ಸ್ಥಳೀಯ

ಮಠಂದೂರು ಬಗ್ಗೆ ಅವಹೇಳನ ಆರೋಪ | ಬಿಜೆಪಿ ನಿಯೋಗದಿಂದ ದೂರು, ಕ್ರಮಕ್ಕೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮಾಜಿ ಶಾಸಕ ಸಂಜೀವ ಮಠಂದೂರು ಅವರ ಬಗ್ಗೆ ಪ್ರಜ್ವಲ್‌ ರೈ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಚೇರಿಯಲ್ಲಿ ತುರ್ತು ಸಭೆ ನಡೆದು ಬಳಿಕ ಪುತ್ತೂರು ನಗರ ಠಾಣೆಗೆ ದೂರು ನೀಡಲಾಯಿತು.

ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ರವರ ನೇತೃತ್ವದ ನಿಯೋಗವು ಪುತ್ತೂರು ನಗರ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಶೀಘ್ರ ಆರೋಪಿಯನ್ನು ಬಂಧಿಸುವಂತೆ ಮನವಿ ಮಾಡಿದರು.

SRK Ladders

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ಮುಖಂಡರಾದ ಚನಿಲ ತಿಮ್ಮಪ್ಪ ಶೆಟ್ಟಿ, ಪಿ.ಜಿ ಜಗನ್ನಿವಾಸ ರಾವ್, ಬೂಡಿಯಾ‌ರ್ ರಾಧಕೃಷ್ಣ ರೈ, ರಾಧಾಕೃಷ್ಣ ಬೋರ್ಕರ್, ಪಿ.ಜಿ. ಜಗನ್ನಿವಾಸ ರಾವ್, ಆರ್. ಸಿ. ನಾರಾಯಣ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುನಿಲ್ ಆಳ್ವ, ರಾಜೇಶ್ ಬನ್ನೂರು, ಪುರುಷೋತ್ತಮ ಮುಂಗ್ಲಿಮನೆ, ಚಂದ್ರಶೇಖರ ಬಪ್ಪಳಿಗೆ, ನಿತೀಶ್ ಕುಮಾರ್ ಶಾಂತಿವನ, ಯುವರಾಜ ಪೆರಿಯತ್ತೋಡಿ, ಪ್ರಸನ್ನ ಮಾರ್ತಾ, ಸಹಜ್ ರೈ, ಸುರೇಶ್ ಆಳ್ವ, ರಫೀಕ್ ದರ್ಬೆ, ರಾಧಾಕೃಷ್ಣ ಬೋರ್ಕರ್, ಸುಂದರ್ ಪೂಜಾರಿ ಬಡಾವು, ವಿಜಯ ಪಿ.ಎಸ್., ಜಯಶ್ರೀ ಶೆಟ್ಟಿ, ದೀಕ್ಷಾ ಪೈ, ಶಶಿಕಲ ಸಿ.ಎಸ್., ಜ್ಯೋತಿ ನಾಯಕ್, ಚಿತ್ರಾ ರೈ ಸೇರಿದಂತೆ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2