ಪುತ್ತೂರು: ಶ್ರೀ ಸುಬ್ರಹ್ಮಣ್ಯ ಸಹಕಾರ ಸಂಘ ನಿ. ಮಂಗಳೂರು ಇದರ ವಿಟ್ಲ ಶಾಖೆಯು 8 ವರ್ಷ ಪೂರೈಸಿದ್ದು, ಸಂಸ್ಥೆಯಲ್ಲಿ ಸಂಭ್ರಮ ಆಚರಿಸಲಾಯಿತು.
9 ವರ್ಷಕ್ಕೆ ಪಾದಾರ್ಪಣೆ ಮಾಡಿದ ಹಿನ್ನೆಲೆಯಲ್ಲಿ ಸಂಸ್ಥೆಯ ಕಚೇರಿಯಲ್ಲಿ ಸ್ವೀಟ್ ಹಂಚಲಾಯಿತು.
ಮ್ಯಾನೇಜರ್ ರಾಜೇಶ್ ಗೌಡ ಉರಿಮಜಲು, ಸಿಬ್ಬಂದಿಗಳಾದ ಶ್ವೇತಾ, ನಿಶ್ಮಿತಾ, ಭಾಸ್ಕರ್, ಕಾರ್ತಿಕ್ ಕೈಂತಿಲ ಮೊದಲಾದವರು ಉಪಸ್ಥಿತರಿದ್ದರು.
ಚಿನ್ನಾಭರಣ ಅಡವು ಸಾಲವನ್ನು ಕನಿಷ್ಠ ಬಡ್ಡಿ ದರದಲ್ಲಿ ನೀಡುವ ಯೋಜನೆ ಸಹಿತ ಹಲವು ಗ್ರಾಹಕ ಸ್ನೇಹಿ ಕಾರ್ಯಕ್ರಮಗಳಲ್ಲಿ ಸಂಸ್ಥೆ ತೊಡಗಿಕೊಂಡಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.