ಸ್ಥಳೀಯ

ಆಟೋ ಚಾಲಕನ ಪತ್ನಿ, ಗೃಹಿಣಿ ಸಂಧ್ಯಾ ಆಚಾರ್ಯ ಆತ್ಮಹತ್ಯೆ!!

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮರೀಲ್ ಕಾಡಮನೆ ನಿವಾಸಿ ಆಟೋ ರಿಕ್ಷಾ ಚಾಲಕರೊಬ್ಬರ ಪತ್ನಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 28ರಂದು ಬೆಳಕಿಗೆ ಬಂದಿದೆ.

ಆಟೋ ರಿಕ್ಷಾ ಚಾಲಕ, ಮೂಲತಃ ಜಾಲ್ಸೂರಿನ ಕುಕ್ಕಂದೂರಿನ ಮನೋಜ್ ಎಂಬವರ ಪತ್ನಿ ಸಂಧ್ಯಾ ಆಚಾರ್ಯ (45 ವ.) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು.

SRK Ladders

ಕಳೆದ 20 ವರ್ಷಗಳಿಂದ ಮನೋಜ್ ಅವರು ಪುತ್ತೂರಿನ ಮರೀಲ್ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.

ಮೇ 27ರಂದು ರಾತ್ರಿ ರಿಕ್ಷಾದಲ್ಲಿ ಬಾಡಿಗೆ ಮಾಡಲು ಮನೆಯಿಂದ ತೆರಳಿದ್ದ ಮನೋಜ್, ಮೇ 28ರಂದು ಬೆಳಿಗ್ಗೆ ಮನೆಗೆ ಹೋದಾಗ ಪತ್ನಿ ಮನೆಯ ಹಾಲ್‌ನ ಕಿಟಕಿಗೆ ನೇಣು ಬಿಗಿದು ಅಸ್ವಸ್ಥ ಸ್ಥಿತಿಯಲ್ಲಿದ್ದರು. ತಕ್ಷಣ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಸಂಧ್ಯಾ ಅವರು ಮೃತಪಟ್ಟಿದ್ದರು.

ಮೃತರು ಪತಿ ಮನೋಜ್, 13 ವರ್ಷ ಪ್ರಾಯದ ಪುತ್ರನನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2