ದೇಶಸ್ಥಳೀಯ

EOS-8 ಮಿಷನ್ ಯಶಸ್ವಿ ಉಡಾವಣೆ! ಇಸ್ರೋ ಉಡಾಯಿಸಿದ ಮಿಷನ್’ನಿಂದ ಪರಿಸರ ಮೌಲ್ಯಮಾಪನ ಸೇರಿದಂತೆ ಎಷ್ಟೊಂದು ಪ್ರಯೋಜನಗಳಿವೆ ಗೊತ್ತೇ?

ಇಸ್ರೋ ಇಂದು ತನ್ನ EOS-8 ಮಿಷನ್ ಉಡಾವಣೆ ಯಶಸ್ವಿಯಾಗಿ ನಡೆಸಿದೆ. ಭಾರತಕ್ಕೆ ಎದುರಾಗುವ ಅಪಾಯಗಳ ಎಚ್ಚರಿಕೆ ನೀಡಲು ಈ ಮಿಷನ್ ಉಡಾವಣೆಗೊಂಡಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಇಸ್ರೋ ಇಂದು ತನ್ನ EOS-8 ಮಿಷನ್ ಉಡಾವಣೆ ಯಶಸ್ವಿಯಾಗಿ ನಡೆಸಿದೆ. ಭಾರತಕ್ಕೆ ಎದುರಾಗುವ ಅಪಾಯಗಳ ಎಚ್ಚರಿಕೆ ನೀಡಲು ಈ ಮಿಷನ್ ಉಡಾವಣೆಗೊಂಡಿದೆ.

ಇಂದು ಬೆಳಿಗ್ಗೆ 9.19ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡಿದೆ. ಈ ಮಿಷನ್ನ ಉಡಾವಣೆಯನ್ನು ಯಾವ ಕಾರಣಕ್ಕಾಗಿ ಮಾಡಲಾಗಿದೆ. ಇದರ ಮುಖ್ಯ ಉದ್ದೇಶ ಏನು? ಇದರಿಂದ ಭೂಮಿಗೆ ಯಾವ ರೀತಿ ಪ್ರಯೋಜನವಾಗಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

SRK Ladders

ಇದು ಈ ಮಿಷನ್‌ನ ಮೂರನೇ ಮತ್ತು ಅಂತಿಮ ಅಭಿವೃದ್ಧಿಯ ಹಾರಾಟ. ಈ ಮಿಷನ್ನ ಉಡಾವಣೆ SSLVಯ ಅಭಿವೃದ್ಧಿಯ ಹಂತವನ್ನು ಸೂಚಿಸುತ್ತದೆ.

EOS-8 ಮಿಷನ್ 34-ಮೀಟರ್ ಅಡಿಯಿಂದ ಹಾರಾಟ ನಡೆಸಿದ್ದು ಹಾಗೂ 175.5 – ಕಿಲೋ ಗ್ರಾಂ ಭೂಮಿಯ ವೀಕ್ಷಣಾ ಉಪಗ್ರಹ ಹೊತ್ತುಕೊಂಡು ಉಡಾವಣೆಗೊಂಡಿದೆ. ಇದು ಎಲೆಕ್ಟ್ರೋ-ಆಪ್ಟಿಕಲ್ ಇನ್‌ಫ್ರಾರೆಡ್ ಪೇಲೋಡ್, ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ ರಿಫ್ಲೆಕ್ಟೋಮೆಟ್ರಿ ಪೇಲೋಡ್ ಮತ್ತು ಸಿಲಿಕಾನ್ ಕಾರ್ಬೈಡ್ ನೇರಳಾತೀತ ಡೋಸಿಮೀಟರ್ಗಳನ್ನು ಹೊಂದಿದೆ.

EOS-8 ಮಿಷನ್‌ನ ಮೊದಲು ಗುರಿ ಅಂದರೆ ವಿಜ್ಞಾನದ ಪ್ರಕಾರ ಇದರ ಪ್ರಾಥಮಿಕ ಉದ್ದೇಶ ಮೈಕ್ರೋಸ್ಯಾಟಲೈಟ್ ಅಭಿವೃದ್ಧಿ ಪಡಿಸುವುದು ಹಾಗೂ ಮೈಕ್ರೋಸ್ಯಾಟಲೈಟ್ ಉಪಕರಣಕ್ಕೆ ಹೊಂದಿಕೆಯಾಗುವ ಪೇಲೋಡ್ ಯಂತ್ರವನ್ನು ಅಳವಡಿಸುವುದು. ಈ ಮೂಲಕ ಭವಿಷ್ಯದ ಉಪಗ್ರಹಗಳಿಗಾಗಿ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಬೆಂಗಳೂರಿನಲ್ಲಿರುವ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಈ ಉಪಗ್ರಹವು ಭೂಮಿಯ ಮೇಲೆ ಒಂದು ಕಣ್ಗಾವಲು ಹಾಗೂ ಭೂಮಿಯ ಮೇಲೆ ಆಗುವ ವಿಪತ್ತು ಮೇಲ್ವಿಚಾರಣೆ, ಪರಿಸರ ಮೇಲ್ವಿಚಾರಣೆ ಮಾಡಿದ ಅದರ ಚಿತ್ರಗಳನ್ನು ಇಸ್ರೋ ಕಳುಹಿಸುತ್ತದೆ.

