ದೇಶಸ್ಥಳೀಯ

ಬೆಚ್ಚಗೆ ಮಲಗಿದ್ದವರ ಜೀವವನ್ನೇ ಕಸಿದುಕೊಂಡ ವಯನಾಡ ಭೂಕುಸಿತಕ್ಕೆ ಕಾರಣ ತಿಳಿಸಿದ ವಿಜ್ಞಾನಿಗಳು! ಕಗ್ಗತ್ತಲಲ್ಲೇ ಉಂಟಾದ ಭೀಕರ ಘಟನೆಗೆ ‘ಮೆಸೊಸ್ಕೇಲ್ ಮೋಡ’ ಸಾಕ್ಷಿಯಾಯಿತೇ? ಇಡೀಯ ಕೊಂಕಣ ಪ್ರದೇಶದ ಮಣ್ಣು ಮೆತ್ತಗಾಗಲು ಕಾರಣವೇನು?

ಸೋಮವಾರ ರಾತ್ರಿ ಬೆಚ್ಚಗೆ ಮಲಗಿದ್ದವರಿಗೆ ಇಂತಹದ್ದೊಂದು ಭೀಕರ ಘಟನೆ ನಡೆದು ಹೋಗುತ್ತದೆ ಎಂಬ ಅರಿವು ಇರಲು ಸಾಧ್ಯವೇ ಇರಲಿಲ್ಲ. ಅಷ್ಟು ಸಮೃದ್ಧವಾಗಿ ಬೆಳೆದು ನಿಂತ ಸಸ್ಯಶ್ಯಾಮಲೆಯ ಮಡಿಲು ವಯನಾಡು. ಆದರೆ, ಇಂದು ದೇಹದ ಒಂದು ಭಾಗದ ಚರ್ಮವನ್ನು ಕಿತ್ತು ತೆಗೆದಂತಹ ಚಿತ್ರಣ ನಮ್ಮ ಮುಂದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಸೋಮವಾರ ರಾತ್ರಿ ಬೆಚ್ಚಗೆ ಮಲಗಿದ್ದವರಿಗೆ ಇಂತಹದ್ದೊಂದು ಭೀಕರ ಘಟನೆ ನಡೆದು ಹೋಗುತ್ತದೆ ಎಂಬ ಅರಿವು ಇರಲು ಸಾಧ್ಯವೇ ಇರಲಿಲ್ಲ. ಅಷ್ಟು ಸಮೃದ್ಧವಾಗಿ ಬೆಳೆದು ನಿಂತ ಸಸ್ಯಶ್ಯಾಮಲೆಯ ಮಡಿಲು ವಯನಾಡು. ಆದರೆ, ಇಂದು ದೇಹದ ಒಂದು ಭಾಗದ ಚರ್ಮವನ್ನು ಕಿತ್ತು ತೆಗೆದಂತಹ ಚಿತ್ರಣ ನಮ್ಮ ಮುಂದಿದೆ.

SRK Ladders

ಪಚ್ಚೆ ಪಚ್ಚೆ ಕಾನನದ ನಡುವೆ ಕೆಂಪಗಿನ ಮಣ್ಣಿನ ರಾಶಿ ಗೋಚರವಾಗುತ್ತಿದೆ. ಇದು ಮಣ್ಣಿನ ರಾಶಿಯೋ ಅಥವಾ ನೆತ್ತರ ಮಡುವೋ ಎಂಬಂತೆ ಭಾಸವಾಗುತ್ತಿದೆ. ಅಷ್ಟೂ ಮಂದಿಯ ಜೀವ ಆ ಮಣ್ಣಲ್ಲಿ ಮಣ್ಣಾಗಿ ಹೋಗಿದೆ. ಇನ್ನು ಅದೇಷ್ಟೋ ಮೃತದೇಹಗಳ ಗುರುತೂ ಪತ್ತೆಯಾಗಿಲ್ಲ. ನಾಪತ್ತೆಯಾದವರ ಸಂಖ್ಯೆ ಅದೇಷ್ಟೋ…

ಈ ಎಲ್ಲಾ ಭೀಕರ ಸನ್ನಿವೇಶಗಳ ನಡುವೆ ಘಟನೆಯ ಹಿಂದಿನ ಕಾರಣವನ್ನು ವಿಜ್ಞಾನಿಗಳು ತೆರೆದಿಟ್ಟಿದ್ದಾರೆ.

13ನೇ ಸ್ಥಾನದಲ್ಲಿತ್ತು ವಯನಾಡು:

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ರಾಷ್ಟ್ರೀಯ ದೂರಸಂವೇದಿ ಕೇಂದ್ರವು ಕಳೆದ ವರ್ಷ ಬಿಡುಗಡೆ ಮಾಡಿದ ಭೂಕುಸಿತದ ಅಟ್ಲಾಸ್‌‍ ಪ್ರಕಾರ, ಭಾರತದ 30 ಭೂಕುಸಿತ ಪೀಡಿತ ಜಿಲ್ಲೆಗಳಲ್ಲಿ 10 ಕೇರಳದಲ್ಲಿದ್ದು, ವಯನಾಡ್‌ 13ನೇ ಸ್ಥಾನದಲ್ಲಿತ್ತು.

