ಸ್ಥಳೀಯ

ಪುತ್ತೂರು – ದೇವಸ್ಯ – ಗುಮ್ಮಟಗದ್ದೆ ರಸ್ತೆಯಲ್ಲಿ ಸಂಚಾರ ಆರಂಭಿಸಿದ ಕೆ.ಎಸ್.ಅರ್.ಟಿ.ಸಿ. ಬಸ್ಸು | ಬೆಳಿಗ್ಗೆ, ಮಧ್ಯಾಹ್ನ, ಸಂಜೆ ದಿನದ 3 ಟ್ರಿಪ್ಪಿನ ಸಮಯ ಹೀಗಿದೆ…

ಪುತ್ತೂರಿನಿಂದ ಪರ್ಲಡ್ಕ ಕುಂಜೂರುಪಂಜ ದೇವಸ್ಯ ವಳತ್ತಡ್ಕ ಅಜ್ಜಿಕಲ್ಲು ಮಾರ್ಗವಾಗಿ ಗುಮ್ಮಟಗದ್ದೆಗೆ ಕೆ.ಎಸ್.ಅರ್.ಟಿ.ಸಿ ಬಸ್ಸ್ ಸಂಚಾರ ಜು.9 ರಂದು ಆರಂಭ ಗೊಂಡಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರಿನಿಂದ ಪರ್ಲಡ್ಕ ಕುಂಜೂರುಪಂಜ ದೇವಸ್ಯ ವಳತ್ತಡ್ಕ ಅಜ್ಜಿಕಲ್ಲು ಮಾರ್ಗವಾಗಿ ಗುಮ್ಮಟಗದ್ದೆಗೆ ಕೆ.ಎಸ್.ಅರ್.ಟಿ.ಸಿ ಬಸ್ಸ್ ಸಂಚಾರ ಜು.9 ರಂದು ಆರಂಭಗೊಂಡಿತು.

ಬೆಳಿಗ್ಗೆ ಸಂಚಾರ ಆರಂಬಿಸಿದ ಬಸ್ಸು ಅಜ್ಜಿಕಲ್ಲು ತಲುಪಿದಾಗ ಸೇರಿದ ಸಾರ್ವಜನಿಕರು ಬಸ್ಸನ್ನು ಅದ್ದೂರಿಯಾಗಿ ಸ್ವಾಗತಿಸಿ ಸಂಭ್ರಮಿಸಿದರು.

SRK Ladders

ಹಿರಿಯರಾದ ಶಶಿಕಿರಣ್ ರೈ ನೂಜಿಬೈಲು ಮಾತನಾಡಿ, ಸುಮಾರು ನಲವತ್ತು ವರ್ಷದ ಈ ಭಾಗದ ಜನರ ಬೇಡಿಕೆ ಇಂದು ಈಡೇರಿದೆ. ಈ ರಸ್ತೆಯಲ್ಲಿ ಕೆಂಪು ಬಸ್ಸನ್ನು ಕಾಣಬೇಕು ಎಂಬ ಪ್ರಯತ್ನಕ್ಕೆ ಈ ಭಾಗದ ಜನರ ಹೋರಾಟದ ಫಲ ಇಂದು ಸಫಲವಾಗಿದೆ. ಸರಕಾರದ ಎಲ್ಲಾ ಸವಲತ್ತುಗಳು ಈ ಭಾಗದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸಿಗಬೇಕು ಎಂಬ ಆಸೆ ಇತ್ತು. ಇದನ್ನು ಈಡೇರಿಸಿದ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಈ ಭಾಗದ ಜನರ ಪರವಾಗಿ ಧನ್ಯವಾದ ಅರ್ಪಿಸುತ್ತಿದ್ದೇನೆ ಎಂದರು.

