ಸ್ಥಳೀಯ

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರೀಯಲ್ ಸೊಸೈಟಿಯ skgi society ಪುತ್ತೂರು ಶಾಖಾ ವ್ಯವಸ್ಥಾಪಕಿ ಉಷಾ ಎನ್. ಆಚಾರ್ ಅವರಿಗೆ ಬೀಳ್ಕೊಡುಗೆ

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರೀಯಲ್ ಸೊಸೈಟಿಯ skgi society ಪುತ್ತೂರು ಶಾಖಾ ವ್ಯವಸ್ಥಾಪಕಿ ಉಷಾ ಎನ್. ಆಚಾರ್ ಅವರ ನಿವೃತ್ತಿ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಫೊಟೋ: ಪದ್ಮ ಸ್ಟುಡಿಯೋ ಪುತ್ತೂರು

ಪುತ್ತೂರು: ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರೀಯಲ್ ಸೊಸೈಟಿಯ skgi society ಪುತ್ತೂರು ಶಾಖಾ ವ್ಯವಸ್ಥಾಪಕಿ ಉಷಾ ಎನ್. ಆಚಾರ್ ಅವರ ನಿವೃತ್ತಿ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.

SRK Ladders

ಮುಖ್ಯ ಅತಿಥಿಯಾಗಿದ್ದ ಶ್ರವಣ್ ಜ್ಯುವೆಲ್ಲರ್ಸ್ ಮಾಲಕ ಸದಾಶಿವ ಆಚಾರ್ಯ ಕೈಂತಿಲ ಮಾತನಾಡಿ, ಸಮಾಜದ ಯುವಕರಿಗೆ ಕೆಲಸವಾದರೆ ಸಮಾಜ ಮುಂದೆ ಬರುತ್ತದೆ ಎಂಬ ಫಾಲ್ಕೆ ಬಾಬುರಾಯಾಚಾರ್ಯ ಅವರ ದೂರದೃಷ್ಟಿತ್ವದ ಯೋಜನೆ ಈ ಬ್ಯಾಂಕ್. ಇಂತಹ ಬ್ಯಾಂಕಲ್ಲಿ ಕೆಲಸ ಮಾಡಿ, ಸಂಸ್ಥೆಯ ಔನ್ನತ್ಯಕ್ಕೆ ಶ್ರಮಿಸಿದ ಉಷಾ ಎನ್. ಆಚಾರ್ ಅವರ ಮುಂದಿನ ಜೀವನ ನೆಮ್ಮದಿ ಸಂತೋಷದಿಂದ ಕೂಡಿರಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಉಪೇಂದ್ರ ಆಚಾರ್ಯ ಮಾತನಾಡಿ, ಭಾವನಾತ್ಮಕ ಜೀವಿ. ಎಲ್ಲರೂ ಸಂಸ್ಥೆಯಿಂದ ತನಗೇನು ಸಿಗಬಹುದು ಎಂದು ಬಯಸುವವರ ಮುಂದೆ, ಸಂಸ್ಥೆಗೆ ತಾನೇನು ನೀಡಬಹುದು ಎಂದು ಆಲೋಚಿಸುವವರು. ಸಂಸ್ಥೆಯಂತೆ ಅವರು 60ರ ಸಂವತ್ಸರಕ್ಕೆ ಕಾಲಿಡುತ್ತಿದ್ದಾರೆ. ಇದುವರೆಗೆ ಎಲ್ಲರೂ ಮೆಚ್ಚುವಂತಹ, ಕಪ್ಪು ಚುಕ್ಕೆ ಇಲ್ಲದಂತಹ ಸೇವೆ ನೀಡಿದ್ದಾರೆ. ಮುಂದೆ ಇವರಿಗೆ ಸಂಸ್ಥೆಯಲ್ಲೂ ಸನ್ಮಾನ, ಬೀಳ್ಕೊಡುಗೆ ನಡೆಯಲಿಕ್ಕಿದೆ ಎಂದರು.

