Gl
ಕರಾವಳಿಸ್ಥಳೀಯ

ರೆಖ್ಯಾ, ಕೊಕ್ಕಡದಲ್ಲಿ ಮನೆಗೆ ಬಡಿದ ಸಿಡಿಲು..! ಹಸು, ಸಾಕು ನಾಯಿ ಬಲಿ: ವಿದ್ಯುತ್ ಉಪಕರಣಗಳಿಗೆ ಹಾನಿ

GL

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ತಂಗಡಿ: ಭಾರೀ ಸಿಡಿಲಬ್ಬರಕ್ಕೆ ನಾಯಿ ಹಾಗೂ ಹಸು ಮೃತಪಟ್ಟ ಘಟನೆ ರೆಖ್ಯ ಗ್ರಾಮದಲ್ಲಿ ಸಂಭವಿಸಿದೆ.

core technologies

ಜೂ. 02ರಂದು ಸಂಜೆ ತಾಲೂಕಿನಲ್ಲಿ ಮಳೆಯಾಗಿದ್ದು ಈ ಸಂದರ್ಭದಲ್ಲಿ ರೆಖ್ಯ ಗ್ರಾಮದ ಸುಂದರ ಗೌಡ ಕುರುಡೇಲು ಎಂಬವರ ಮನೆಗೆ ಸಿಡಿಲು ಬಡಿದು ಮನೆಯ ವಿದ್ಯುತ್ ವೈಯರುಗಳು, ವಿದ್ಯುತ್ ಉಪಕರಣಗಳು ಸುಟ್ಟು ಹೋಗಿವೆ. ಅಲ್ಲದೆ ಹಟ್ಟಿಯಲ್ಲಿದ್ದ ಹಸು ಹಾಗೂ ಮನೆಯ ಅಂಗಳದಲ್ಲಿದ್ದ ನಾಯಿ ಸಿಡಿಲ ಅಬ್ಬರಕ್ಕೆ ಬಲಿಯಾಗಿವೆ.

ಕೊಕ್ಕಡದಲ್ಲಿ ಮನೆಗೆ ಸಿಡಿಲು ಬಡಿತ..!

ಕೊಕ್ಕಡದ ಹಳ್ಳಿಂಗೇರಿಯ ನಿತೇಶ್ ರವರ ಮನೆಗೆ ಸಿಡಿಲು ವಿದ್ಯುತ್ ಉಪಕರಣಗಳಾದ ಫ್ಯಾನ್, ಮಿಕ್ಸಿ, ಟಿವಿ, ಸ್ವಿಚ್ ಬೋರ್ಡ್, ಇನ್ನಿತರ ಸಾಮಾಗ್ರಿಗಳು ಸುಟ್ಟು ಹೋಗಿದೆ.

ಸದ್ಯ ಎರಡೂ ಮನೆಯವರು ಪ್ರಾಣಪಾಯದಿಂದ ಪಾರಾಗಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 154