದ್ದರು. ಮಕ್ಕಳಾದ ರವೀಂದ್ರನಾಥ್ (ವ್ಯಾಪಾರಿ), ನ್ಯಾಯವಾದಿ ವಿವೇಕಾನಂದ, ಸುನೀತಾ, ನಾಗವೇಣಿ (ಅಧ್ಯಾಪಿಕೆಯರು), ರಂಗನಾಥ, ನ್ಯಾಯವಾದಿ ಮಂಜುನಾಥ ಎಂಬಿವರನ್ನಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 107