ರಾಜ್ಯ ವಾರ್ತೆಸ್ಥಳೀಯ

97 ಕೋಟಿ ರೂ. ಸೈಬರ್ ವಂಚನೆ! | ಬ್ಯಾಂಕ್ ಮ್ಯಾನೇಜ‌ರ್ ಸೇರಿ 8 ಮಂದಿ ಬಂಧನ!!

ಸೈಬ‌ರ್ ವಂಚನೆಗೆ ಬ್ಯಾಂಕ್ ಖಾತೆಗಳನ್ನು ಮಾಡಿಕೊಟ್ಟು ಕೋಟ್ಯಾಂತರ ರೂ. ವಂಚನೆಗೆ ಸಹಕಾರ ಕೊಟ್ಟಿದ್ದ ಖಾಸಗಿ ಬ್ಯಾಂಕ್ ಮ್ಯಾನೇಜ‌ರ್ ಸೇರಿ 8 ಮಂದಿಯನ್ನು ಬಂಧಿಸುವಲ್ಲಿ ಬೆಂಗಳೂರು ನಗರ ಸೈಬ‌ರ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಸೈಬ‌ರ್ ವಂಚನೆಗೆ ಬ್ಯಾಂಕ್ ಖಾತೆಗಳನ್ನು ಮಾಡಿಕೊಟ್ಟು ಕೋಟ್ಯಾಂತರ ರೂ. ವಂಚನೆಗೆ ಸಹಕಾರ ಕೊಟ್ಟಿದ್ದ ಖಾಸಗಿ ಬ್ಯಾಂಕ್ ಮ್ಯಾನೇಜ‌ರ್ ಸೇರಿ 8 ಮಂದಿಯನ್ನು ಬಂಧಿಸುವಲ್ಲಿ ಬೆಂಗಳೂರು ನಗರ ಸೈಬ‌ರ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

akshaya college

ಬ್ಯಾಡರಹಳ್ಳಿಯ ಖಾಸಗಿ ಬ್ಯಾಂಕ್‌ ಮ್ಯಾನೇಜ‌ರ್ ಕಿಶೋ‌ರ್ ಸಾಹು, ಬ್ಯಾಂಕ್ ಸೇಲ್ಸ್ ಮ್ಯಾನೇಜರ್ ಮನೋಹ‌ರ್, ಸೇಲ್ಸ್ ಎಕ್ಸಿಕ್ಯುಟಿವ್‌ ಗಳಾದ ಕಾರ್ತಿಕ್, ರಾಕೇಶ್ ಬಂಧಿತರು. ಜೊತೆಗೆ ವಂಚನೆಗೆ ಬ್ಯಾಂಕ್‌ ಖಾತೆಗಳನ್ನು ನೀಡಿದ್ದ ರಘುರಾಜ್, ಕಾರ್ತಿಕ್, ಲಕ್ಷ್ಮಿಕಾಂತ, ಕೆಂಚೇಗೌಡ ಹಾಗೂ ಮಾಲಾ ಎಂಬಾಕೆಯನ್ನ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಬಲೆಗೆ ಬಿದ್ದಿದ್ದೇಗೆ?:

ಯಲಹಂಕದ ಉದ್ಯಮಿಯೊಬ್ಬರಿಗೆ ಷೇರು ಮಾರುಕಟ್ಟೆಯಲ್ಲಿ ದುಪ್ಪಟ್ಟು ಲಾಭ ಕೊಡಿಸುವುದಾಗಿ ಆಮಿಷವೊಡ್ಡಿದ್ದ ಸೈಬರ್ ವಂಚಕರು ವಿಐಪಿ ಟ್ರೇಡಿಂಗ್ ಹೆಸರಿನಲ್ಲಿ2024ರ ಮಾರ್ಚ್‌ನಿಂದ ಜೂನ್‌ವರೆಗೆ 1.5 ಕೋಟಿ ರೂ. ವಿವಿಧ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿಸಿಕೊಂಡಿದ್ದರು. ಈ ಹೂಡಿಕೆ ಮೊತ್ತಕ್ಕೆ 25 ಕೋಟಿ ರೂ.ಲಾಭ ಬಂದಿದ್ದು, ಅದರ ಸ್ಟೀನ್ ಶಾಟ್ ಹಂಚಿಕೊಂಡಿದ್ದರು. ಆದರೆ, ಈ ಹಣ ಡ್ರಾ ಮಾಡಲು 70 ಲಕ್ಷ ರೂ. ಪುನಃ ಜಮೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಇದರಿಂದ ಅನುಮಾನಗೊಂಡ ಉದ್ಯಮಿ ಸೈಬರ್ ಠಾಣೆಗೆ ದೂರು ನೀಡಿದ್ದರು.

