Gl harusha
ಧಾರ್ಮಿಕಸ್ಥಳೀಯ

ಶ್ರೀ ಮಹಾಭಾರತ ಸರಣಿಯಲ್ಲಿ ಚಿತ್ರಸೇನ ಕಾಳಗ ತಾಳಮದ್ದಳೆ

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಮಹಾಭಾರತ ಸರಣಿಯ 40ನೇ ತಾಳಮದ್ದಳೆ ಚಿತ್ರಸೇನ ಕಾಳಗ ಸುರತ್ಕಲ್ ಕೃಷ್ಣಾಪುರದ ಪದುಮಶ್ರೀ ನಿವಾಸದಲ್ಲಿ ಜರಗಿತು.

ಈ ಸುದ್ದಿಯನ್ನು ಶೇರ್ ಮಾಡಿ

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಮಹಾಭಾರತ ಸರಣಿಯ 40ನೇ ತಾಳಮದ್ದಳೆ ಚಿತ್ರಸೇನ ಕಾಳಗ ಸುರತ್ಕಲ್ ಕೃಷ್ಣಾಪುರದ ಪದುಮಶ್ರೀ ನಿವಾಸದಲ್ಲಿ ಜರಗಿತು.

srk ladders
Pashupathi
Muliya

ಭಾಗವತರಾಗಿ ಪದ್ಮನಾಭ ಕುಲಾಲ್ ಉಪ್ಪಿನಂಗಡಿ, ನಿತೀಶ್ ಕುಮಾರ್ ವೈ, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಗಣೇಶ ಭಟ್ ಸುರತ್ಕಲ್, ಶ್ರೀಯತಿ ಪುನರೂರು ಸಹಕರಿಸಿದರು.

ಅರ್ಥಧಾರಿಗಳಾಗಿ ಪಾತಾಳ ಅಂಬಾ ಪ್ರಸಾದ( ದೇವೇಂದ್ರ ಮತ್ತು ದ್ರೌಪದಿ)ಗೋಪಾಲ ಶೆಟ್ಟಿ ಕಳೆಂಜ ( ಚಿತ್ರಸೇನ ), ದಿವಾಕರ ಆಚಾರ್ಯ ಗೇರುಕಟ್ಟೆ ( ಅರ್ಜುನ ), ಶ್ರೀಧರ ಎಸ್ಪಿ ಸುರತ್ಕಲ್ ( ಕೌರವ), ಹರೀಶ ಆಚಾರ್ಯ ಬಾರ್ಯ(ಕರ್ಣ ), ಶಂಕರನಾರಾಯಣ ಮಯ್ಯರ್ಪಾಡಿ (ಭೀಮ ), ದೇವದಾಸ ಎಸ್.ಪಿ. ಸುರತ್ಕಲ್ ( ಧರ್ಮರಾಯ), ಶ್ರುತಿ ವಿಸ್ಮಿತ್ ಉಪ್ಪಿನಂಗಡಿ ( ಭಾನುಮತಿ ಮತ್ತು ಸುರಭಟರು) ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ಪಾತಾಳ ಅಂಬಾ ಪ್ರಸಾದ್ ಮತ್ತು ಪ್ರಾಯೋಜಕ ಕಲಾವಿದ ಶ್ರೀಧರ ಎಸ್ ಪಿ ಸುರತ್ಕಲ್ ಅವರನ್ನು ಸನ್ಮಾನಿಸಲಾಯಿತು.

ಈ ಸುದ್ದಿಯನ್ನು ಶೇರ್ ಮಾಡಿ

Related Posts