ರಾಜ್ಯ ವಾರ್ತೆಸ್ಥಳೀಯ

ತಾನು ಕರೆದ ಕಡೆ ಬಾರದಿದ್ದಕ್ಕೆ ಸಹಪಾಠಿ ಅಂಜಲಿಯನ್ನ ಕೊಲೆ ಮಾಡಿದ್ನಾ ವಿಶ್ವ? ನೇಹಾ ಹೀರೆಮಠ್ ರೀತಿಯಲ್ಲೇ ಕೊಲೆ ಮಾಡುತ್ತೇನೆ ಎಂದು ಬೆದರಿಸಿದ್ದನಂತೆ ಆರೋಪಿ!!

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ: ಇಂದು ಬುಧವಾರ (ಮೇ 15) ನಸುಕಿನ ಜಾವ ನಡೆದ ಯುವತಿಯ ಬರ್ಬರ ಕೊಲೆ ವಾಣಿಜ್ಯ ನಗರಿ ಹುಬ್ಬಳ್ಳಿಯನ್ನು ಬೆಚ್ಚಿಬೀಳಿಸಿದೆ.

ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ವೀರಾಪುರ ಓಣಿಯಲ್ಲಿ ವಾಸವಾಗಿದ್ದ ಅಂಜಲಿ ಅಂಬಿಗೇರ (20) ಎಂಬಾಕೆಯ ಮನೆಗೆ ನುಗ್ಗಿದ ಆರೋಪಿ ವಿಶ್ವ ಆಕೆಯ ಅಜ್ಜಿ ಮತ್ತು ಸಹೋದರಿಯ ಎದರೇ ಆಕೆಗೆ ಚಾಕುವಿನಿಂದ ಹೊಟ್ಟೆಗೆ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

SRK Ladders

ಕಳೆದ ತಿಂಗಳು ಏಪ್ರಿಲ್ 18 ರಂದು ನಡೆದ ನೇಹಾ ಹಿರೇಮಠ ಕೊಲೆ ಮಾದರಿಯಲ್ಲೇ ಅಂಜಲಿಯನ್ನು ಕೊಲೆ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಅಷ್ಟಕ್ಕೂ ಆರೋಪಿ ವಿಶ್ವ ಅಲಿಯಾಸ್ ಗೀರಿಶ್ ಅಂಜಲಿಯನ್ನು ಕೊಲೆ ಮಾಡಿದ್ದು ಏಕೆ? ಇವರಿಬ್ಬರಿಗೂ ಮೊದಲೆ ಪರಿಚಯ ಇತ್ತಾ?

ಅಂಜಲಿ ಅಂಬಿಗೇರ ವಿರಾಪುರ ಓಣಿಯಲ್ಲಿ ಅಜ್ಜಿ, ಸಹೋದರಿಯೊಂದಿಗೆ ವಾಸವಾಗಿದ್ದಳು. ಕೊಲೆ ಮಾಡಿದ ಆರೋಪಿ ವಿಶ್ವ ಮತ್ತು ಅಂಜಲಿ ಸಹಪಾಠಿಗಳು.

ಅಂಜಲಿ ಅಂಬಿಗೇರ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದಳು. ಇನ್ನು ವಿಶ್ವನ ವಿರುದ್ಧ ಹಲವು ಕಳ್ಳತನ ಪ್ರಕರಣಗಳಲ್ಲಿ ಶಾಮೀಲಾದ ಆರೋಪವಿದೆ. ಜತೆಗೆ, ಬೈಕ್ ಕಳ್ಳತನದಲ್ಲಿಯೂ ಆರೋಪಿಯಾಗಿದ್ದಾನೆ. ಅಂಜಲಿ ಅಂಬಿಗೇರ ಸಹಪಾಠಿಯಾದ ವಿಶ್ವನ ಜೊತೆ ಒಡನಾಟ ಹೊಂದಿದ್ದಳು. ಈ ಒಡನಾಟವನ್ನು ವಿಶ್ವ ತಪ್ಪಾಗಿ ಅರ್ಥೈಸಿಕೊಂಡಿದ್ದನು.

ಅಂಜಲಿ ಅಂಬಿಗೇರ ಕಳೆದ ಮೂರು ತಿಂಗಳಿಂದ ಮನೆಗೆ ಬಂದಿರಲಿಲ್ಲ. ಈಗ ಎಂಟು ದಿನಗಳ ಹಿಂದೆ ಮನೆಗೆ ಬಂದಿದ್ದಳು. ಹೀಗೆ ಮನೆಗೆ ಬಂದ ಅಂಜಲಿಗೆ ವಿಶ್ವ ನನ್ನ ಜೊತೆ ಅಲ್ಲಿ-ಇಲ್ಲಿಗೆ ಬಾ ಅಂತ ಪೀಡಿಸುತ್ತಿದ್ದನು. ಅಲ್ಲದೆ ಈ ಹಿಂದೆ ಮೈಸೂರಿಗೆ ಬಾ ಅಂತ ಎಂದು ಹೇಳಿದ್ದನು. ಇದಕ್ಕೆ ಅಂಜಲಿ ನಿರಾಕರಣೆ ಮಾಡಿದ್ದಳು. ಇದರಿಂದ ಕೋಪಗೊಂಡ ವಿಶ್ವ ನನ್ನ ಮಾತು ಕೇಳದಿದ್ದರೇ ನೇಹಾ ರೀತಿ ನಿನ್ನನ್ನು ಕೊಲೆ ಮಾಡುತ್ತೇನೆ ಅಂತ ಬೆದರಿಕೆ ಹಾಕಿದ್ದನು.

ಇದೀಗ, ವಿಶ್ವ ಅಲಿಯಾಸ್ ಗಿರೀಶ್ ಇಂದು ನಸುಕಿನ ಜಾವ ಅಂಜಲಿ ಮನೆಗೆ ನುಗ್ಗಿ ಅಜ್ಜಿ ಮತ್ತು ಸಹೋದರಿ ಎದುರೇ ಕೊಲೆ ಮಾಡಿ, ಪರಾರಿಯಾಗಿದ್ದಾನೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ವಿವಿ ಪ್ರಾಧ್ಯಾಪಕಿಯಾದ ಮಂಗಳಮುಖಿ; ಉನ್ನತ ಶಿಕ್ಷಣದ ಪ್ರಾಧ್ಯಾಪಕಿಯಾದದ್ದು ಇದೇ ಮೊದಲು!!

ತೃತೀಯ ಲಿಂಗಿಯೊಬ್ಬರು ವಿಶ್ವವಿದ್ಯಾಲಯವೊಂದರ ಅರೆಕಾಲಿಕ ಪ್ರಾಧ್ಯಾಪಕಿಯಾಗಿ ನೇಮಕಗೊಳ್ಳುವ ಮೂಲಕ…

1 of 4