ಸಂಸ್ಥೆಯ ಉಪಾಧ್ಯಕ್ಷ ಆನಂದ ಆಚಾರ್ಯ ಅಜ್ಜಿನಡ್ಕ ಮಾತನಾಡಿ, ವಜ್ರ ಮಹೋತ್ಸವ ಸಂದರ್ಭ ಉಷಾ ಎನ್. ಆಚಾರ್ ನಿವೃತ್ತಿ ಹೊಂದುತ್ತಿದ್ದಾರೆ. ನಿವೃತ್ತಿ ಸಹಜ. ಕಳೆದ ಎರಡು ವರ್ಷದಲ್ಲಿ ಸಂಸ್ಥೆಯನ್ನು ಅಭೂತಪೂರ್ವವಾಗಿ ಬೆಳೆಸಿದ್ದಾರೆ. 1 ಕೋಟಿ ರೂ. ಆದಾಯ ತಂದುಕೊಟ್ಟ ಮಹಿಳಾ ವ್ಯವಸ್ಥಾಪಕಿ ಎಂದ ಅವರು, ಸಿಬ್ಬಂದಿಗಳು ಸಂಸ್ಥೆಯನ್ನು ತಮ್ಮದೆಂಬ ರೀತಿಯಲ್ಲಿ ಬೆಳೆಸುತ್ತಾ ಹೋದರೆ ಸಂಸ್ಥೆ ಅತ್ಯುನ್ನತ ಸ್ಥಾನಕ್ಕೆ ಏರಬಲ್ಲುದು ಎನ್ನುವುದಕ್ಕೆ ಉಷಾ ಅವರೇ ಸಾಕ್ಷಿ ಎಂದರು.

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರೀಯಲ್ ಕೋ ಆಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಆಚಾರ್ಯ ಮಾತನಾಡಿ, ದೇವಮಾನವ ಫಾಲ್ಕೆ ಬಾಬುರಾಯಾಚಾರ್ಯ ಅವರು ಈ ಸಂಸ್ಥೆಯನ್ನು ಹುಟ್ಟುಹಾಕಿದಂದೇ ಉಷಾ ಎನ್. ಆಚಾರ್ಯ ಜನಿಸಿದರು ಎಂದರು.

ಪುತ್ತೂರು ಶಾಖೆಯ 31-3-24ಕ್ಕೆ ಇದ್ದಂತೆ ಅಂಕಿ ಅಂಶಗಳು ಠೇವಣಿಗಳು 19.2 ಕೋಟಿ ರೂ. ಸಾಲಗಳು 22.57 ಕೋಟಿ ರೂ. ಲಾಭ 1.4 ಕೋಟಿ ಧನವಿನಿಯೋಗಗಳು 2.1 ಕೋಟಿ ರೂ. ಹೊಂದಿದೆ. ಕಳೆದ 40 ವರ್ಷಗಳಿಂದ ಸಂಸ್ಥೆ ಲಾಭದಲ್ಲಿದೆ. ಕಳೆದ 34 ವರ್ಷಗಳಿಂದ ಲಭಿಸಿದ ಆಡಿಟ್ ವರ್ಗಿಕರಣದಲ್ಲಿ ಎ ವರ್ಗದ ಮಾನ್ಯತೆಯನ್ನು ಪಡೆದಿದೆ. ಕಳೆದ 33 ವರ್ಷಗಳಿಂದ ಶೇಕಡ 18 ರಷ್ಟು ಡಿವಿಡೆಂಟ್ ನೀಡುತ್ತಾ ಬಂದಿದೆ. ಆಡಳಿತ ಕಚೇರಿ ಮತ್ತು 17 ಶಾಖೆಗಳನ್ನು ಹೊಂದಿರುವ ನಮ್ಮ ಸಂಸ್ಥೆ 21500 ಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿದ್ದು 6.58 ಕೋಟಿ ಪಾಲು ಬಂಡವಾಳ ಹೊಂದಿದೆ. 223 ಕೋಟಿ ಠೇವಣಿ ಹೊಂದಿದ್ದು 203 ಕೋಟಿ ರೂ. ಸಾಲ ವಿತರಿಸಿದ್ದು 57 ಕೋಟಿ ಧನ ವಿನಿಯೋಗವಿದ್ದು 2023 24ನೇ ಸಾಲಿನಲ್ಲಿ 4.95 ಕೋಟಿ ಲಾಭಗಳಿಸಿದೆ. ಪ್ರತಿವರ್ಷ ಕುಶಲಕರ್ಮಿ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಾ ಬಂದಿದೆ. ಪ್ರತಿ ವರ್ಷ ಮಹಾಸಭೆಯಲ್ಲಿ ಪಂಚ ಕಸುಬುಗಳನ್ನು ಮಾಡುವವರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಸ್ ಕೆ ಜಿ ಐ ಪಾಲ್ಕೆ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದೇವೆ. 2024ರ ಈ ವರ್ಷದಲ್ಲಿ ವಜ್ರ ಮಹೋತ್ಸವ ವರ್ಷಾಚರಣೆಯನ್ನು ಮಾಡುತ್ತಿದ್ದೇವೆ. 60 ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಎರಡು ಬಾರಿ ರಾಜ್ಯದ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ಲಭಿಸಿದೆ. ಮೂರು ಬಾರಿ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ಲಭಿಸಿದೆ ಸತತ ಆರು ಬಾರಿ ದ. ಕ. ಜಿಲ್ಲಾ ಸಹಕಾರ ಬ್ಯಾಂಕಿನಿಂದ ಸರ್ವತೋಮುಖ ಅಭಿವೃದ್ಧಿಗೆ ಸಾಧನಾ ಪ್ರಶಸ್ತಿ ಲಭಿಸಿದೆ ಎಂದ ಆವರು, ಮಂಗಳೂರು ಶಾಖೆ ಮೊದಲ ಹುಟ್ಟು, ಎರಡನೇ ಹುಟ್ಟು ಪುತ್ತೂರು ಶಾಖೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಉಷಾ ಎನ್. ಆಚಾರ್, ಗ್ರಾಹಕರ ಮುಖದಲ್ಲಿ ಮೂಡುತ್ತಿದ್ದ ಸಂತೃಪ್ತಿಯ ನಗುವೇ ನಮಗೆ ಖುಷಿ. ಕೋಟಿ ರೂ. ಕೊಟ್ಟರು ಇದು ಬೇರೆಲ್ಲೂ ಸಿಗದು. ಈ ಸಂಸ್ಥೆ ಇನ್ನಷ್ಟು ಬೆಳಗಲಿ, ನಿಮ್ಮ ಸಹಕಾರ ಸಂಸ್ಥೆಯ ಮೇಲಿರಲಿ ಎಂದರು.

