ಪುತ್ತೂರು: ಡಾ. ವಿಧೂಷಿ ಪವಿತ್ರಾ ರೂಪೇಶ್ ಅವರಿಗೆ ರಾಷ್ಟ್ರಮಟ್ಟದ ಗಾನ ಕೋಗಿಲೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.
ಜೂನ್ 23ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆದ ಬೆಳಕು ಸಾಹಿತ್ಯ, ಶೈಕ್ಷಣಿಕ, ಸಾಂಸ್ಕೃತಿಕ ಟ್ರಸ್ಟ್ ನ 117ನೇ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ರಾಜ್ಯ ಗೃಹ ಸಚಿವ ಡಾ. ಡಿ. ಪರಮೇಶ್ವರ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಇವರು ಶೇಟ್ ಇಲೆಟ್ಟ್ರಾನಿಕ್ಸ್ ಮಾಲಕ ರೂಪೇಶ್ ಶೇಟ್ ಅವರ ಪತ್ನಿ.