ಸಂತೋಷ್ ಭಂಡಾರಿ ಚಿಲ್ಮೆತ್ತಾರು ಮಾತನಾಡಿ, ಹಿಂದೆ ಈ ರಸ್ತೆ ಗುಂಡಿಗಳಿಂದ ಕೂಡಿತ್ತು. ಅದನ್ನು ಹಿಂದಿನ ಶಾಸಕಿ ಶಕುಂತಲಾ ಶೆಟ್ಟಿ ದುರಸ್ತಿ ಮಾಡಿಸಲು ಆರಂಭಿಸಿ ನಂತರ ಬಂದ ಶಾಸಕ ಸಂಜೀವ ಮಠಂದೂರು ಮುಂದುವರಿಸಿ ರಸ್ತೆ ನಿರ್ಮಾಣ ಆಯಿತು. ಚೆಲ್ಯಡ್ಕದಲ್ಲಿ ನೂತನ ಸೇತುವೆ ನಿರ್ಮಾಣದ ಬೇಡಿಕೆ ಹಲವು ವರ್ಷಗಳಿಂದ ಇತ್ತು. ಅದಕ್ಕೂ ನೂತನ ಸೇತುವೆ ನಿರ್ಮಾಣಕ್ಕೆ ಶಾಸಕ ಆಶೋಕ್ ಕುಮಾರ್ ರೈ ಮೂರು ಕೋಟಿ ರೂ. ಅನುದಾನ ಬಿಡುಗಡೆ ಗೊಳಿಸಿದ್ದು ಬೇಸಿಗೆ ಕಾಲ ಆರಂಭದಲ್ಲಿ ಕಾಮಗಾರಿ ಆರಂಭವಾಗಿ ಆದಷ್ಟು ಬೇಗ ಅದರ ಉದ್ಘಾಟನೆ ಆಗಲಿದೆ. ಸಿದ್ದರಾಮಯ್ಯ ಸರಕಾರ ಆರಂಭಿಸಿದ ಭಾಗ್ಯ ಕೆಂಪು ಬಸ್ಸಲ್ಲಿ ಫ್ರೀಯಾಗಿ ಹೋಗುವ ಅವಕಾಶ ನಮಗೆ ಸಿಗಲಿಲ್ಲವಲ್ಲ ಎಂಬ ಕೊರಗು ಈ ಭಾಗದ ಮಹಿಳೆಯರಲ್ಲಿ ಇತ್ತು. ಇದೀಗ ಬಸ್ಸು ಬಂದು ಈ ಭಾಗದ ಮಹಿಳೆಯರಿಗೂ ಅವಕಾಶ ಮಾಡಿದ ಶಾಸಕರನ್ನು ಅಭಿನಂದಿಸಿದರು.

ವಾರ್ಡ್ ಸಮಿತಿ ಅಧ್ಯಕ್ಷ ಮನೋಜ್ ಗೌಡ ದೇವಸ್ಯ, ಭಗವಾನ್ ದಾಸ್ ರೈ ಚಿಲ್ಮೆತ್ತಾರು, ಶಶಿರಾಜ್ ರೈ ಚಿಲ್ಮೆತ್ತಾರು,ಲಕ್ಷ್ಮಣ ನಾಯ್ಕ ಅಜ್ಜಿಕಲ್ಲು ದರ್ಖಾಸ್, ಸಂದೀಪ್ ರೈ ಚಿಲ್ಮೆತ್ತಾರು, ರವಿ ಮುಂಡೊವುಮೂಲೆ, ಪುರಂದರ ನಾಯ್ಕ ಅಜ್ಜಿಕಲ್ಲು, ರಾಜೇಶ್ ರೈ ನೀರ್ಪಾಡಿ, ಮಹಮ್ಮದ್ ಅಜ್ಜಿಕಲ್ಲು, ಪದ್ಮನಾಭ ಪೂಜಾರಿ ಅಜ್ಜಿಕಲ್ಲು, ಈಶ್ವರ ಪ್ರಸನ್ನ ಕೇರಿ, ಧನಂಜಯ ಪೂಜಾರಿ, ಮಮತಾ ರೈ ಮಡಪ್ಪಾಡಿ, ದಿನೇಶ ನಾಯ್ಕ ,ಕೆ.ಎಸ್.ಅರ್.ಟಿ.ಸಿ ಡಿಪೋ ಮೆನೇಜರ್, ಸಿಬ್ಬಂದಿಗಳು ಹಾಗೂ ಪ್ರಯಾಣಿಕರು ಉಪಸ್ಥಿತರಿದ್ದರು.

ಬಸ್ ಸಂಚಾರದ ಸಮಯ ಹೀಗಿದೆ…
ಕೆ.ಎಸ್.ಅರ್.ಟಿ.ಸಿ ಬಸ್ಸು ಪ್ರತಿದಿನ ಬೆಳಿಗ್ಗೆ ಗಂಟೆ 7.30, ಮಧ್ಯಾಹ್ನ 1.30, ಸಂಜೆ 4.30 ಕ್ಕೆ ಪುತ್ತೂರಿನಿಂದ ಗುಮ್ಮಟಗದ್ದೆಗೆ ಹೊರಡಲಿದೆ. ಬೆಳಿಗ್ಗೆ ಗಂಟೆ 8.00, ಮಧ್ಯಾಹ್ನ 2.00, ಸಂಜೆ 5.00 ಗಂಟೆಗೆ ಗುಮ್ಮಟಗದ್ದೆಯಿಂದ ಪುತ್ತೂರಿಗೆ ಬಸ್ಸು ಸಂಚಾರ ಸೌಲಭ್ಯ ಇರುವುದು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2