ವಿಶೇಷಸ್ಥಳೀಯ

ಇತಿಹಾಸ ಬ್ರೇಕ್ ಮಾಡಲಿದೆ ಟ್ರಾಫಿಕ್ ಸಿಗ್ನಲ್ ಲೈಟ್‌!! ಸೇರ್ಪಡೆಯಾಗಲಿದೆ ನಾಲ್ಕನೇ ಬಣ್ಣ. ಯಾಕಾಗಿ ಗೊತ್ತಾ? ಕುತೂಹಲಕಾರಿ ಮಾಹಿತಿ ಇಲ್ಲಿದೆ…

ಟ್ರಾಫಿಕ್‌ ಸಮಸ್ಯೆಯನ್ನು ನಿಯಂತ್ರಿಸುವ ಉದ್ದೇಶದಿಂದ ರಸ್ತೆಗಳಲ್ಲಿ ಕೆಂಪು, ಹಸಿರು ಮತ್ತು ಹಳದಿ ಬಣ್ಣದ ಟ್ರಾಫಿಕ್‌ ಲೈಟ್‌ಗಳನ್ನು ಅಳವಡಿಸಿರುತ್ತಾರೆ. ವಿಶ್ವದ ಎಲ್ಲಾ ಕಡೆಯೂ ಇದೇ ಮೂರು ಬಣ್ಣದ ಲೈಟ್‌ಗಳಿರುತ್ತವೆ. ಆದ್ರೆ ಇನ್ಮುಂದೆ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ನಾಲ್ಕನೆಯ ಬಣ್ಣ ಬರಲಿದೆಯಂತೆ.

ಈ ಸುದ್ದಿಯನ್ನು ಶೇರ್ ಮಾಡಿ

ಟ್ರಾಫಿಕ್‌ ಸಮಸ್ಯೆಯನ್ನು ನಿಯಂತ್ರಿಸುವ ಉದ್ದೇಶದಿಂದ ರಸ್ತೆಗಳಲ್ಲಿ ಕೆಂಪು, ಹಸಿರು ಮತ್ತು ಹಳದಿ ಬಣ್ಣದ ಟ್ರಾಫಿಕ್‌ ಲೈಟ್‌ಗಳನ್ನು ಅಳವಡಿಸಿರುತ್ತಾರೆ. ವಿಶ್ವದ ಎಲ್ಲಾ ಕಡೆಯೂ ಇದೇ ಮೂರು ಬಣ್ಣದ ಲೈಟ್‌ಗಳಿರುತ್ತವೆ. ಆದ್ರೆ ಇನ್ಮುಂದೆ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ನಾಲ್ಕನೆಯ ಬಣ್ಣ ಬರಲಿದೆಯಂತೆ.

ಅದು ಏಕೆ ಮತ್ತು ಆ ಬಣ್ಣ ಯಾವುದು ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ.

SRK Ladders

ಈಗಾಗಲೇ ಟ್ರಾಫಿಕ್‌ ಸಿಗ್ನಲ್‌ ಲೈಟ್‌ಗೆ ನಾಲ್ಕನೇ ಬಣ್ಣವನ್ನು ಸೇರಿಸುವ ಪ್ರಸ್ತಾಪವನ್ನು ವಿಜ್ಞಾನಿಗಳು ಮಾಡಿದ್ದಾರೆ. ನಾರ್ತ್‌ ಕೆರೊಲಿನಾ ಸ್ಟೇಟ್‌ ಯೂನಿವರ್ಸಿಟಿಯ ಇಂಜಿನಿಯರ್‌ಗಳು ಟ್ರಾಫಿಕ್‌ ಸಿಗ್ನಲ್‌ ಲೈಟ್‌ಗಳಲ್ಲಿ ಹಳದಿ, ಕೆಂಪು ಮತ್ತು ಹಸಿರು ಲೈಟ್‌ಗಳ ಜೊತೆ ಬಿಳಿ ಬಣ್ಣದ ದೀಪವನ್ನು ಸಹ ಸೇರಿಸುವ ಪ್ರಸ್ತಾವನೆಯನ್ನು ಮಾಡಿದ್ದಾರೆ. ಈ ಹೊಸ ಹಂತವು ಟ್ರಾಫಿಕ್‌ ಸಮಸ್ಯೆಯನ್ನು ಕಡಿಮೆ ಮಾಡಲು, ಸ್ವಯಂ ಚಾಲಿತ ಕಾರುಗಳು (AV) ಹಾಗೂ ಮಾನವ ಚಾಲಕರ ನಡುವೆ ಉತ್ತಮ ಸಂವಹನವನ್ನು ಏರ್ಪಡಿಸುವ ಗುರಿಯನ್ನು ಹೊಂದಿದೆ.

