ಪುತ್ತೂರು: ಬಲ್ನಾಡು ವಲಯದ ಉಜ್ರುಪಾದೆಯ ಎಸ್. ಪಾರ್ವತಿ ಭಟ್ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಾಶಾಸನ ಮಂಜೂರಾಗಿದ್ದು, ಮಂಜೂರಾತಿ ಪತ್ರ ಹಾಗೂ ಕೈಪಿಡಿಯನ್ನು ವಲಯದ ವಲಯಾಧ್ಯಕ್ಷ ಸತೀಶ್ ಒಳಗುಡ್ಡೆ ವಿತರಣೆ ಮಾಡಿದರು.
ಈ ಸಂದರ್ಭ ವಲಯದ ಭಜನಾ ಸಮಿತಿಯ ಅಧ್ಯಕ್ಷ ವೆಂಕಟ ಕೃಷ್ಣ ಭಟ್, ಉಜ್ರುಪಾದೆ ಬಿ ಒಕ್ಕೂಟದ ಅಧ್ಯಕ್ಷೆ ಪೂರ್ಣಿಮ, ವಲಯದ ಮೇಲ್ವಿಚಾರಕ ಪ್ರಶಾಂತ್ ಕುಮಾರ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ, ಸೇವಾ ಪ್ರತಿನಿಧಿ ರಮೇಶ್, VLE ರಮ್ಯಾ ಉಪಸ್ಥಿತರಿದ್ದರು.