ಟ್ರೆಂಡಿಂಗ್ ನ್ಯೂಸ್ಸ್ಥಳೀಯ

‘ಆಜ್ ಕಿ ರಾತ್’ ಹಾಡಿಗೆ ಮೈ ಬಳುಕಿಸಿದ ತಮನ್ನಾ! ದಿನಕ್ಕೆ 2 ಕೋಟಿಗೂ ಅಧಿಕ ವೀಕ್ಷಣೆ ಪಡೆದ ಮಿಲ್ಕಿ ಬ್ಯೂಟಿಯ ಸಾಂಗ್!!

ಈ ಸುದ್ದಿಯನ್ನು ಶೇರ್ ಮಾಡಿ

ಜೈಲರ್ ಸಿನಿಮಾದ ಹಾಡಿಗೆ ಮೈ ಬಳುಕಿಸಿದ್ದ ಮಿಲ್ಕಿ ಬ್ಯೂಟಿ, ನಟಿ ತಮನ್ನಾ ಭಾಟಿಯಾ ಅವರು ಇದೀಗ ಮತ್ತೊಂದು ಮೈಲುಗಲ್ಲಿನತ್ತ ಹೆಜ್ಜೆ ಹಾಕಿದ್ದಾರೆ.

SRK Ladders

ಆಗಸ್ಟ್ 15ರಂದು ತೆರೆ ಕಾಣಲಿರುವ “ಸ್ತ್ರೀ” ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ‘ಆಜ್ ಕಿ ರಾತ್’ ಸಿನಿಮಾದ ಹಾಡು. ಈ ವಿಶೇಷ ಹಾಡಿಗೆ ತನ್ನ ದೇಹದ ಸಿರಿಯನ್ನು ಬಿಚ್ಚಿಟ್ಟಿರುವ ನಟಿಯ ಅಭಿಮಾನಿ ಬಳಗ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಇದನ್ನು ಓದಿ: ಕಾರ್ಗಿಲ್ ಬೆಟ್ಟದ ಮೇಲಿನ ರಣರೋಚಕ ಯುದ್ಧದ ಚಿತ್ರಣ ಬಿಚ್ಚಿಟ್ಟ ಕಾರ್ಗಿಲ್ ಹುಲಿ, ಸೇನಾ ಪದಕ ಪುರಸ್ಕೃತ ಕ್ಯಾ. ನವೀನ್ ನಾಗಪ್ಪ

ಆಜ್ ಕಿ ರಾತ್ ಹಾಡಿಗೆ ದಿನವೊಂದಕ್ಕೆ 2 ಕೋಟಿಗೂ ಅಧಿಕ ವೀಕ್ಷಣೆ ಪಡೆಯುತ್ತಿದೆ. ಹಾಡಿನಲ್ಲಿ ಅವರು ಮೈ ಬಳುಕಿಸಿದ ಪರಿಗೆ ಫ್ಯಾನ್ಸ್ ಫಿದಾ ಆಗಿರುವುದು ಇದರಿಂದ ಖಚಿತವಾಗಿದೆ. ಅವರ ಮೈಮಾಟಕ್ಕೆ ಹಿಂದಿ ಮಂದಿ ಕಣ್ಣರಳಿಸಿದ್ದಾರೆ.

ತಮನ್ನಾ ಅವರ ಹವಾ ಈ ಚಿತ್ರದ ಹಾಡಿನ ಮೂಲಕ ಹೆಚ್ಚಾಗಿದೆ. ಈ ಚಿತ್ರದಲ್ಲಿ ರಾಜ್ಕುಮಾರ್ ರಾವ್, ಶ್ರದ್ಧಾ ಕಪೂರ್ ನಟಿಸಿದ್ದಾರೆ. ಈ ಸಿನಿಮಾದಲ್ಲಿ ತಮನ್ನಾ ಅವರು ಕೇವಲ ಹಾಡಿಗೆ ಮಾತ್ರ ಸೀಮಿತ ಆಗಿದ್ದಾರೆ.

ತಮನ್ನಾ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ 25 ಕೋಟಿಗೂ ಅಧಿಕ ಹಿಂಬಾಲಕರು ಇದ್ದಾರೆ. ಅವರ ಹಿಂಬಾಲಕರ ಸಂಖ್ಯೆ ದಿನ ಕಳೆದಂತೆ ಹೆಚ್ಚುತ್ತಲೇ ಇದೆ ಎಂದು ಮೂಲಗಳು ತಿಳಿಸಿವೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2