ಪಶ್ಚಿಮ ಘಟ್ಟಗಳು ಮತ್ತು ಕೊಂಕಣ ಬೆಟ್ಟಗಳಲ್ಲಿ (ತಮಿಳುನಾಡು, ಕೇರಳ, ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ) 0.09 ಮಿಲಿಯನ್‌ ಚದರ ಕಿಲೋಮೀಟರ್‌ ಭೂಕುಸಿತಕ್ಕೆ ಗುರಿಯಾಗುತ್ತದೆ ಎಂದು ಅದು ಹೇಳಿತ್ತು. ಪಶ್ಚಿಮ ಘಟ್ಟಗಳಲ್ಲಿ ಅತಿ ಹೆಚ್ಚು ಜನಸಂಖ್ಯೆ ಮತ್ತು ಮನೆಯ ಸಾಂದ್ರತೆಯಿಂದಾಗಿ, ವಿಶೇಷವಾಗಿ ಕೇರಳದಲ್ಲಿ ನಿವಾಸಿಗಳು ಮತ್ತು ಕುಟುಂಬಗಳ ದುರ್ಬಲತೆಯು ಹೆಚ್ಚು ಮಹತ್ವದ್ದಾಗಿದೆ ಎಂದು ವರದಿ ತಿಳಿಸಿತ್ತು.

2021ರಲ್ಲಿ ಸ್ಪ್ರಿಂಗರ್‌ ಪ್ರಕಟಿಸಿದ ಅಧ್ಯಯನವು ತಿಳಿಸಿದಂತೆ, ಕೇರಳದ ಎಲ್ಲಾ ಭೂಕುಸಿತದ ಹಾಟ್‌ಸ್ಪಾಟ್‌ಗಳು ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿವೆ ಮತ್ತು ಇಡುಕ್ಕಿ, ಎರ್ನಾಕುಲಂ, ಕೊಟ್ಟಾಯಂ, ವಯನಾಡ್‌, ಕೋಝಿಕ್ಕೋಡ್‌ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಕೇಂದ್ರೀಕತವಾಗಿವೆ ಎಂದಿತ್ತು.

ಭೂಕುಸಿತಕ್ಕೆ ಕಾರಣ ‘ಮೆಸೊಸ್ಕೇಲ್’ ಮೋಡ:

ಕೊಚ್ಚಿ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ಅಡ್ವಾನ್ಸ್‌ಡ್ ಸೆಂಟರ್ ಫಾರ್ ಅಟ್ಮಾಸ್ಫಿಯರಿಕ್ ರೇಡಾರ್ ರಿಸರ್ಚ್‌ನ ನಿರ್ದೇಶಕ ಎಸ್.ಅಭಿಲಾಶ್ ಅವರು, ‘ಸಕ್ರಿಯ ಮುಂಗಾರು ಕಡಲಾಚೆಯ ಕಡಿಮೆ ಒತ್ತಡದ ಪ್ರದೇಶದಿಂದಾಗಿ ಕಾಸರಗೋಡು, ಕಣ್ಣೂರು, ವಯನಾಡು, ಕ್ಯಾಲಿಕಟ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಕಳೆದ ಎರಡು ವಾರಗಳಿಂದ ಇಡೀ ಕೊಂಕಣ ಪ್ರದೇಶವು ಹಾನಿಗೊಳಗಾಗುತ್ತಿದೆ. ಎರಡು ವಾರಗಳ ನಿರಂತರ ಮಳೆಯ ನಂತರ ಮಣ್ಣು ಮೆದುಗೊಂಡಿದೆ’ ಎಂದು ಹೇಳಿದ್ದಾರೆ.

ಕಳೆದ ಸೋಮವಾರ ಅರಬ್ಬಿ ಸಮುದ್ರದ ಕರಾವಳಿಯಲ್ಲಿ ಆಳವಾದ ‘ಮೆಸೊಸ್ಕೇಲ್’ ಮೋಡದ ವ್ಯವಸ್ಥೆಯು ರೂಪುಗೊಂಡಿದ್ದು, ವಯನಾಡ್, ಕ್ಯಾಲಿಕಟ್, ಮಲಪ್ಪುರಂ ಮತ್ತು ಕಣ್ಣೂರಿನಲ್ಲಿ ಭಾರಿ ಮಳೆಗೆ ಕಾರಣವಾಯಿತು. ಇದರ ಪರಿಣಾಮವಾಗಿ ಭೂಕುಸಿತ ಸಂಭವಿಸಿದೆ ಎಂದು ಅಭಿಲಾಶ್ ಹೇಳಿದ್ದಾರೆ.

