ವಿಶೇಷಸ್ಥಳೀಯ

ರಿಕ್ಷಾ ತಂಗುದಾಣಕ್ಕೆ ಶಂಕುಸ್ಥಾಪನೆಗೈದು ಕಳೆಯಿತು ಅರ್ಧ ವರ್ಷ!! ಸ್ಥಳದಲ್ಲಿ ಬಾಳೆಗಿಡ ನೆಟ್ಟು ಗಮನ ಸೆಳೆದ ರಿಕ್ಷಾ ಚಾಲಕರು!!

ಪುತ್ತೂರು: ಶಂಕುಸ್ಥಾಪನೆ ನೆರವೇರಿಸಿ ಅರ್ಧ ವರ್ಷ ಕಳೆದರೂ, ರಿಕ್ಷಾ ತಂಗುದಾಣ ನಿರ್ಮಾಣಗೊಂಡಿಲ್ಲ. ಇದೀಗ ಶಂಕುಸ್ಥಾಪನೆ ನೆರವೇರಿಸಿದ ಜಾಗದಲ್ಲಿ ಸ್ಥಳೀಯ ರಿಕ್ಷಾ ಚಾಲಕರು ಬಾಳೆಗಿಡ ನೆಟ್ಟು ಗಮನ ಸೆಳೆದಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಶಂಕುಸ್ಥಾಪನೆ ನೆರವೇರಿಸಿ ಅರ್ಧ ವರ್ಷ ಕಳೆದರೂ, ರಿಕ್ಷಾ ತಂಗುದಾಣ ನಿರ್ಮಾಣಗೊಂಡಿಲ್ಲ. ಇದೀಗ ಶಂಕುಸ್ಥಾಪನೆ ನೆರವೇರಿಸಿದ ಜಾಗದಲ್ಲಿ ಸ್ಥಳೀಯ ರಿಕ್ಷಾ ಚಾಲಕರು ಬಾಳೆಗಿಡ ನೆಟ್ಟು ಗಮನ ಸೆಳೆದಿದ್ದಾರೆ.

ಸಂಪ್ಯ ಪೊಲೀಸ್ ಠಾಣೆ ಮುಂಭಾಗದಲ್ಲಿರುವ ಬಸ್ ತಂಗುದಾಣದ ಬಳಿಯಲ್ಲೇ ಶಾಸಕರ ಸ್ಥಳೀಯಾಭಿವೃದ್ಧಿ ನಿಧಿಯಲ್ಲಿ ರಿಕ್ಷಾ ತಂಗುದಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗಿತ್ತು.

SRK Ladders

ಶಿಲಾನ್ಯಾಸ ನಡೆದ ಜಾಗವನ್ನು ಸಮತಟ್ಟು ಮಾಡಲಾಗಿತ್ತು. ಇದೀಗ ಮಳೆಗೆ ಆ ಜಾಗ ಕೆಸರುಮಯವಾಗಿದ್ದು, ವಾಹನಗಳು ಹೂತು ಹೋಗುತ್ತಿದ್ದವು. ಇದರಿಂದ ಮತ್ತಷ್ಟು ಸಮಸ್ಯೆ ಎದುರಾಗದಿರಲೆಂದು ಸ್ಥಳೀಯ ರಿಕ್ಷಾ ಚಾಲಕರು ಬಾಳೆಗಿಡ ನೆಟ್ಟಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2