ಕೃಷಿಸ್ಥಳೀಯ

ಟಿ.ಎಸ್.ಪಿ ಯೋಜನೆಯಡಿ ತೋಟಗಾರಿಕಾ ತಾಂತ್ರಿಕತೆಗಳ ತರಬೇತಿ | ಮೀನು ಕೃಷಿಕರಿಗೆ ರೂ. 10,000/- ಮೌಲ್ಯದ ಕಿಟ್, ಮತ್ಸಸ್ಯ ಯೋಜನೆ, ಮೀನು ಮರಿ, ಮತ್ಸ ಸಂಪದ ಯೋಜನೆ… | ಜುಲೈ 10ರಂದು ಪುತ್ತೂರು ತಾ.ಪಂ.ನಲ್ಲಿ ಮೀನು ಕೃಷಿ ತರಬೇತಿ

ಪರಿಶಿಷ್ಟ ಪಂಗಡದ ರೈತರಿಗೆ ಟಿ.ಎಸ್.ಪಿ ಯೋಜನೆಯಡಿ ತೋಟಗಾರಿಕಾ ತಾಂತ್ರಿಕತೆಗಳ ಕುರಿತು ತರಬೇತಿ ಕಾರ್ಯಕ್ರಮ ದಿನಾಂಕ ಜೂ. 21 ರಂದು ತಾಲೂಕು ಪಂಚಾಯತ್ ಪುತ್ತೂರು ಸಭಾಂಗಣದಲ್ಲಿ ನಡೆಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪರಿಶಿಷ್ಟ ಪಂಗಡದ ರೈತರಿಗೆ ಟಿ.ಎಸ್.ಪಿ ಯೋಜನೆಯಡಿ ತೋಟಗಾರಿಕಾ ತಾಂತ್ರಿಕತೆಗಳ ಕುರಿತು ತರಬೇತಿ ಕಾರ್ಯಕ್ರಮ ದಿನಾಂಕ ಜೂ. 21 ರಂದು ತಾಲೂಕು ಪಂಚಾಯತ್ ಪುತ್ತೂರು ಸಭಾಂಗಣದಲ್ಲಿ ನಡೆಯಿತು.

ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಬೀದರ, ಭಾ.ಕೃ.ಅ.ಪ-ಕೃಷಿ ವಿಜ್ಞಾನ ಕೇಂದ್ರ, ದ.ಕ ಮಂಗಳೂರು, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಬೆಂಗಳೂರು, ಡೇ.ಎನ್.ಆರ್.ಎಲ್.ಎಂ ಯೋಜನೆ ತಾಲೂಕು ಪಂಚಾಯತ್ ಪುತ್ತೂರು ಇವರ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು.

