ಸ್ಥಳೀಯ

ರಿಕ್ಷಾ ಪಲ್ಟಿ: ಚಾಲಕನಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮಿತ್ತೂರು ರೈಲ್ವೇ ಓವರ್ ಬ್ರಿಡ್ಜ್ ಸಮೀಪ ರಿಕ್ಷಾವೊಂದು ಪಲ್ಟಿಯಾಗಿ, ಚಾಲಕ ಗಾಯಗೊಂಡ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಆಟೋ ಚಾಲಕ, ಮಿತ್ತಪಡ್ಪು ಪಾಟ್ರಕೋಡಿ ನಿವಾಸಿ ನೀಲಪ್ಪ ಮೂಲ್ಯ ಗಾಯಗೊಂಡವರು. ರಿಕ್ಷಾದಲ್ಲಿದ್ದ ಇಬ್ಬರು ಸವಾರರು ಪಾರಾಗಿದ್ದಾರೆ.

SRK Ladders

ಕೆಎ 19 ಎಬಿ 3693 ನಂಬರಿನ ರಿಕ್ಷಾ ಪುತ್ತೂರಿನಿಂದ ಮಿತ್ತೂರು ಕಡೆ ತೆರಳುತ್ತಿದ್ದಾಗ ಘಟನೆ ನಡೆದಿದೆ.

ಅದೇ ಮಾರ್ಗವಾಗಿ ತೆರಳುತ್ತಿದ್ದ ಭಾರತ್ ವೆಹಿಕಲ್ ಬಜಾರ್ ಮಾಲಕ ಅಶ್ರಫ್ ತಕ್ಷಣ ಗಾಯಾಳುವನ್ನು ಉಪಚರಿಸಿ, ಬೊಳುವಾರು ಪ್ರಗತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿದರು. ಅಶ್ರಫ್ ಅವರ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ಕೆಎಂಸಿ ಆಸ್ಪತ್ರೆ ಅಭಿನಂದನಾ ಪ್ರಮಾಣಪತ್ರ ನೀಡಿ ಗೌರವಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2