Gl harusha
ಕರಾವಳಿಸ್ಥಳೀಯ

ಕೊಣಾಜೆ: ಹಾಡುಹಗಲೇ ಮನೆಯಿಂದ ಕಳವು..!

ಈ ಸುದ್ದಿಯನ್ನು ಶೇರ್ ಮಾಡಿ

ಕೊಣಾಜೆ: ಕಳ್ಳರು ಮನೆಯೊಂದರ ಬಾಗಿಲು ಮುರಿದು ಕಪಾಟಿನಲ್ಲಿದ್ದ ನಗ-ನಗದು ಕಳ್ಳತನ ನಡೆಸಿದ ಘಟನೆ ಕೊಣಾಜೆ ಸಮೀಪದ ಮೋಡಿಜೇರ ಎಂಬಲ್ಲಿ ನಡೆದಿದೆ.

srk ladders
Pashupathi
Muliya

ಕೊಣಾಜೆ ಗ್ರಾಮದ ಮೋಡಿಜೇರ ನಿವಾಸಿ ಚಂದ್ರ ಎಂಬವರ ಮನೆಯಲ್ಲಿ ಕಳ್ಳತನ ಕೃತ್ಯ ನಡೆದಿದೆ.

ಮನೆಯಲ್ಲಿ ಚಂದ್ರ ಹಾಗೂ ಅವರ ಸಹೋದರಿ ಮಾತ್ರ ವಾಸವಾಗಿದ್ದು ಇಬ್ಬರು ಕೂಡಾ ಕೆಲಸಕ್ಕೆ ಹೋಗಿದ್ದ ವೇಳೆ ಕಳ್ಳರು ಕಳ್ಳತನ ನಡೆಸಿದ್ದಾರೆ. ಮಧ್ಯಾಹ್ನದ ವೇಳೆ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಮನೆಯ ಮುಂಭಾಗದ ಬಾಗಿಲು ಮುರಿದ ಕಳ್ಳರು ಒಳನುಗ್ಗಿ ಎರಡು ಕಪಾಟುಗಳನ್ನು ಒಡೆದಿದ್ದಾರೆ. ಅದರಲ್ಲಿದ್ದ ಅಪಾರ ಮೌಲ್ಯದ ಚಿನ್ನವನ್ನು ಅಲ್ಲದೆ ಸುಮಾರು ಆರು ಸಾವಿರದಷ್ಟು ನಗದನ್ನು ಕೂಡಾ ಕಳ್ಳತನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಸಂಜೆಯ ವೇಳೆಗೆ ಮನೆಮಂದಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಕೊಣಾಜೆ ಪೊಲೀಸರು, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಸುಬ್ರಹ್ಮಣ್ಯಕ್ಕೆ ದಿನದ 3 ಹೊತ್ತು ರೈಲು ಸೇವೆ| ಮಂಗಳೂರು – ಪುತ್ತೂರು ರೈಲು ಓಡಾಟ ವಿಸ್ತರಣೆ: ಬದಲಾದ ಸಮಯ ಹೀಗಿದೆ

ಮಂಗಳೂರು-ಕಬಕ ಪ್ಯಾಸೆಂಜ‌ರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