ಈ ಅಧ್ಯಯನದ ಮುಖ್ಯಸ್ಥ ಡಾ. ಅಲಿ ಹಜ್ಬಾಬೈ ಅವರ ಪ್ರಕಾರ, ಸ್ವಯಂ ಚಾಲಿತ ವಾಹನಗಳ ಕಂಪ್ಯೂಟರ್‌ ಸಾಮರ್ಥ್ಯದ ಮೂಲಕ ಯಾವ ವಾಹನಗಳು ಎಲ್ಲಿವೆ ಎಂಬುದನ್ನು ನಿರ್ಧರಿಸಲು ಬಿಳಿ ದೀಪಗಳನ್ನು ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಅಳವಡಿಸುವುದರ ಹಿಂದಿನ ಮುಖ್ಯ ಉದ್ದೇಶವಾಗಿದೆ.

ಬಿಳಿ ಬಣ್ಣದ ಟ್ರಾಫಿಕ್‌ ದೀಪಗಳು ವಾಹನ ಸವಾರರಿಗೆ ಹೇಗೆ ಸಂಚರಿಸಬೇಕು ಎಂಬ ಮಾಹಿತಿಯನ್ನು ನೀಡಲಿದೆ. ಮತ್ತು ಇದರಿಂದ ಚಾಲಕರು ತಾವು ಏನು ಮಾಡಬೇಕು ಎಂಬುದನ್ನು ತಿಳಿಯುತ್ತಾರೆ. ಈ ಬಿಳಿ ಬಣ್ಣದ ದೀಪ ಕಾರು ಅಥವಾ ಯಾವುದೇ ವಾಹನವನ್ನು ಸರಳವಾಗಿ ಅನುಸರಿಸಲು ಚಾಲಕರಿಗೆ ಸೂಚನೆಯನ್ನು ನೀಡುವ ಕೆಲಸವನ್ನು ಮಾಡಲಿದೆ. ಅಲ್ಲದೆ ಇದು ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಏನಾಗುತ್ತಿದೆ ಎಂಬುದರ ಕುರಿತು ಇತರೆ ವಾಹನ ಚಾಲಕರೊಂದಿಗೆ ಸ್ವಯಂ ಚಾಲಿತ ಕಾರು ಸಂವಹನ ನಡೆಸಲು ಅನುವು ಮಾಡಿಕೊಡಲಿದೆ ಎಂದು ಅವರು ಹೇಳಿದ್ದಾರೆ.

ಈ ಪ್ರಸ್ತಾವನೆಯ ಪ್ರಕಾರ ಸ್ವಯಂ ಚಾಲಿತ ವಾಹನಗಳು ಟ್ರಾಫಿಕ್‌ ಸಿಗ್ನಲ್‌ಗಳನ್ನು ನಿರ್ವಹಿಸುವ ಕಂಪ್ಯೂಟರ್‌ಗಳೊಂದಿಗೆ ವೈರ್‌ಲೆಸ್‌ ಆಗಿ ಸಂವಹನ ನಡೆಸಲು ಸಾಧ್ಯವಾಗುತ್ತದೆ. ಸ್ವಯಂ ಚಾಲಿತ ವಾಹನಗಳ ಓಡಾಟ ಹೆಚ್ಚಾದ ಬಳಿಕವೇ ಈ ಹೊಸ ಬಿಳಿ ಬಣ್ಣದ ಸಿಗ್ನಲ್‌ ಲೈಟ್‌ ಅಳವಡಿಸಲಾಗುವುದು. ಈ ಸಂಶೋಧನೆ ಕಂಪ್ಯೂಟರ್‌-ಅಯ್ಡೆಡ್‌ ಸಿವಿಲ್‌ ಇನ್ಫ್ರಾಸ್ಟ್ರಕ್ಚರ್‌ ಇಂಜಿನಿಯರಿಂಗ್‌ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2