SRK Ladders

ತಾಲೂಕು ಪಂಚಾಯತ್ ಪುತ್ತೂರು ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಮಾತನಾಡಿ, ಇಲಾಖೆಯಿಂದ ಸಿಗುವ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು. ಕೃಷಿ ಸಖಿಗಳು ಇಲಾಖೆಯಿಂದ ಸಿಗುವ ಯೋಜನೆಗಳನ್ನು ರೈತರಿಗೆ ತಲುಪಿಸಬೇಕು. ಇದರಿಂದ ಎಲ್ಲರೂ ಸ್ವಾವಲಂಬಿ ಜೀವನ ನಡೆಸಬೇಕು ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾರತೀಯ ತೋಟಗಾರಿಕಾ ಸಂಶೋದನಾ ಸಂಸ್ಥೆಯ ಪ್ರಧಾನ ವಿಜ್ಞಾನಿ (ತೋಟಗಾರಿಕೆ) ಡಾ. ವಿ. ಶಂಕರ್, ಕೃಷಿ ವಿಜ್ಙಾನ ಕ್ರೇಂದ್ರ ಮಂಗಳೂರು ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು ಡಾ. ಟಿ.ಜಿ ರಮೇಶ, ತೋಟಗಾರಿಕೆ, ಕೃಷಿ ವಿಜ್ಞಾನ ಕ್ರೇಂದ್ರ ಮಂಗಳೂರು ವಿಜ್ಞಾನಿ ಡಾ.ರಶ್ಮಿ.ಆರ್ ಇವರು ಪೌಷ್ಟಿಕತೆ, ರೋಗಕೀಟಗಳ, AMC, ಜೈವಿಕ ಗೊಬ್ಬರ ಬಳಕೆ, ತಳಿಗಳ ಅಭಿವೃದ್ಧಿ, ತರಕಾರಿ ಮತ್ತು ತೋಟಗಾರಿಕೆ ಬೆಳೆಗಳ ಬಗ್ಗೆ, ಮಲ್ಲಿಗೆ ಕೃಷಿ, ಶೀಲಿಂದ್ರ, ರೋಗ ನಿರೋಧಕ ಶಕ್ತಿ, ತರಬೇತಿ, ಇಲಾಖಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾದ ತಾ‌.ಪಂ. ಸಹಾಯಕ ನಿರ್ದೇಶಕರು (ಗ್ರಾ.ಉ) ಶೈಲಜಾ ಭಟ್ ಅವರು ಮಾತನಾಡಿ, ನರೇಗಾ ಯೋಜನೆಯಡಿ ಫಲಾನುಭವಿಗಳು ವೈಯಕ್ತಿಕ ಮತ್ತು ಸಾರ್ವಜನಿಕ ಕಾಮಗಾರಿಗಳನ್ನು ನಿರ್ವಹಿಸುವುದು. ಇಂಗುಗುಂಡಿ, ಬಾವಿ ರಚನೆ, ಮಲ್ಲಿಗೆ ಕೃಷಿ, ಪೌಷ್ಠಿಕ ಕೈ ತೋಟ, ತೋಟಗಾರಿಕೆ ಬೆಳೆಗಳ ಕೃಷಿ, ಹಟ್ಟಿ ರಚನೆ, ನರ್ಸರಿಯನ್ನು ಮಾಡಲು ಅವಕಾಶವಿದ್ದು, ಒಂದು ವರ್ಷದಲ್ಲಿ ಒಂದು ಕುಟುಂಬಕ್ಕೆ 100 ಮಾನವ ದಿನ ಕೆಲಸ ಇದ್ದು ದಿನಕ್ಕೆ 349 ಕೂಲಿ ಇರುತ್ತದೆ. ಕಾಮಗಾರಿಗಳನ್ನು ಮಾಡಲಿಚ್ಚಿಸುವರು ಗ್ರಾಮ ಪಂಚಾಯತ್ ಗೆ ಬೇಡಿಕೆಯನ್ನು ಸಲ್ಲಿಸಿ ಅದರ ಪ್ರಯೋಜನವನ್ನು ಕೃಷಿಕರು ಪಡೆದುಕೊಳ್ಳುವಂತೆ ತಿಳಿಸಿದರು.

ಮುಖ್ಯ ಅತಿಥಿಗಳಾದ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ಮಾತನಾಡಿ, ಪರಿಶಿಷ್ಟ ಜಾತಿ ಮೀನು ಕೃಷಿಕರಿಗೆ ರೂ. 10,000/- ಮೌಲ್ಯದ ಕಿಟ್, ಮತ್ಸಸ್ಯ ಯೋಜನೆ, ಮೀನು ಮರಿ, ಮತ್ಸ ಸಂಪದ ಯೋಜನೆಗಳಿದ್ದು ಅರ್ಜಿಯನ್ನು ಸಲ್ಲಿಸಲು ತಿಳಿಸಿದರು. ಜುಲೈ 10, 2024 ರಂದು ತಾಲೂಕು ಪಂಚಾಯತ್ ಪುತ್ತೂರು ಇಲ್ಲಿ ಮೀನು ಕೃಷಿ ತರಬೇತಿಯು ನಡೆಯಲಿದ್ದು, ಸದ್ರಿ ತರಬೇತಿಯಲ್ಲಿ ಮೀನಿನಿಂದ ತಯಾರಿಸಲಾಗುವ ಉತ್ಪನ್ನಗಳ ತಯಾರಿಕೆಯ ಬಗ್ಗೆ ಮಾಹಿತಿ ನೀಡಲಿದ್ದು, ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ತಿಳಿಸಿದರು.

ಹಾಜರಾದ 45 ಪರಿಶಿಷ್ಟ ಪಂಗಡದ ರೈತರಿಗೆ 200 ಹಣ್ಣಿನ ಗಿಡಗಳನ್ನು ಕೃಷಿ ವಿಜ್ಞಾನ ಕ್ರೇಂದ್ರ ಮಂಗಳೂರು ಇಲ್ಲಿಂದ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಪುತ್ತೂರು ಎನ್ ಆರ್‌ಎಲ್‌ಎಂ ನ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್.ಕೆ, ತಾಲೂಕು ಅಭಿಯಾನ ನಿರ್ವಹಣಾ ಘಟಕದ ಸಿಬ್ಬಂದಿಗಳು, ಕೃಷಿ ಸಖಿಗಳು, ರೈತರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2