ಸ್ಥಳೀಯ

ಪುತ್ತೂರಿಗೆ ಕಂದಾಯ ನೋಡೆಲ್ ಅಧಿಕಾರಿಯಾಗಿ ಎಚ್ ಕೆ ಕೃಷ್ಣಮೂರ್ತಿ ನೇಮಕ | ಶಾಸಕರ ಮನವಿಗೆ ಸ್ಪಂದಿಸಿದ ಕಂದಾಯ ಸಚಿವಾಲಯ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತೂರಿಗೆ ಹೆಚ್ಚುವರಿ ಕಂದಾಯ ವಿಭಾಗದ ನೋಡೆಲ್ ಅಧಿಕಾರಿಯಾಗಿ ನಗರಾಭಿವೃದ್ದಿ ಇಲಾಖೆಯ ಅಪರ ಕಾರ್ಯದರ್ಶಿಯಾಗಿರುವ ಎಚ್ ಕೃಷ್ಣಮೂರ್ತಿಯವರನ್ನು ಸರಕಾರ ನೇಮಕ ಮಾಡಿದೆ.

ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿನ ಕಂದಾಯ ಇಲಾಖಾ ವಿಭಾಗದ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಈ ನೇಮಕಾತಿ ನಡೆದಿದೆ.

SRK Ladders

ನಗರಸಭೆ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ ಕನ್ವರ್ಶನ್ ಸಮಸ್ಯೆ ಸೇರಿದಂತೆ ಕಂದಾಯ ವಿಭಾಗಕ್ಕೆ ಸೇರಿದ ಅನೇಕ ಎಡರುತೊಡರುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹೆಚ್ಚುವರಿ ಅಧಿಕಾರಿಯನ್ನು ನೇಮಕ ಮಾಡುವಂತೆ ಶಾಸಕರಾದ ಅಶೋಕ್ ರೈಯವರು ಕಂದಾಯ ಸಚಿವರಿಗೆ ಮನವಿ ಮಾಡಿಕೊಂಡಿದ್ದರು. ಶಾಸಕರ ಮನವಿಗೆ ಸ್ಪಂದಿಸಿದ ಸಚಿವರು ಎಚ್ ಕೃಷ್ಣಮೂರ್ತಿಯವರನ್ನು ಹೆಚ್ಚುವರಿ ನೋಡೆಲ್ ಅಧಿಕಾರಿಯಾಗಿ ನೇಮಕ ಮಾಡಿದ್ದಾರೆ. ಇವರು ಪುತ್ತೂರಿನಲ್ಲಿ ಈ ಹಿಂದೆ ಸಹಾಯಕ ಕಮಿಷನರ್ ಆಗಿ ಮತ್ತು ನದ ಕ ಜಿಲ್ಲಾ ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ನೋಡೆಲ್ ಅಧಿಕಾರಿಯ ನೇಮಕದಿಂದ ನಗರಸಭಾ ವ್ಯಾಪ್ತಿಯಲ್ಲಿನ ಕಂದಾಯ ಸಮಸ್ಯೆಗಳು ಶೀಘ್ರದಲ್ಲೇ ಇತ್ಯರ್ಥವಾಗಲಿದೆ ಎಂದು ಶಾಸಕರು ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2