ವಿಶ್ವಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಶ್ರೀಧರ್ ಆಚಾರ್ಯ ಕೆ. ಮಾತನಾಡಿ, ಮೃದು, ಹಿತವಾದ ಮಾತಿನಿಂದ ಎಲ್ಲರ ಮನಸ್ಸನ್ನು ಉಷಾ ಎನ್. ಆಚಾರ್ ಗೆದ್ದಿದ್ದಾರೆ ಎಂದರು.

ಸೊಸೈಟಿ ನಿರ್ದೇಶಕರಾದ ಯು. ರಮೇಶ್ ಆಚಾರ್ಯ, ರೋಹಿಣಿ ಎಂ.ಪಿ., ಪ್ರಕಾಶ್ ಆಚಾರ್ಯ ಕುಂಟಾಡಿ ಮೊದಲಾದವರು ಉಪಸ್ಥಿತರಿದ್ದರು.

ಕಿಶನ್ ಬಿ.ವಿ, ನಿವೃತ್ತ ಹಿರಿಯ ವ್ಯವಸ್ಥಾಪಕ ಜಗದೀಶ್ ಎಸ್.ಎನ್.‌ ಅನಿಸಿಕೆ ವ್ಯಕ್ತಪಡಿಸಿದರು.

ಕಿರಣ್ ಬಿ.ವಿ. ಸ್ವಾಗತಿಸಿದರು. ರಾಜೇಶ್ ಪ್ರಾರ್ಥಿಸಿದರು. ರಾಮ್ ಪ್ರಸಾದ್ ಎನ್.ಎಸ್. ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ದೀಕ್ಷಿತ್, ಧನಂಜಯ್ ಸಹಕರಿಸಿದರು.

ಸನ್ಮಾನ:

ನಿವೃತ್ತಿಗೊಂಡ ಶಾಖಾ ವ್ಯವಸ್ಥಾಪಕಿ ಉಷಾ ಎನ್. ಆಚಾರ್ ಅವರಿಗೆ ಇದೇ ಸಂದರ್ಭ ಎಸ್.ಕೆ.ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರೀಯಲ್ ಸೊಸೈಟಿ ವತಿಂದ, ಸಿಬ್ಬಂದಿಗಳ ನೇತೃತ್ವದಲ್ಲಿ, ಹಿತೈಷಿಗಳ ವತಿಯಿಂದ ಸನ್ಮಾನಿಸಿ, ಅಭಿನಂದಿಸಿ, ಬೀಳ್ಕೊಡಲಾಯಿತು. ಇದೇ ಸಂದರ್ಭ ನೂತನ ಶಾಖಾ ವ್ಯವಸ್ಥಾಪಕರಾಗಿ ಕಿರಣ್ ಬಿ.ವಿ. ಅವರನ್ನು ನೇಮಿಸಲಾಯಿತು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2