ಸ್ಥಳೀಯ

ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ | ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟಿçಯಲ್ ಕೋ-ಆಪರೇಟಿವ್ ಸೊಸೈಟಿಯ ವಜ್ರಮಹೋತ್ಸವ ಹಿನ್ನೆಲೆಯಲ್ಲಿ ಸರಣಿ ಕಾರ್ಯಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟಿçಯಲ್ ಕೋಆಪರೇಟಿವ್ ಸೊಸೈಟಿ ಮಂಗಳೂರು ಇದರ ವಜ್ರ ಮಹೋತ್ಸವ ಆಚರಣೆ ಪ್ರಯುಕ್ತ ಜುಲೈ 7ರಂದು ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ನಡೆಯಿತು.

akshaya college

ಮಂಗಳೂರು ವಿಭಾಗದ ಅಂಚೆ ಇಲಾಖೆಯ ಹಿರಿಯ ಅಂಚೆ ಅಧೀಕ್ಷಕ ಎಂ. ಸುಧಾಕರ ಮಲ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಒಂದು ಸಂಸ್ಥೆ 60 ವರ್ಷ ಆಚರಿಸುತ್ತಿದೆ ಎಂದರೆ ಅದು ಯಾವುದೇ ಸಾಧನೆಗೆ ಕಡಿಮೆ ಇಲ್ಲ. ಸಹಕಾರದ ತತ್ವ ಇಂದಿನ ಕಾರ್ಯಕ್ರಮದಲ್ಲಿ ಕಾಣುತ್ತಿದೆ, ಸಂಸ್ಥೆಯ ಕೀರ್ತಿ ಎತ್ತರಕ್ಕೆ ಏರಲಿ ಎಂದು ಶ್ಲಾಘಿಸಿದರು.

ಮುಖ್ಯ ಅಥಿüತಿಗಳಾಗಿದ್ದ ಮಂಗಳೂರು .. ಕೇಂದ್ರ ಸಹಕಾರಿ ಸಗಟು ಮಾರಾಟ ಸಂಘ ಜನತಾ ಬಜಾರ್ ಅಧ್ಯಕ್ಷ, ವಕೀಲ ಮತ್ತು ನೋಟರಿ ಎಂ. ಪುರುಷೋತ್ತಮ ಭಟ್ ಮಾತನಾಡಿ, ರಾಷ್ಟಿçà ಬ್ಯಾಂಕ್ ಇರುವ ರಾಜ್ಯದಲ್ಲಿ ಸಹಕಾರಿ ಸಂಸ್ಥೆ ಲಾಭ ಗಳಿಸಿ ಪೈಪೋಟಿ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಆಡಳಿತ ಮಂಡಳಿ ಹಾಗೂ ಸದಸ್ಯರು ಇಚ್ಚಾಶಕ್ತಿ ಹೊಂದಿದ್ದು ಸಾರ್ವಜನಿಕರಿಗೆ ಸಹಾಯಕವಾಗುವ ಕೆಲಸ ಮಾಡುತ್ತಿದ್ದಾರೆ. ಕಷ್ಟ ಕಾಲದಲ್ಲಿ ಸದಸ್ಯರನ್ನು ಮೇಲಕ್ಕೇತ್ತುವ ಕೆಲಸ ಮಾಡುತ್ತಿದ್ದಾರೆ. ವಿದ್ಯಾಥಿüð ವೇತನ, ಸಹಾಯಧನ ನೀಡುವ ಮೂಲಕ ಗುಣಮಟ್ಟದ ಸಾಮಾಗ್ರಿ ನೀಡುವ ಸಂಸ್ಥೆ ಇದಾಗಿದ್ದು, ಮುಂದೆಯೂ ಉತ್ತಮ ಕೆಲಸ ನಡೆಯುವಂತಾಗಲಿ ಎಂದು ಶುಭ ಹಾರೈಸಿದರು.

ಕೆ.ಪಿ.ಸಿ.ಸಿ. ರಾಜ್ಯ ಪ್ರಧಾನ ಕಾರ್ಯದರ್ಶಿ ಉದಯ ಜಿ. ಆಚಾರ್ಯ ಮಂಗಳೂರು ಮಾತನಾಡಿ, ಸಂಸ್ಥೆ ನಡೆಸಿ, ಬೆಳೆಸುವುದು ದೊಡ್ಡ ಸಾಧನೆ. ಸಿಬ್ಬಂದಿಗಳಲ್ಲಿ ಕಾರ್ಯ ದಕ್ಷತೆ, ಶ್ರಮತೆ ಇದೆ. ಆಥಿüðಕವಾಗಿ ಶಿಸ್ತು ಬರುವ ಉದ್ದೇಶಕ್ಕೆ ಮುಂದಿನ ಪೀಳಿಗೆಗೆ ಸಂಸ್ಥೆಯ ಸಹಕಾರ ಬಹಳ ಅಗತ್ಯ ಇದೆ ಎಂದರು.

ಭಾರತೀಯ ಅಂಚೆ ಇಲಾಖೆ, ಮಂಗಳೂರು ವಿಭಾಗದ ಉಪ ಅಂಚೆ ಅಧೀಕ್ಷಕ ದಿನೇಶ್ ಪಿ. ಮಾತನಾಡಿ, ಅಂಚೆ ಜನ ಸಂಪರ್ಕ ಅಭಿಯಾನದಡಿಯಲ್ಲಿ ಹಲವಾರು ಆಥಿüð ಸವಲತ್ತುಗಳು ಇವೆ ಎಂದು ವಿವರಿಸಿದರು.

ಸಂಸ್ಥೆಯ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷರಾದ . ಆನಂದ ಆಚಾರ್ಯ, ನಿರ್ದೇಶಕರುಗಳಾದ ವಿ. ಜಯ ಆಚಾರ್ಯ, ಕೆ. ಶಶಿಕಾಂತ ಆಚಾರ್ಯ, ಮಲ್ಲಪ್ಪ ಎನ್. ಪತ್ತಾರ್, ರೋಹಿಣಿ ಎಂ.ಪಿ. ಉಪಸ್ಥಿತರಿದ್ದರು.

ನಿರ್ದೇಶಕ ಪ್ರಕಾಶ ಆಚಾರ್ಯ ಕೆ. ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕರಾದ ಕೆ. ಯಜ್ಞೇಶ್ವರ ಆಚಾರ್ಯ ವಂದಿಸಿದರು. ಆಡಳಿತ ಕಛೇರಿ ಸಿಬ್ಬಂದಿ ಸಹನಾ ಎ. ಪ್ರಾರ್ಥಿಸಿದರು. ಶಾಖಾ ಸಿಬ್ಬಂದಿ ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 107