Gl harusha
ರಾಜ್ಯ ವಾರ್ತೆಸ್ಥಳೀಯ

Ankola ದುರಂತ: ಮಹಿಳೆಯ ಮೃತದೇಹ ಪತ್ತೆಯಾದ ನದಿಯಲ್ಲಿ ಅರ್ಜುನನಿಗಾಗಿ ಶೋಧ! ಶೋಧ ಕಾರ್ಯ ವಿಳಂಬಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕೇರಳ ಮಾಧ್ಯಮಗಳ

ಈ ಸುದ್ದಿಯನ್ನು ಶೇರ್ ಮಾಡಿ

ಗಂಗಾವಳಿ ನದಿ ಪ್ರದೇಶವಾದ ಗಂಗೆಕೊಳ್ಳದಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ಕಣ್ಮರೆಯಾಗಿರುವ ಅರ್ಜುನನಿಗೆ ಶೋಧ ಕಾರ್ಯ ಮುಂದುವರಿದಿದೆ.

srk ladders
Pashupathi
Muliya

ಅಂಕೋಲಾದಲ್ಲಿ ನಡೆದಿರುವ ಭೀಕರ ಗುಡ್ಡ ಕುಸಿತದ ಬಳಿಕ ಮಣ್ಣು ತೆರವಿನ ಕಾರ್ಯ, ಕಣ್ಮರೆಯಾದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಈ ನಡುವೆ ಮಂಗಳವಾರ ನಸುಕಿನ ಜಾವ ಮಹಿಳೆಯೊಬ್ಬರ ಶವ ಗಂಗೆಕೊಳ್ಳದಲ್ಲಿ ಪತ್ತೆಯಾಗಿದೆ.

ಉಳುವರೆ ಗ್ರಾಮದ ಸಣ್ಣಿ ಹನುಮಂತ ಗೌಡ ಅವರ ಮೃತದೇಹ ಇದೆಂದು ಪೊಲೀಸರು ಶಂಕಿಸಿದ್ದಾರೆ.

ಮಹಿಳೆ ಧರಿಸಿದ್ದ ಬಳೆಯ ಆಧಾರದಲ್ಲಿ ಗುರುತು ಪತ್ತೆ ಹಚ್ಚಲಾಗಿದೆ. ಈ ಮೂಲಕ ದುರಂತದಲ್ಲಿ ಸಾವೀಗೀಡಾದವರ ಸಂಖ್ಯೆ 8ಕ್ಕೆ ಏರಿದಂತಾಗಿದೆ.

ಈ ನಡುವೆ ಟ್ರಕ್ ಚಾಲಕ ಅರ್ಜುನನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಆತ ಚಲಾಯಿಸಿಕೊಂಡು ಬಂದಿದ್ದ ಟ್ರಕ್ ಕೂಡ ಕಣ್ಮರೆಯಾಗಿದೆ.

ಒಂದೆಡೆ ಕುಸಿತಗೊಂಡ ಮಣ್ಣಿನ ತೆರವು ಕಾರ್ಯ ನಡೆಯುತ್ತಿದ್ದರೆ, ಇನ್ನೊಂದೆಡೆ ಗಂಗಾವಳಿ ನದಿಯಲ್ಲಿ ಶೋಧ ಕಾರ್ಯ ಮುಂದುವರಿದಿದೆ.

ಅರ್ಜುನ ಹಾಗೂ ಆತ ಚಲಾಯಿಸಿಕೊಂಡು ಬಂದಿದ್ದ ಟ್ರಕ್ ಕಣ್ಮರೆಯಾಗಿದ್ದು, ಇದನ್ನು ಪತ್ತೆಹಚ್ಚಲು ಕರ್ನಾಟಕ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೇರಳದ ಮಾಧ್ಯಮಗಳು ಆಕ್ರೋಶ ವ್ಯಕ್ತಪಡಿಸಿವೆ.

ಕೇರಳ ಹಲವಾರು ಪ್ರವಾಹ, ಅನಾಹುತಗಳನ್ನು ನೋಡಿವೆ. ಅವೆಲ್ಲವನ್ನು ಎದುರಿಸಿ ಜಯಿಸಿ ಬಂದಿದೆ. ಹಾಗಾಗಿ ಅಂಕೋಲ ದುರಂತದಲ್ಲಿ ಕಣ್ಮರೆಯಾದವರನ್ನು ಪತ್ತೆ ಹಚ್ಚಲು ಕರ್ನಾಟಕ ಸರಕಾರಕ್ಕೆ ಸಾಧ‍್ಯವಾಗದೇ ಹೋದರೆ, ನಮಗೆ ತಿಳಿಸಿ ಎಂದು ಸವಾಲೆಸೆದಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts