ದೇಶಸ್ಥಳೀಯ

ಲೋಕಸಭಾ ಚುನಾವಣೆ: ಬಿಜೆಪಿ 4ನೇ ಪಟ್ಟಿ ಪ್ರಕಟ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ: ಲೋಕಸಭೆ ಚುನಾವಣೆ ರಣರಂಗಕ್ಕೆ ಸಕಲ ಸಿದ್ಧತೆ ನಡೆಸುತ್ತಿರುವ ಬಿಜೆಪಿಯು ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.

akshaya college

ನಾಲ್ಕನೇ ಪಟ್ಟಿಯಲ್ಲಿ 15 ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್‌ ನೀಡಿದೆ. ಅದರಲ್ಲೂ, ಬಹುಭಾಷಾ ನಟಿ, ನಟ ಶರತ್‌ಕುಮಾರ್‌ ಅವರ ಪತ್ನಿ ರಾಧಿಕಾ ಶರತ್‌ ಕುಮಾರ್‌ ಅವರಿಗೆ ಬಿಜೆಪಿ ಟಿಕೆಟ್‌ ಘೋಷಿಸಿದೆ. ರಾಧಿಕಾ ಶರತ್‌ ಕುಮಾರ್‌ ಅವರು ತಮಿಳುನಾಡಿನ ವಿರುಧುನಗರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಪುದುಚೇರಿಯ ಹಾಗೂ ತಮಿಳುನಾಡಿನ 14 ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿಯು ಬಿಡುಗಡೆ ಮಾಡಿದೆ. ತಮಿಳುನಾಡಿನಲ್ಲಿ ಬಿಜೆಪಿ ಬಿಡುಗಡೆ ಮಾಡುತ್ತಿರುವ ಎರಡನೇ ಪಟ್ಟಿ ಇದಾಗಿದೆ. ಪುದುಚೇರಿಯಿಂದ ಎ. ನಮಶ್ಶಿವಾಯಂ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ತಮಿಳುನಾಡಿನಲ್ಲಿ ಬಿಜೆಪಿ ಘೋಷಿಸಿದ ಮೊದಲ ಪಟ್ಟಿಯಲ್ಲಿ ಕೊಯಮತ್ತೂರಿನಿಂದ ಕೆ.ಅಣ್ಣಾಮಲೈ, ಚೆನ್ನೈ ದಕ್ಷಿಣದಿಂದ ತಮಿಳಿಸೈ ಸೌಂದರರಾಜನ್ ಮತ್ತು ನೀಲಗಿರಿಯಿಂದ ಎಲ್.ಮುರುಗನ್ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ತಿಳಿಸಿತ್ತು.

ತೆಲಂಗಾಣ ರಾಜ್ಯಪಾಲ ಹುದ್ದೆಯಿಂದ ರಾಜೀನಾಮೆ ನೀಡಿದ್ದ ತಮಿಳಿಸಾಯಿ ಸುಂದರರಾಜನ್ ಚೆನ್ನೈ ದಕ್ಷಿಣದಿಂದ ಬಿಜೆಪಿ ಪರ ಕಣಕ್ಕೆ ಇಳಿದಿದ್ದಾರೆ. ವಿನೋಜ್ ಪಿ ಸೆಲ್ವನ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚೆನ್ನೈ ಸೆಂಟ್ರಲ್ ನಿಂದ ಸ್ಪರ್ಧಿಸಲಿದ್ದಾರೆ. ಕನ್ಯಾಕುಮಾರಿಯಿಂದ ಪೊನ್ನು ರಾಧಾಕೃಷ್ಣನ್ ಸ್ಪರ್ಧೆ ಮಾಡಲಿದ್ದಾರೆ. ವೆಲ್ಲೂರಿನಿಂದ ಎ ಸಿ ಷಣ್ಮುಗಂ, ಕೃಷ್ಣಗಿರಿಯಿಂದ ಸಿ ನರಸಿಂಹನ್, ಪೆರಂಬಲೂರಿನಿಂದ ಟಿ. ಆರ್ ಪಾರಿವೆಂದಾರ್, ತೂತುಕುಡಿಯಿಂದ ನೈನಾರ್ ನಾಗೇಂದ್ರನ್ ಅವರ ಹೆಸರನ್ನು ಬಿಜೆಪಿ ಹೈಕಮಾಂಡ್ ಅಂತಿಮಗೊಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಕಡಬ ಪಟ್ಟಣ ಪಂಚಾಯತ್ ಚುನಾವಣೆ: ಬಿಜೆಪಿಗರಿಂದಲೇ ಬಿಜೆಪಿ ಮುಕ್ತ | ಪತ್ರಿಕಾಗೋಷ್ಠಿಯಲ್ಲಿ ನೂರುದ್ದೀನ್ ಸಾಲ್ಮರ

ಪುತ್ತೂರು: ಹೊಸದಾಗಿ ಮೇಲ್ದರ್ಜೆಗೇರಿದ ಕಡಬ ತಾಲೂಕಿನ ಪಟ್ಟಣ ಪಂಚಾಯತ್ ಚುನಾವಣೆಯ ಗೆಲುವಿನಿಂದ ಆ…

1 of 125