Gl harusha
ದೇಶಸ್ಥಳೀಯ

ನಿಮ್ಮ ಆಧಾರ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆಯೇ? UIDAI ಬಿಡುಗಡೆ ಮಾಡಿದೆ ಪ್ರಮುಖ ಮಾಹಿತಿ | ಮನೆಯಲ್ಲಿಯೇ ಕುಳಿತು ಆಧಾರ್ ಅಪ್’ಡೇಟ್ ಹೇಗೆ. ಇಲ್ಲಿದೆ ವಿವರ…

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ: ಕಳೆದ 10 ವರ್ಷಗಳಿಂದ ನವೀಕರಿಸದ ಆಧಾರ್ ಕಾರ್ಡ್‌ಗಳು ಈ ವರ್ಷದ ಜೂನ್ 14 ರ ನಂತರ ಅಮಾನ್ಯವಾಗಲಿದೆ. ಹೀಗಾಗಿ ಅದಕ್ಕೂ ಮೊದಲು ನವೀಕರಣ ಮಾಡುವುದು ಅಗತ್ಯ ಎಂಬ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಇದಕ್ಕೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಸ್ಪಷ್ಟನೆ ನೀಡಿದೆ.

srk ladders
Pashupathi
Muliya

ಕಳೆದ 10 ವರ್ಷಗಳಿಂದ ಆಧಾರ್ ಕಾರ್ಡ್‌ ಅಪ್‌ಡೇಟ್ ಮಾಡದವರು ಜೂನ್ 14, 2024 ರವರೆಗೆ ಉಚಿತವಾಗಿ ನವೀಕರಿಸಬಹುದು ಎಂದು ಯುಐಡಿಎಐ ಪ್ರಕಟಿಸಿದೆ. ಅಂದರೆ ನೀವು ಆಧಾರ್ ಕಾರ್ಡ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಬೇಕಿದ್ದರೆ ಅದನ್ನು ಅಪ್‌ಡೇಟ್ ಮಾಡಬಹುದು. ಇದಕ್ಕಾಗಿ ನೀವು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಒಂದು ವೇಳೆ ನಿಗದಿಪಡಿಸಿದ ಸಮಯದೊಳಗೆ ತಮ್ಮ ಆಧಾರ್ ಕಾರ್ಡ್‌ಗಳನ್ನು ನವೀಕರಿಸಲು ವಿಫಲರಾದವರು ನಂತರ ಕೂಡಾ ಅವುಗಳನ್ನು ಅಪ್‌ಡೇಟ್ ಮಾಡಬಹುದು ಆದರೆ ನೀವು ಪಾವತಿಸಬೇಕಾಗುತ್ತದೆ.

ಈ ಹಿಂದೆ ಆಧಾರ್ ಕಾರ್ಡ್‌ ಅಪ್‌ಡೇಟ್ ಗೆ ಮಾರ್ಚ್ 14 ನೀಡಿತ್ತು. ಬಳಿಕ ಈ ಗಡುವನ್ನು ಸರ್ಕಾರ ಮೂರು ತಿಂಗಳವರೆಗೆ ವಿಸ್ತರಿಸಿತ್ತು. ಹೀಗಾಗಿ ಉಚಿತ ಅಪ್‌ಡೇಟ್ ಸೇವೆಯು ಜೂನ್ 14 ರವರೆಗೆ myadhaar ಪೋರ್ಟಲ್‌ನಲ್ಲಿ ಲಭ್ಯವಿರಲಿದೆ. ಯಾರಿಗಾದರೂ ತಮ್ಮ ವಿವರಗಳನ್ನು ನವೀಕರಿಸಲು, ನೀವು ವೆಬ್‌ಸೈಟ್‌ಗೆ ಭೇಟಿ ನೀಡಬೇಕಾಗುತ್ತದೆ.

ಆಧಾರ್ ಕಾರ್ಡ್‌ ಅಪ್‌ಡೇಟ್ ಮಾಡುವುದರಿಂದ ನಮ್ಮ ಆಧಾರ್ ಕಾರ್ಡ್ ನಕಲು ಮಾಡುವುದು ಮತ್ತು ಅದನ್ನು ಬಳಸಿಕೊಂಡು ಮೋಸದ ಚಟುವಟಿಕೆಗಳಲ್ಲಿ ತೊಡಗುವುದನ್ನು ತಡೆಯಬಹುದು. ಹೀಗಾಗಿ, ಆಧಾರ್ ಕಾರ್ಡ್‌ನಲ್ಲಿರುವ ಎಲ್ಲಾ ವಿವರಗಳನ್ನು ದುರ್ಬಳಕೆಯಾಗದಂತೆ ರಕ್ಷಿಸಲು UIDAI ಆಧಾರ್ ಕಾರ್ಡ್‌ ಅಪ್‌ಡೇಟ್ ಕ್ರಮವನ್ನು ತೆಗೆದುಕೊಳ್ಳುತ್ತಿದೆ. ಆಧಾರ್ ವಿವರಗಳ ನಿಖರವಾದ ನಿರ್ವಹಣೆಯಿಂದ ದೃಢೀಕರಣ ಪ್ರಕ್ರಿಯೆಯಲ್ಲಿ ದೋಷಗಳನ್ನು ಕಡಿಮೆ ಮಾಡಲು ಮತ್ತು ನಕಲಿ ಆಧಾರ್ ಕಾರ್ಡ್ ಅನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಆದ್ದರಿಂದ 10 ವರ್ಷಗಳ ಹಿಂದೆ ಆಧಾರ್ ಕಾರ್ಡ್ ಪಡೆದ ವ್ಯಕ್ತಿಗಳು ತಮ್ಮ ಗುರುತಿನ ಪುರಾವೆ (ಪಿಒಐ) ಮತ್ತು ವಿಳಾಸದ ಪುರಾವೆ (ಪಿಒಎ) ದಾಖಲೆಗಳನ್ನು ತಕ್ಷಣ ನವೀಕರಿಸಲು ಯುಐಡಿಎಐ ಸಲಹೆ ನೀಡುತ್ತದೆ.

