ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸಿದ್ದಾರೆ ಎಂದು ಆರೋಪಿಸಿ ಬ್ಯಾಂಡ್ ಬ್ಯಾನರ್’ನೊಂದಿಗೆ ಮನೆಗೆ ತೆರಳಿ ಎಚ್ಚರಿಕೆ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಂಭತ್ತು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನ್ಯಾಯಾಲಯದ ಪ್ರಕ್ರಿಯೆಯಂತೆ ಒಂಬತ್ತು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು, ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.
ಬಿಜೆಪಿ ಸಾಮಾಜಿಕ ಜಾಲತಾಣ ಪ್ರಮುಖ್ ಜಯಾನಂದ ಕೆ. ಮನೆಗೆ ತೆರಳಿ ಎಚ್ಚರಿಕೆ ನೀಡಲಾಗಿತ್ತು.
ಬಂಧಿತರನ್ನು ಕಡಬ ತಾಲೂಕಿನ ಪಾತಾಜೆ ನಿವಾಸಿ ಪ್ರಜ್ವಲ್ ರೈ, ವಿಟ್ಲ ಕಂಬಳಬೆಟ್ಟು ನಿವಾಸಿ ಸುಶಾಂತ್ ಶೆಟ್ಟಿ, ಪುತ್ತೂರಿನ ಆರ್ಯಾಪು ನಿವಾಸಿ ಸನತ್ ರೈ, ಬಲ್ನಾಡು ನಿವಾಸಿ ರೋಹಿತ್ ನಾಯ್ಕ್, ಸಾಮೆತಡ್ಕ ನಿವಾಸಿ ಅಖಿಲ್, ಆರ್ಯಾಪು ನಿವಾಸಿ ಕೀರ್ತನ್ ರೈ, ಬನ್ನೂರು ನಿವಾಸಿ ಸರ್ವೇಶ್ ರಾಜ್ ಅರಸ್, ವಿಟ್ಲ ಕಂಬಳಬೆಟ್ಟು ನಿವಾಸಿ ಸುಮಿತ್ ಶೆಟ್ಟಿ ಎಂದು ಗುರುತಿಸಲಾಗಿದೆ.
ಪುತ್ತೂರು ನಗರ ಠಾಣಾ ಇನ್ಸ್ ಪೆಕ್ಟರ್ ಸತೀಶ್ ಜಿ.ಜೆ. ಹಾಗೂ ಎಸ್ಸೈ ನಂದಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.