ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸಿಟಿ ಪ್ರಾಯೋಜಕತ್ವದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಶ್ರೀ ಪ್ರಗತಿ ವಿಸ್ತಾರ ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇದರ ನೂತನ ಪದಾಧಿಕಾರಿಗಳ ಪದಸ್ವೀಕಾರ ಸಮಾರಂಭ ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಏವಿಯೇಷನ್ & ಮ್ಯಾನೇಜ್’ಮೆಂಟ್ ಸಭಾಂಗಣದಲ್ಲಿ ನಡೆಯಿತು.
ಶ್ರೀ ಪ್ರಗತಿ ಎಜುಕೇಶನ್ ಫೌಂಡೇಶನ್ ಆಡಳಿತಕ್ಕೊಳಪಟ್ಟ ಪುತ್ತೂರು ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಏವಿಯೇಷನ್ & ಮ್ಯಾನೇಜ್’ಮೆಂಟ್ ಸಂಸ್ಥೆಯ ನೂತನ ರೋಟರ್ಯಾಕ್ಟ್ ಕ್ಲಬ್ ಇದಾಗಿದೆ.
ಪ್ರಥಮ ಅಧ್ಯಕ್ಷರಾಗಿ ಸುಜ್ಞಾನಂದ, ಕಾರ್ಯದರ್ಶಿಯಾಗಿ ಅನೂಪ್ ಹಾಗೂ ಪದಾಧಿಕಾರಿಗಳು ಪದಸ್ವೀಕಾರ ಮಾಡಿದರು.
ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಡಾ. ರಾಜಾರಾಮ್ ಕೆ.ಬಿ., ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಉಲ್ಲಾಸ್ ಪೈ, ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿ ಪ್ರಜ್ವಲ್ ಆರ್., ರೋಟರ್ಯಾಕ್ಟ್ ಕೆನರಾ ವಲಯ ಪ್ರತಿನಿಧಿ ಸುಬ್ರಮಣಿ ಪಿ.ವಿ., ರೋಟರಿ ಕ್ಲಬ್ ಪುತ್ತೂರು ಸಿಟಿಯ ಪ್ರಧಾನ ಕಾರ್ಯದರ್ಶಿ ಡಾ. ಪೊಡಿಯಾ, ಪೂರ್ವಾಧ್ಯಕ್ಷ ಎಂ.ಆರ್. ಜಯಕುಮಾರ್ ರೈ, ಸಾರ್ಜಂಟ್ ಸುಬ್ರಹ್ಮಣ್ಯ ಹೆಬ್ಬಾರ್, ಸದಸ್ಯರಾದ ರವೀಂದ್ರ ಕೆ., ರೋಟರ್ಯಾಕ್ಟ್ ಸಭಾಪತಿ ಗುರುರಾಜ್, ಫೌಂಡೇಶನ್ ಉಪಾಧ್ಯಕ್ಷ ಹೇಮಲತಾ ಗೋಕುಲ್ ನಾಥ್, ಕಾಲೇಜು ಪ್ರಾಂಶುಪಾಲೆ ಮಾಧವಿ, ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಹಾಗೂ ಜಿಡೆಕಲ್ಲು ರೋಟರ್ಯಾಕ್ಟ್ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಸಮಿತಿ ಕಾರ್ಯದರ್ಶಿ ನವೀನ್ ರೈ ಬನ್ನೂರು ಕಾರ್ಯಕ್ರಮ ನಿರೂಪಿಸಿದರು.


























