ಮಂಗಳೂರು: ಇಲ್ಲಿನ ಕ್ಯಾಥೋಲಿಕ್ ಕ್ರಿಶ್ಚಿಯನ್ ಪರವಾಗಿ ಮಂಗಳೂರು ಧರ್ಮಪ್ರಾಂತ್ಯದ ವತಿಯಿಂದ ಮಂಗಳಾದೇವಿ ರಾಮಕೃಷ್ಣ ಆಶ್ರಮಕ್ಕೆ ತೆರಳಿ ದೀಪಾವಳಿ ಶುಭಾಶಯ ಕೋರಲಾಯಿತು.
ಮಠದ ಸ್ವಾಮಿ ಶ್ರೀ ಜಿತಕಾಮಾನಂದಜಿ ಅವರನ್ನು ಭೇಟಿ ಮಾಡಿದ ಮಂಗಳೂರು ಜೆಪ್ಪು ಸಂತ ಅಂತೋನಿ ಆಶ್ರಮದ ನಿರ್ದೇಶಕರಾದ ವಂದನೀಯ ಫಾ. ಜೆ.ಬಿ. ಕ್ರಾಸ್ತಾ, ಕಥೋಲಿಕ್ ಸಭಾ ಕೇಂದ್ರೀಯ ಸಮಿತಿಯ ಅಧ್ಯಕ್ಷರಾದ ಆಲ್ವೀನ್ ಡಿಸೋಜಾ ಅವರು ಶುಭಾಶಯ ತಿಳಿಸಿದರು.



ಈ ಸಂದರ್ಭ ಪ್ರಮುಖರಾದ ಮಿಥುನ್ ಸಿಕ್ವೇರಾ, ಬಸವರಾಜ್, ಉದ್ಯಮಿ ಹಾಗೂ ಸಮಾಜ ಸೇವಕ ದಿಲ್ ರಾಜ್ ಆಳ್ವ, ಆಶ್ರಮದ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ರಂಜನ್ ಮೊದಲಾದವರು ಉಪಸ್ಥಿತರಿದ್ದರು.


























