ಸ್ಥಳೀಯ

ರೆಫ್ರಿಜರೇಟರ್ ಸ್ಪೋಟ: ಮನೆಗೆ ಹಾನಿ | ಜಿಡೆಕಲ್ಲು ಕಾಲೇಜು ಬಳಿ ಘಟನರ

ಜಿಡೆಕಲ್ಲು ಕಾಲೇಜು ಬಳಿಯ ಮನೆಯೊಂದರಲ್ಲಿ ಇಂದು ಬೆಳಗ್ಗೆ ರೆಫ್ರಿಜರೇಟರ್ ಸ್ಫೋಟಗೊಂಡ ಪರಿಣಾಮ ಇಡೀ ಮನೆಗೆ ಬೆಂಕಿ ಹಬ್ಬಿದ ಘಟನೆ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಜಿಡೆಕಲ್ಲು ಕಾಲೇಜು ಬಳಿಯ ಮನೆಯೊಂದರಲ್ಲಿ ಇಂದು ಬೆಳಗ್ಗೆ ರೆಫ್ರಿಜರೇಟರ್ ಸ್ಫೋಟಗೊಂಡ ಪರಿಣಾಮ ಇಡೀ ಮನೆಗೆ ಬೆಂಕಿ ಹಬ್ಬಿದ ಘಟನೆ ನಡೆದಿದೆ.

ಮನೆಯೊಳಗೆ ಇದ್ದ ಹಲವು ಅಗತ್ಯ ವಸ್ತುಗಳಿಗೆ ಭಾರೀ ಪ್ರಮಾಣದ ಹಾನಿ ಉಂಟಾಗಿದೆ.

SRK Ladders

ತಕ್ಷಣವೇ ಅದೇ ಪರಿಸರದಲ್ಲಿದ್ದ ಜಿಡೆಕಲ್ಲು ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಾದ ಎಡ್ವರ್ಡ್, ವಿಖ್ಯಾತ್ ಮತ್ತು ಪ್ರೀತೇಶ್ ಸೇರಿದಂತೆ ಹಲವು ವಿದ್ಯಾರ್ಥಿಗಳು ಸ್ಥಳೀಯರಾದ ಅಶೋಕ್ ರಾಗಿದಕುಮೇರು ರವರು ಮತ್ತು ಇತರರ ಸಹಕಾರದೊಂದಿಗೆ ಮನೆಯೊಳಗೆ ನುಗ್ಗಿ ನೀರು ಎರಚುವ ಮೂಲಕ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ.

ಅಗ್ನಿಶಾಮಕದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3