ಸ್ಥಳೀಯ

ಬಾಂಗ್ಲಾದ ಸಂತ್ರಸ್ಥ ಹಿಂದೂಗಳು ಭಾರತ ಪ್ರವೇಶಿಸಿದರೆ ಏನು ಮಾಡುವುದು? ವಿ.ಹಿಂ.ಪ. ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ ಅವರ ಪತ್ರಿಕಾಗೋಷ್ಠಿಯ ಮಾತಿನ ವಿವರ ಇಲ್ಲಿದೆ…

ಪುತ್ತೂರು: ಬಾಂಗ್ಲಾದ ಅರಾಜಕತೆಯಿಂದ ಅಲ್ಲಿನ ಹಿಂದೂಗಳ ಹತ್ಯೆ, ದೌರ್ಜನ್ಯ ನಡೆಯುತ್ತಿದೆ. ಅಲ್ಲಿನ ಹಿಂದೂಗಳ ರಕ್ಷಣೆಗಾಗಿ ಜಾಗತಿಕ ಒತ್ತಡ ತರಲಾಗುತ್ತಿದೆ. ಇದರ ನಡುವೆ ಬಾಂಗ್ಲಾ ವಾಸಿಗಳು ಭಾರತದೊಳಗೆ ನುಸುಳುವ ಸಾಧ್ಯತೆ ಇದ್ದು, ಗಡಿ ಭದ್ರ ಪಡಿಸುವಂತೆಯೂ ಒತ್ತಾಯಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ.ಕೃಷ್ಣಪ್ರಸನ್ನ ತಿಳಿಸಿದರು.

ಈ ಸುದ್ದಿಯನ್ನು ಶೇರ್ ಮಾಡಿ

akshaya college

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಭಾರತದೊಳಗೆ ಬಾಂಗ್ಲಾ ಹಿಂದೂಗಳು ಬಂದರೇನು ಮಾಡುವುದು ಎಂದು ಪ್ರಶ್ನಿಸಿದಾಗ – ಹಿಂದೂಗಳು ಬಂದರೆ ಅವರಿಗೆ ರಕ್ಷಣೆ ನೀಡಬೇಕು. ಅದಕ್ಕಾಗಿಯೇ ಸಿಎಎ ಜಾರಿ ಮಾಡಿರುವುದು. ಬಾಂಗ್ಲಾದಲ್ಲಿ ಹಿಂದೂಗಳು ಅಲ್ಪಸಂಖ್ಯಾತರು ಎಂದರು.

ಹಲವಾರು ಸಮಯಗಳಿಂದ ಅಲ್ಲಿನ ಹಿಂದೂ ಧಾರ್ಮಿಕ ಸಂಸ್ಥೆಗಳು, ಹಿಂದೂಗಳ ವ್ಯಾಪಾರ ಸಂಸ್ಥೆಗಳು, ಹಿಂದೂಗಳ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಈಗಾಗಲೇ ದಾಳಿ ಪರಿಣಾಮ ಹಿಂದೂಗಳ ರುದ್ರಭೂಮಿ, 100ಕ್ಕೂ ಅಧಿಕ ದೇವಾಲಯಗಳಿಗೆ ಹಾನಿಯಾಗಿದೆ. ಅಲ್ಪಸಂಖ್ಯಾತ ಹಿಂದೂಗಳ ಸ್ಥಿತಿ ಹದಗೆಡುತ್ತಿದೆ. ಈ ರೀತಿ ಮಾಡುತ್ತಿರುವುದು ನಾಚಿಗೇಡಿನ ಪರಮಾವಧಿಯಾಗಿದ್ದು, ಇದನ್ನು ಉ್ರಗವಾಗಿ ಖಂಡಿಸುತ್ತೇವೆ ಎಂದು ಹೇಳಿದರು.

ಅಲ್ಲಿನ ಸರಕಾರವನ್ನು ಇಳಿಸಿ ಅರಾಜಕತೆ ಸೃಷ್ಟಿಸಿ ಹಿಂದೂಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಹಿಂದೂ ರಕ್ಷಣೆಗೆ ಕೇಂದ್ರ ಸರಕಾರ ಒತ್ತಡ ತರಬೇಕು. ಎಲ್ಲಿ ಹಿಂದೂಗಳು ನಮ್ಮ ದೇಶಕ್ಕೆ ಮರಳಿದರೆ ಅವರಿಗೆ ಇಲ್ಲಿ ಸೂಕ್ತ ನೆಲೆ ಕಲ್ಪಿಸಬೇಕಾದ ಅಗತ್ಯವಿದೆ ಎಂದು ಆಗ್ರಹಿಸಿದ ಅವರು, ಈಗಾಗಲೇ ಈ ಕುರಿತು ವಿಶ್ವ ಹಿಂದೂ ಪರಿಷದ್ ರಾಷ್ಟ್ರ ಪ್ರಮುಖರು ಕೇಂದ್ರ ಸರಕಾರದ ಗೃಹಮಂತ್ರಿಗಳಿಗೆ ಈ ಕುರಿತು ಮನವಿ ಮೂಲಕ ಮನವರಿಕೆ ಮಾಡಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯಾ, ಕೋಶಾಧಿಕಾರಿ ಮಾಧವ ಪೂಜಾರಿ, ಜಿಲ್ಲಾ ಸಹಕಾರ್ಯದರ್ಶಿ ಶ್ರೀಧರ ತೆಂಕಿಲ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 107