ಈ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಉದ್ಯಮಿ ಹಣ ವರ್ಗಾಯಿಸಿದ್ದ ಬ್ಯಾಂಕ್‌ ಖಾತೆ ವಿವರಗಳನ್ನು ಸಂಗ್ರಹಿಸಿತ್ತು. ಈ ಪೈಕಿ ಆರು ಬ್ಯಾಂಕ್‌ ಖಾತೆಗಳು ಚಿಕ್ಕಮಗಳೂರಿನ ಮಾಲಾ ಮತ್ತಿತರರ ಹೆಸರಿನಲ್ಲಿದ್ದು, ಬ್ಯಾಡರಹಳ್ಳಿ ಶಾಖೆಯಲ್ಲಿ ತೆರೆದಿರುವುದು ಗೊತ್ತಾಗಿತ್ತು. ಜೊತೆಗೆ ಈ ಖಾತೆಗಳು ಸೈಬ‌ರ್ ವಂಚನೆಗೆ ಬಳಕೆಯಾದ ಖಾತೆಗಳ ಲಿಸ್ಟ್‌ನಲ್ಲಿದ್ದವು. ಇದರಿಂದ ಅನುಮಾನಗೊಂಡ ತನಿಖಾ ತಂಡ ಚಿಕ್ಕಮಗಳೂರಿನ ನಿವಾಸಿಗಳಿಗೆ ಅಲ್ಲಿ ಬ್ಯಾಂಕ್ ಶಾಖೆಯಿದ್ದರೂ ಬೆಂಗಳೂರಿನಲ್ಲಿ ಖಾತೆ ತೆರೆದಿದ್ದ ರಹಸ್ಯ ಭೇದಿಸಿದಾಗ ವಂಚನೆಗೆ ಬಳಸಲೆಂದೇ ಖಾತೆಗಳನ್ನು ಸೃಜಿಸಿರುವುದು ದೃಢಪಟ್ಟಿತ್ತು.

ಈ ಕುರಿತು ಸಾಕ್ಷಾಧಾರಗಳ ಸಮೇತ ಬ್ಯಾಂಕ್‌

ಮ್ಯಾನೇಜ‌ರ್ ಸೇರಿ ನಾಲ್ವರನ್ನು ಬಂಧಿಸಿದಾಗ

ಆರೋಪಿಗಳು ವಂಚನೆ ಕುರಿತು ಬಾಯ್ದಿಟ್ಟಿದ್ದರು.

ಬಳಿಕ ಬಾಡಿಗೆ ಖಾತೆಗಳನ್ನು ಸೃಜಿಸಿಕೊಟ್ಟು

ವಂಚನೆಗೆ ಸಹಕರಿಸಿದ್ದ ಮಾಲಾ ಸೇರಿದಂತೆ ಇತರ

ನಾಲ್ವರನ್ನು ಬಂಧಿಸಲಾಯಿತು. ಈ ಬಾಡಿಗೆ

ಖಾತೆಗಳಿಂದಲೇ ಸೈಬರ್ ವಂಚಕರು ದೇಶಾದ್ಯಂತ

254 ಸೈಬರ್ ವಂಚನೆ ಕೃತ್ಯಗಳನ್ನು ಎಸಗಿ 97

ಕೋಟಿ ರೂ. ವಂಚನೆ ಮಾಡಿ ಲಪಟಾಯಿಸಿದ್ದಾರೆ.

ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು

ವಿವರಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 130