2019ರಲ್ಲಿ ಕೇರಳದಲ್ಲಿ ಉಂಟಾದ ಪ್ರವಾಹದ ಸಂದರ್ಭದಲ್ಲಿ ಮೋಡಗಳು ದಟ್ಟವಾಗಿದ್ದವು. ಆಗ್ನೇಯ ಅರೇಬಿಯನ್ ಸಮುದ್ರದ ಮೇಲೆ ಅತ್ಯಂತ ದಟ್ಟವಾದ ಮೋಡಗಳು ರಚನೆಯಾದ ಬಗ್ಗೆ ವಿಜ್ಞಾನಿಗಳು ಮಾಹಿತಿ ಪಡೆದಿದ್ದಾರೆ ಎಂದು ಅಭಿಲಾಷ್ ಹೇಳಿದ್ದಾರೆ.

2019ರಲ್ಲಿ ಸಂಭವಿಸಿದಂತೆ ಕೆಲವೊಮ್ಮೆ ಈ ವ್ಯವಸ್ಥೆಗಳು ಭೂಪ್ರದೇಶವನ್ನು ಪ್ರವೇಶಿಸುತ್ತವೆ. ಆಗ್ನೇಯ ಅರೇಬಿಯನ್ ಸಮುದ್ರದಲ್ಲಿ ತಾಪಮಾನ ಹೆಚ್ಚಾಗುತ್ತಿದ್ದು, ಕೇರಳ ಸೇರಿದಂತೆ ಈ ಪ್ರದೇಶದ ಮೇಲಿನ ವಾತಾವರಣವು ಉಷ್ಣಬಲವಾಗಿ ಅಸ್ಥಿರವಾಗಿದೆ ಎಂದು ನಮ್ಮ ಸಂಶೋಧನೆಯಿಂದ ತಿಳಿದುಬಂದಿದೆ ಎಂದು ಅಭಿಲಾಷ್ ಹೇಳಿದ್ದು, ದಟ್ಟವಾದ ಮೋಡಗಳ ರಚನೆಗೆ ಸಹಾಯ ಮಾಡುವ ಈ ವಾತಾವರಣದ ಅಸ್ಥಿರತೆಯು ಹವಾಮಾನ ಬದಲಾವಣೆಗೆ ಸಂಬಂಧಿಸಿದೆ. ಈ ಹಿಂದೆ ಉತ್ತರ ಕೊಂಕಣ, ಉತ್ತರ ಮಂಗಳೂರಿನಲ್ಲಿ ಸಾಮಾನ್ಯವಾಗಿ ಇಂತಹ ಮಳೆಯಾಗುತ್ತಿತ್ತು ಎಂದು ಹೇಳಿದರು.

ಭೂಕುಸಿತದ ಬಗ್ಗೆ ಸೂಚನೆ ಕಷ್ಟ:

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ತ್ರಿಶೂರ್, ಪಾಲಕ್ಕಾಡ್, ಕೋಝಿಕ್ಕೋಡ್, ವಯನಾಡ್, ಕಣ್ಣೂರು, ಮಲಪ್ಪುರಂ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಹಲವಾರು ಸ್ವಯಂಚಾಲಿತ ಹವಾಮಾನ ಕೇಂದ್ರಗಳಲ್ಲಿ 19 ಸೆಂ.ಮೀ ನಿಂದ 35 ಸೆಂ.ಮೀ.ವರೆಗಿನ ಮಳೆ ದಾಖಲಾಗಿದೆ. ಈ ಪ್ರದೇಶದಲ್ಲಿ IMDಯ ಹೆಚ್ಚಿನ ಸ್ವಯಂಚಾಲಿತ ಹವಾಮಾನ ಕೇಂದ್ರಗಳು 24 ಗಂಟೆಗಳಲ್ಲಿ 24 ಸೆಂ.ಮೀ ಗಿಂತ ಹೆಚ್ಚು ಮಳೆಯನ್ನು ದಾಖಲಿಸಿವೆ. ರೈತರು ಸ್ಥಾಪಿಸಿರುವ ಕೆಲವು ಮಳೆ ಮಾಪನ ಕೇಂದ್ರಗಳಲ್ಲಿ 30 ಸೆಂ.ಮೀ.ಗೂ ಹೆಚ್ಚು ಮಳೆ ದಾಖಲಾಗಿದೆ. ಮುಂದಿನ ಎರಡು ದಿನಗಳಲ್ಲಿ ರಾಜ್ಯದ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

“ಹವಾಮಾನ ಏಜೆನ್ಸಿಗಳು ಭಾರೀ ಮಳೆಯ ಬಗ್ಗೆ ಮುನ್ಸೂಚನೆ ನೀಡಬಹುದು, ಆದರೆ ಭೂಕುಸಿತದ ಬಗ್ಗೆ ಖಚಿತವಾಗಿ ಏನನ್ನೂ ಹೇಳಲಾಗುವುದಿಲ್ಲ” ಎಂದು ಕೇಂದ್ರ ಭೂ ವಿಜ್ಞಾನ ಸಚಿವಾಲಯದ ಮಾಜಿ ಕಾರ್ಯದರ್ಶಿ ಮಾಧವನ್ ರಾಜೀವನ್ ಹೇಳಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3