ಆಧಾರ್ ಕಾರ್ಡ್ ಅನ್ನು ಹೇಗೆ ನವೀಕರಿಸುವುದು ?
ಮೊದಲನೆಯದಾಗಿ UIDAI ನ ಅಧಿಕೃತ ವೆಬ್‌ಸೈಟ್ https://myaadhaar.uidai.gov.in/ ಗೆ ಹೋಗಿ .
– ಈಗ ನಿಮ್ಮ ಆಧಾರ್ ಸಂಖ್ಯೆ ಮತ್ತು ನೀಡಿರುವ ಕ್ಯಾಪ್ಚಾವನ್ನು ಇಲ್ಲಿ ನಮೂದಿಸಿ.
– ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದಿರುವ ಆಧಾರ್ ಸಂಖ್ಯೆ ಮತ್ತು OTP (ಒಂದು ಬಾರಿಯ ಪಾಸ್‌ವರ್ಡ್) ಬಳಸಿ ಲಾಗ್ ಇನ್ ಮಾಡಿ.
– ಈಗ ‘Update Demographics Data’ ಆಯ್ಕೆಯನ್ನು ಆರಿಸಿ.
– ಸಂಬಂಧಿತ ಆಯ್ಕೆಯನ್ನು ಆರಿಸಿದ ನಂತರ, ‘ Proceed’ ಕ್ಲಿಕ್ ಮಾಡಿ.
– ನೀವು ಅಪ್‌ ಡೇಟ್‌ ಮಾಡಲು ಇಚ್ಚಿಸುವ ಯಾವುದೇ ಮಾಹಿತಿಗೆ ಸಂಬಂಧಿಸಿದ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ.
– Submit ಬಟನ್ ಕ್ಲಿಕ್ ಮಾಡುವ ಮೊದಲು ನೀಡಿರುವ ಮಾಹಿತಿಯನ್ನು ಪರಿಶೀಲಿಸಿ.

ಈ ವೇಳೆ ನೀಡಲಾಗುವ ಸರ್ವೀಸ್ ರಿಕ್ವೆಸ್ಟ್ ನಂಬರ್ ನೋಟ್ ಮಾಡಿಟ್ಟುಕೊಳ್ಳಿ. ಇದರಿಂದ ಅಪ್‌ಡೇಟ್ ಪ್ರೊಸೆಸಿಂಗ್ ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಆನ್‌ಲೈನ್ ಆಧಾರ್ ಅಪ್‌ಡೇಟ್ ಪ್ರಕ್ರಿಯೆ ಪೂರ್ಣವಾಗುತ್ತದೆ.

ಬಯೋಮೆಟ್ರಿಕ್ ಪರಿಶೀಲನೆಯೊಂದಿಗೆ ಆಧಾರ್ ಕಾರ್ಡ್ ಆಫ್‌ಲೈನ್ ಅಪ್‌ಡೇಟ್
ಆಧಾರ್ ಲೊಕೇಟರ್ ವೆಬ್‌ಸೈಟ್‌ಗೆ ಭೇಟಿ ನೀಡಿ: ಸಮೀಪದ ಆಧಾರ್ ನೋಂದಣಿ ಕೇಂದ್ರಗಳನ್ನು ಹುಡುಕಲು bhuvan.nrsc.gov.in/aadhaar/ ನಲ್ಲಿ ಆಧಾರ್ ಲೊಕೇಟರ್ ವೆಬ್‌ಸೈಟ್ ಅನ್ನು ಪರಿಶೀಲಿಸಿ
ನಿಮ್ಮ ಹತ್ತಿರದ ಕೇಂದ್ರಗಳನ್ನು ಯಾವುದೆಂದು ನೋಡಿ: ನಿಮ್ಮ ಸುತ್ತಮುತ್ತಲಿನ ಆಧಾರ್ ನೋಂದಣಿ ಕೇಂದ್ರಗಳನ್ನು ಹುಡುಕಲು ”Centres Nearby” ಬಳಸಿ ಅಥವಾ ನಿಮ್ಮ ಪಿನ್ ಕೋಡ್ ಅನ್ನು ನಮೂದಿಸಿ.


ಈ ಸುದ್ದಿಯನ್ನು ಶೇರ್ ಮಾಡಿ

Related Posts