ಸ್ಥಳೀಯ

ಸೆ. 3ಕ್ಕೆ ನಡೆಯಲಿದೆ ಪುತ್ತೂರು ನಗರಸಭೆ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ! ಇಬ್ಬರು ಪರಿಶಿಷ್ಟ ಜಾತಿ ಮಹಿಳೆಯರಲ್ಲಿ ಯಾರಿಗೆ ಒಲಿಯಲಿದೆ ಅಧ್ಯಕ್ಷ ಗಾದಿ?

ಪುತ್ತೂರು: ಎರಡನೇ ಅವಧಿಯ ಪುತ್ತೂರು ನಗರಸಭೆಯ ಅಧ್ಯಕ್ಷ ಗಾದಿಗೆ ಇಬ್ಬರು ಪರಿಶಿಷ್ಟ ಜಾತಿ ಮಹಿಳೆಯರ ನಡುವೆ ಪೈಪೋಟಿ ಏರ್ಪಟ್ಟಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಎರಡನೇ ಅವಧಿಯ ಪುತ್ತೂರು ನಗರಸಭೆಯ ಅಧ್ಯಕ್ಷ ಗಾದಿಗೆ ಇಬ್ಬರು ಪರಿಶಿಷ್ಟ ಜಾತಿ ಮಹಿಳೆಯರ ನಡುವೆ ಪೈಪೋಟಿ ಏರ್ಪಟ್ಟಿದೆ.

ಸೆ. 3ರಂದು ಚುನಾವಣೆ ನಿಗದಿಪಡಿಸಿ ಸಹಾಯಕ ಆಯುಕ್ತರಾದ ಜುಬಿನ್ ಮೊಹಪಾತ್ರ ಆದೇಶ ಹೊರಡಿಸಿದ್ದಾರೆ.

SRK Ladders

ಪರಿಶಿಷ್ಟ ಜಾತಿ ಮಹಿಳೆಗೆ ಅಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಗೊಂಡಿತ್ತು. ಹಾಗಾಗಿ ಈ ಕೋಟಾದಡಿ ಕೌನ್ಸಿಲರ್ ಗಳಾದ ಲೀಲಾವತಿ ಹಾಗೂ ಶಶಿಕಲಾ ಸಿ.ಎಚ್. ಸ್ಪರ್ಧೆಗೆ ಮುಂದೆ ಬಂದಿದ್ದಾರೆ.

ಲೀಲಾವತಿ ಎಸ್.ಟಿ. ಕೋಟಾದಡಿ ಚುನಾವಣೆ ಎದುರಿಸಿದ್ದರೂ ಹೊಸ ಮುಖ. ಇನ್ನು ಶಶಿಕಲಾ ಸಿ.ಎಚ್. ಅವರು ಕಳೆದ 25 ವರ್ಷಗಳಿಂದ ಬಿಜೆಪಿಯ ಸಕ್ರೀಯ ಕಾರ್ಯಕರ್ತೆ ಮಾತ್ರವಲ್ಲ ಕೌನ್ಸಿಲರ್ ಆಗಿ ಕೆಲಸ ನಿರ್ವಹಿಸಿದ ಅನುಭವಿ. ಆದರೆ ಇವರು ಚುಮಾವಣೆಯನ್ನು ಎದುರಿಸಿದ್ದು ಸಾಮಾನ್ಯ ಕೋಟಾದಡಿ ಎನ್ನುವುದು ಗಮನಿಸಬೇಕಾದ ಅಂಶ.

ಇನ್ನು ಉಪಾಧ್ಯಕ್ಷ ಹುದ್ದೆಗೆ ಸಾಮಾನ್ಯ ಮೀಸಲಾತಿ ಪ್ರಕಟಗೊಂಡಿದ್ದು, ಗಂಡಸರ ಪಾಲಾಗುವುದು ಬಹುತೇಕ ಫಿಕ್ಸ್. ಇದಕ್ಕಾಗಿ ಸುಂದರ ಪೂಜಾರು ಬಡಾವು ಅವರು ತಾನು ಆಕಾಂಕ್ಷಿ ಎಂದು ಈಗಾಗಲೇ ಹೇಳಿಕೊಂಡಿದ್ದರು. ಇದರೊಂದಿಗೆ ಪುಡಾ ಮಾಜಿ ಅಧ್ಯಕ್ಷ ಅಶೋಕ್ ಶೆಣೈ ಅವರ ಹೆಸರು ಕೇಳಿಬರುತ್ತಿದೆ.

ಒಟ್ಟಿನಲ್ಲಿ, ಹಲವು ಸಮಯಗಳ ಅಂತರದ ನಂತರವಾದರೂ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ಆಗುತ್ತಿದ್ದಾರೆ ಎನ್ನುವುದೇ ಸಮಾಧಾನದ ವಿಷಯ.

ಹೀಗೆ ನಡೆಯಲಿದೆ‌ ಚುನಾವಣೆ:

ಸೆ.3ರಂದು ಚುನಾವಣಾ ಪ್ರಕ್ರಿಯೆ ನಡೆಯಲಿದ್ದು, ಅಂದು ಮಧ್ಯಾಹ್ನ 12.30ರಿಂದ 1.30ರ ವರೆಗೆ ನಾಮಪತ್ರ ಸಲ್ಲಿಸಬಹುದು. ಮಧ್ಯಾಹ್ನ 2.30ರಿಂದ 3 ಗಂಟೆಯವರೆಗೆ ನಾಮಪತ್ರ ಪರಿಶೀಲನೆ, ಕಣದಲ್ಲಿರುವ ಅಭ್ಯರ್ಥಿಗಳ ಘೋಷಣೆ ಮಾಡಲಾಗುವುದು. ಬಳಿಕ ಚುನಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

31 ಸದಸ್ಯ ಸ್ಥಾನ ಹೊಂದಿರುವ ಪುತ್ತೂರು ನಗರ ಸಭೆಯಲ್ಲಿ ಬಿಜೆಪಿ 25 ಸದಸ್ಯ ಸ್ಥಾನ ಹೊಂದಿದ್ದು ಆ ಪಕ್ಷಕ್ಕೆ ಬಹುಮತವಿದೆ. ಜತೆಗೆ ಆ ಪಕ್ಷಕ್ಕೆ ಸಂಸದರ ಮತದ ಬೆಂಬಲವು ಇದೆ.

ಕಾಂಗ್ರೆಸ್ 5 ಮತ್ತು ಶಾಸಕರ ಒಂದು ಮತವು ಸೇರಿದಂತೆ ಒಟ್ಟು 6 ಮತಗಳನ್ನು ಹೊಂದಿದೆ.
ಎಸ್‌ಡಿಪಿಐ 1 ಸದಸ್ಯ ಬಲ ಹೊಂದಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2