ಸ್ಥಳೀಯ

ನೆಹರುನಗರ ನಿವಾಸಿ ಭರತ್ ವಿದೇಶದಲ್ಲಿ ಸಂದೇಹಾತ್ಮಕ ಆತ್ಮಹತ್ಯೆ! ಕೊನೆಗೂ ಸ್ವಗೃಹಕ್ಕೆ ಆಗಮಿಸಿದ ಮೃತದೇಹ!

ನೆಹರುನಗರ ನಿವಾಸಿ, ವಿದೇಶದಲ್ಲಿ ಉದ್ಯೋಗದಲ್ಲಿದ್ದ ಭರತ್ (44 ವ.) ದುಬೈಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಶುಕ್ರವಾರ ಮೃತದೇಹವನ್ನು ಸ್ವಗೃಹಕ್ಕೆ ತರಲಾಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನೆಹರುನಗರ ನಿವಾಸಿ, ವಿದೇಶದಲ್ಲಿ ಉದ್ಯೋಗದಲ್ಲಿದ್ದ ಭರತ್ (44 ವ.) ದುಬೈಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಶುಕ್ರವಾರ ಮೃತದೇಹವನ್ನು ಸ್ವಗೃಹಕ್ಕೆ ತರಲಾಯಿತು.

ನೆಹರುನಗರದಲ್ಲಿ ಮರದ ಕೆತ್ತನೆ ಕೆಲಸ ಮಾಡಿಕೊಂಡಿದ್ದ ಭರತ್ ಅವರು, ಕಂಪ್ಯೂಟರ್ ನಲ್ಲಿ ಡಿಸೈನ್ ಮಾಡಿ ಕೆತ್ತನೆ ಕೆಲಸ ಮಾಡುವುದರಲ್ಲು ನಿಷ್ಣಾತರಾಗಿದ್ದರು.

SRK Ladders

ಈ ಬಾರಿ ದುಬೈಯ ಕಂಪೆನಿಯೊಂದಕ್ಕೆ ಕೆಲಸಕ್ಕೆ ಹೋದವರು, ಕಿರುಕುಳದ ಕಾರಣ ನೀಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಆತ್ಮಹತ್ಯೆಯ ಬಗ್ಗೆ ಮನೆಯವರಿಗೆ ಸಂಶಯ ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಲಾಗಿದೆ.

ಆತ್ಮಹತ್ಯೆ ಮಾಡಿ ಸುಮಾರು 20 ದಿನಗಳ ಬಳಿಕ ಮೃತದೇಹವನ್ನು ತರಲಾಗಿದೆ ಎಂದು ಹೇಳಲಾಗಿದೆ.

ಮೃತರು ಪತ್ನಿ, ತಾಯಿ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3