1. ಮೊದಲ ಪೇಲೋಡ್, EOIR, ಮಿಡ್-ವೇವ್ ಇನ್ಫ್ರಾರೆಡ್ (MWIR) ಮತ್ತು ಲಾಂಗ್-ವೇವ್ ಇನ್ಫ್ರಾರೆಡ್ (LWIR) ಬ್ಯಾಂಡ್‌ಗಳು ಹಗಲು ರಾತ್ರಿ ಎರಡೂ ಸಮಯಕ್ಕೂ ಚಿತ್ರಗಳನ್ನು ಸೆರೆಹಿಡಿಯುವಂತೆ ಇದನ್ನು ವಿನ್ಯಾಸ ಮಾಡಲಾಗಿದೆ. ಉಪಗ್ರಹ ಆಧಾರಿತ ಕಣ್ಗಾವಲು, ವಿಪತ್ತು ಮೇಲ್ವಿಚಾರಣೆ, ಪರಿಸರ ಮೌಲ್ಯಮಾಪನ, ಕಾಡುಗಿಚ್ಚು, ಜ್ವಾಲಾಮುಖಿ ಚಟುವಟಿಕೆ ವೀಕ್ಷಣೆ ಕೈಗಾರಿಕಾ ಮತ್ತು ವಿದ್ಯುತ್ ಸ್ಥಾವರ ವಿಪತ್ತು ಮೇಲ್ವಿಚಾರಣೆ ಸೇರಿದಂತೆ ಎಲ್ಲದ ಬಗ್ಗೆ ಮಾಹಿತಿ ನೀಡುತ್ತದೆ.

2. ಇನ್ನು ಎರಡನೇ ಪೇಲೋಡ್, GNSS-R, ಸಾಗರ ಮೇಲ್ಮೈ ಗಾಳಿ ವಿಶ್ಲೇಷಣೆ, ಮಣ್ಣಿನ ತೇವಾಂಶ ಮೌಲ್ಯಮಾಪನ, ಹಿಮಾಲಯ ಪ್ರದೇಶದ ಮೇಲಿನ ಕ್ರಯೋಸ್ಪಿಯರ್ ಅಧ್ಯಯನ, ಪ್ರವಾಹ, ಒಳನಾಡಿನ ಮೇಲ್ವಿಚಾರಣೆ, GNSS-R- ಆಧಾರಿತ ದೂರಸಂವೇದಿ ಸಾಮರ್ಥ್ಯ, ಜಲಮೂಲಗಳ ಬಗ್ಗೆ ಮಾಹಿತಿ ನೀಡುತ್ತದೆ.

3. ಮೂರನೇ ಪೇಲೋಡ್ ಅಂದರೆ ಇಂದು ಉಡಾವಣೆಯಾಗಿರುವ ಮಿಷನ್ SiC UV ಡೋಸಿಮೀಟರ್, ಗಗನ್ಯಾನ್ ಮಿಷನ್‌ ಮೂಲಕ ಮಾಡ್ಯೂಲ್‌ನ ವ್ಯೂಪೋರ್ಟ್‌ನಲ್ಲಿ UV ವಿಕಿರಣವನ್ನು ಮೇಲ್ವಿಚಾರಣೆ ಮಾಡುತ್ತದೆ ಹಾಗೂ ಇದು ಗಾಮಾ ವಿಕಿರಣಕ್ಕಾಗಿ ಹೆಚ್ಚಿನ-ಡೋಸ್ ಎಚ್ಚರಿಕೆಯ ಸಂವೇದಕವಾಗಿ ಕಾರ್ಯನಿರ್ವಹಿಸುತ್ತದೆ.

ಜನವರಿಯಲ್ಲಿ PSLV-C58/XpoSat ಮತ್ತು ಫೆಬ್ರವರಿಯಲ್ಲಿ GSLV-F14/INSAT-3DS ಸೇರಿದಂತೆ SSLV ಯ ಮೂರು ಪರೀಕ್ಷಾ ಹಾರಾಟಗಳನ್ನು ಇಸ್ರೋ ಈ ವರ್ಷ ನಡೆಸಿದೆ. ಸರಿಸುಮಾರು 34 ಮೀಟರ್ ಎತ್ತರ ಮತ್ತು 500 ಕೆಜಿ ಪೇಲೋಡ್ ಸಾಮರ್ಥ್ಯದೊಂದಿಗೆ, SSLV ಸಣ್ಣ ಉಪಗ್ರಹಕ್ಕೆ ಹೊಂದಾಣಿಕೆ ಆಗುವ ಉಪಕರಣಗಳನ್ನು ಅಳವಡಿಸಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3