ಪುತ್ತೂರು: ತೀವ್ರ ಮಳೆಯಿಂದ ಮಚ್ಚಿಮಲೆ – ಬಲ್ನಾಡು ರಸ್ತೆಗಡ್ಡವಾಗಿ ಕುಸಿತಗೊಂಡ ಗುಡ್ಡದ ಮಣ್ಣನ್ನು ಆರ್ಯಾಪು ಗ್ರಾಮ ಪಂಚಾಯತ್ ವತಿಯಿಂದ ತೆರವು ಮಾಡಲಾಯಿತು.
ಮಚ್ಚಿಮಲೆ ಬಲ್ನಾಡು ಸಂಪರ್ಕ ರಸ್ತೆಗೆ ಗುಡ್ಡದ ಮಣ್ಣು ಬಿದ್ದು, ಸಂಚಾರ ಸಂಪೂರ್ಣ ಕಡಿತಗೊಂಡಿತ್ತು. ಇದನ್ನು ಜೆಸಿಬಿ ಬಳಸಿ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ, ಸದಸ್ಯರಾದ ವಸಂತ ಶ್ರೀ ದುರ್ಗಾ, ವಿರೂಪಾಕ್ಷ ಭಟ್ ಮಚ್ಚಿಮಲೆ, ಎಂ.ಎಸ್ ಈಶ್ವರ, ಜಾನು ನಾಯ್ಕ, ಪ್ರಜ್ವಲ್ ಕೃಷ್ಣ, ಚಂದ್ರಶೇಖರ ಹಾಗೂ ಊರಿನವರು ಸಹಕರಿಸಿದರು.