Gl harusha
ದೇಶಸ್ಥಳೀಯ

Hockey ಅಂತಾರಾಷ್ಟ್ರೀಯ ಹಾಕಿಗೆ ವಿದಾಯ ಘೋಷಿಸಿದ ಭಾರತದ ಸ್ಟಾರ್ ಆಟಗಾರ

ಭಾರತೀಯ ಹಾಕಿ ತಂಡದ ಹಿರಿಯ ಆಟಗಾರ, ಗೋಲ್ ಕೀಪರ್ ಪಿಆರ್ ಶ್ರೀಜೇಶ್ (PR Sreejesh) ಅವರು ಅಂತಾರಾಷ್ಟ್ರೀಯ ಹಾಕಿಗೆ (International Hockey) ವಿದಾಯ ಹೇಳಲು ನಿರ್ಧರಿಸಿದ್ದಾರೆ. ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಪ್ಯಾರಿಸ್ ಒಲಿಂಪಿಕ್ಸ್ (Paris Olympics) ಅವರ ಕೊನೆಯ ಅಂತಾರಾಷ್ಟ್ರೀಯ ಕೂಟವಾಗಿರಲಿದೆ.

ಈ ಸುದ್ದಿಯನ್ನು ಶೇರ್ ಮಾಡಿ

srk ladders
Pashupathi
Muliya

2006ರಲ್ಲಿ ಭಾರತೀಯ ತಂಡಕ್ಕೆ ಪದಾರ್ಪಣೆ ಮಾಡಿದ ಶ್ರೀಜೇಶ್ ಅವರು ನಾಲ್ಕನೇ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಸಿದ್ದರಾಗಿದ್ದಾರೆ. 2020ರ ಟೊಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಕಂಚಿನ ಪದಕ ಗೆದ್ದುಕೊಂಡಿತ್ತು. ಈ ಬಾರಿಯೂ ಮೆಡಲ್ ನೊಂದಿಗೆ ವೃತ್ತಿಜೀವನ ಅಂತ್ಯಗೊಳಿಸಲು ಶ್ರೀಜಿತ್ ಆಶಿಸಿದ್ದಾರೆ.

ಜಿ ವಿ ರಾಜಾ ಸ್ಪೋರ್ಟ್ಸ್ ಸ್ಕೂಲ್ ನಿಂದ ಆರಂಭವಾದ ಶ್ರೀಜೇಶ್ ಕ್ರೀಡಾ ಪಯಣ ಹಲವು ತ್ಯಾಗಗಳು ಮತ್ತು ಮಹೋನ್ನತ ಸಾಧನೆಗಳನ್ನು ಹೊಂದಿದೆ. “ನನ್ನ ಮೊದಲ ಕಿಟ್ ಖರೀದಿಸಲು ತಂದೆ ನಮ್ಮ ಹಸುವನ್ನು ಮಾರಾಟ ಮಾಡಿದ್ದು ನನಗೆ ಇನ್ನೂ ನೆನಪಿದೆ” ಎಂದು ಅವರು ನೆನಪಿಸಿಕೊಳ್ಳುತ್ತಾರೆ. “ಅವರ ತ್ಯಾಗವು ನನ್ನೊಳಗೆ ಬೆಂಕಿಯನ್ನು ಹೊತ್ತಿಸಿತು, ಹೆಚ್ಚು ಶ್ರಮಿಸಲು ಮತ್ತು ದೊಡ್ಡ ಕನಸು ಕಾಣುವಂತೆ ನನ್ನನ್ನು ಪ್ರೇರೇಪಿಸಿತು” ಎಂದಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

Related Posts