pashupathi
ರಾಜ್ಯ ವಾರ್ತೆಸ್ಥಳೀಯ

ನೀರಿನಲ್ಲಿ ಹಾಕಿಕೊಂಡು ಕುಡಿದರೆ ಶಕ್ತಿ ಬರುತ್ತದಂತೆ!! ರಾಜಸ್ಥಾನ ಮೂಲದವರನ್ನೇ ಟಾರ್ಗೆಟ್ ಮಾಡಿ ಡ್ರಗ್ಸ್ ಮಾರುತ್ತಿದ್ದವರ ಬಂಧನ!

tv clinic
ಬೆಳಿಗ್ಗೆ ನೀರಿನಲ್ಲಿ ಹಾಕಿಕೊಂಡು ಕುಡಿಯಿರಿ. ಇದರಿಂದ ಶಕ್ತಿ ಬರುತ್ತದೆ. ಹೀಗೆಂದು ಹೇಳಿ ಜನರನ್ನು ಯಾಮಾರಿಸಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಗ್ಯಾಂಗನ್ನು ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸರು ಬಂಧಿಸಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಿಗ್ಗೆ ನೀರಿನಲ್ಲಿ ಹಾಕಿಕೊಂಡು ಕುಡಿಯಿರಿ. ಇದರಿಂದ ಶಕ್ತಿ ಬರುತ್ತದೆ.

akshaya college

ಹೀಗೆಂದು ಹೇಳಿ ಜನರನ್ನು ಯಾಮಾರಿಸಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಗ್ಯಾಂಗನ್ನು ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ವಿವರಿಸಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು, ಅಫೀಮು ಮತ್ತು ಅಫೀಮು ಗಿಡದ ಪಾವಡರ್ ಪೊಪೆಸ್ಟ್ರಾ ಹೆಸರಿನ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ರಾಜಸ್ಥಾನ ಮೂಲದ ಐವರನ್ನು ಬಂಧಿಸಲಾಗಿದೆ. ಅವರಿಂದ 150 ಗ್ರಾಂ ಅಫೀಮು ಮತ್ತು 3 ಕೆಜಿ ಅಫೀಮು ಗಿಡದ ಪೌಡರ್ ಪೊಪೆಸ್ಟ್ರಾ ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ರಾಜಸ್ಥಾನ ಮೂಲದವರಾದ ಶಿವಮೊಗ್ಗದ ಜುಗತರಾಮ ಪಟೇಲ್ , ಹೀಮಾ ಬಿಷ್ಣೋಯ್, ದನರಾಮ ಪಟೇಲ್, ಶ್ರವಣಕುಮಾರ ಬಿಷ್ಣೋಯ್, ಓಂಪ್ರಕಾಶ ಬಿಷ್ಣೋಯ್ ಬಂಧಿತರು.

ಖಚಿತ ಮಾಹಿತಿ ಮೇರೆಗೆ ನಗರದ ಗಬ್ಬೂರ ವೃತ್ತ ಬಳಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಐವರಿಂದ 1.15 ಲಕ್ಷ ರೂ. ಮೌಲ್ಯದ ಅಫೀಮು ಮತ್ತು ಅಫೀಮು ಗಿಡದ ಪೌಡರ್ ಪೊಪೆಸ್ಟ್ರಾ, ಐದು ಮೊಬೈಲ್‌ ಫೋನ್ಸ್, 1,250 ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಈ ಜಾಲವು ರಾಜಸ್ಥಾನ ಮೂಲದ ವಿದ್ಯಾರ್ಥಿಗಳು ಹಾಗೂ ವರ್ತಕರು, ಜನರನ್ನು ಕೇಂದ್ರೀಕೃತವಾಗಿಸಿ ಮಾರಾಟ ಮಾಡುತ್ತಿದ್ದರು. ಇವರು ಹುಬ್ಬಳ್ಳಿ, ಶಿವಮೊಗ್ಗ, ಶಿರಸಿ ಹಾಗೂ ಕುಮಟಾದಲ್ಲಿ ವಿವಿಧ ತರಹದ ಅಂಗಡಿಗಳಲ್ಲಿ ಕೆಲಸ ಮಾಡಿಕೊಂಡಿದ್ದರು. ರಾಜಸ್ಥಾನದವರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ ಇವರು, ಅಲ್ಲಿಂದಲೇ ಮಾದಕವಸ್ತು ತೆಗೆದುಕೊಂಡು ಬಂದು ಇಲ್ಲಿ ಮಾರಾಟ ಮಾಡುತ್ತಿದ್ದರು. ಬೆಳಗ್ಗೆ ಅದನ್ನು ನೀರಿನಲ್ಲಿ ಹಾಕಿಕೊಂಡು ಕುಡಿದರೆ ಶಕ್ತಿ ಬರುತ್ತದೆ. ಇದು ಡ್ರಗ್ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂದು ತಿಳಿಸಿದರು. ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 143