Gl
ಕರಾವಳಿಸ್ಥಳೀಯ

ಉಳ್ಳಾಲ: ನೇತ್ರಾವತಿ ಸೇತುವೆಗೆ ಬೈಕ್‌ ಢಿಕ್ಕಿ: ವಿದ್ಯಾರ್ಥಿ ಮೃತ್ಯು!

GL
ಟಿಪ್ಪುನಗರ ನಿವಾಸಿ ಸಲ್ಮಾನ್ ಫಾರಿಶ್ ಮೃತ ದುರ್ದೈವಿ. ಸಹ ಸವಾರ ಮೊಹಮ್ಮದ್ ಶಕೀರ್ ಗಂಭೀರ ಗಾಯಗೊಂಡಿದ್ದು ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ನಿರ್ಲಕ್ಷ್ಯತನ ಮತ್ತು ಅತೀವೇಗದಿಂದ ಬೈಕ್‌ ಚಲಾಯಿಸಿದ ಪರಿಣಾಮ ಅಪಘಾತ.  ಬೈಕ್‌ ಸವಾರನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಮಹಾಕಾಳಿ ಪಡ್ಡು ಬಳಿ ನೇತ್ರಾವತಿ ಸೇತುವೆಯ ಬಳಿ ನಡೆದಿದೆ. ಶುಕ್ರವಾರ ಸಂಜೆ ಅಪಘಾತ ನಡೆದಿದ್ದು. ಸಹಸವಾರ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ.

core technologies

ಬಂಟ್ವಾಳ ತಾಲೂಕಿನ ಲೊರೆಟ್ಟೆಪದವು ಟಿಪ್ಪುನಗರ ನಿವಾಸಿ ಸಲ್ಮಾನ್ ಫಾರಿಶ್ ಮೃತ ದುರ್ದೈವಿ. ಸಹ ಸವಾರ ಮೊಹಮ್ಮದ್ ಶಕೀರ್ ಗಂಭೀರ ಗಾಯಗೊಂಡಿದ್ದು ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿ.ಸಿ.ರೋಡ್‌ ನಿವಾಸಿಗಳಾದ ಅವರಿಬ್ಬರು ಕೊಣಾಜೆಯ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು. ಅವರು ನಿನ್ನೆ ಸಂಜೆ ಕೊಣಾಜೆಯಿಂದ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ನೇತ್ರಾವತಿ ಸೇತುವೆ ಬಳಿ ವಾಹನ ಕಬ್ಬಿಣದ ತಗಡು ಶೀಟ್ ಗೆ ಢಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ.ಎಂದು ತಿಳಿದು ಬಂದಿದೆ.ಈ ಬಗ್ಗೆ ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 154