Gl harusha
ಸ್ಥಳೀಯ

ತಾಲೂಕು ಕಚೇರಿ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿದ ಅಧಿವಕ್ತಾ ಪರಿಷತ್’ನ ಪುತ್ತೂರು ಘಟಕ!

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ತಾಲೂಕು ಕಚೇರಿ ಮತ್ತು ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಗಳನ್ನು ಸರಿಪಡಿಸುವಂತೆ ಕೋರಿ ಅಧಿವಕ್ತಾ ಪರಿಷತ್ ಪುತ್ತೂರು ಘಟಕದ ವತಿಯಿಂದ ತಹಸೀಲ್ದಾರಿಗೆ ಮನವಿ ನೀಡಲಾಯಿತು.

srk ladders
Pashupathi
Muliya

ತಹಸೀಲ್ದಾರ್ ಪರವಾಗಿ ಉಪತಹಸೀಲ್ದಾರ್ ಮನವಿ ಸ್ವೀಕರಿಸಿದರು.

ತಾಲೂಕು ಕಚೇರಿಯ ಅಭಿಲೇಖಾಲಯದಲ್ಲಿ ನಕಲು ಪ್ರತಿಗಳನ್ನು ಪಡೆಯುವಲ್ಲಿ ಅವ್ಯವಸ್ಥೆ ಬಗ್ಗೆ, ರೆವೆನ್ಯೂ ಅದಾಲತ್ತುಗಳ ಸ್ಥಾಪನೆ ಮಾಡುವ ಕುರಿತಾಗಿ, ನಕ್ಷೆಗಳು ಮತ್ತು ಪ್ಲಾಟಿಂಗಿಗೆ ಸಂಬಂಧಿಸಿದ ಸಮಸ್ಯೆಗಳು, ಕಡತಗಳ ಮಂದಗತಿಯ ವಿಲೇವಾರಿಯ ಸಮಸ್ಯೆ, ಪ್ರತಿ ಗ್ರಾಮಕ್ಕೂ ಒಬ್ಬ ಗ್ರಾಮಕರಣಿಕರನ್ನು ನೇಮಿಸುವ ಕುರಿತಾಗಿ ಮತ್ತು ಸಿವಿಲ್ ನ್ಯಾಯಾಲಯದಲ್ಲಿ ಡಿಕ್ರಿಯ ಪ್ರಕಾರ ಪಹಣಿ ದಾಖಲಿಸುವ ಕುರಿತಂತೆ ಉಂಟಾಗುತ್ತಿರುವ ಸಮಸ್ಯೆ ಮತ್ತು ಈ ಎಲ್ಲ ಸಮಸ್ಯೆಗಳನ್ನು ಸರಿಪಡಿಸುವಂತೆ ಮನವಿಯಲ್ಲಿ ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಅಧಿವಕ್ತಾ ಪರಿಷತ್ತಿನ ಸದಸ್ಯರು ಸರಕಾರಿ ಇಲಾಖೆಯ ವಿವಿಧ ವಿಭಾಗಗಳಲ್ಲಿನ ಭ್ರಷ್ಟಾಚಾರವನ್ನು ತೊಡೆದು ಹಾಕುವಂತೆ ಆಗ್ರಹಿಸಿ ಮನವಿಯನ್ನು ನೀಡಲಾಯಿತು.

ಅಧಿವಕ್ತಾ ಪರಿಷತ್ತಿನ ಪುತ್ತೂರು ಘಟಕದ ಅಧ್ಯಕ್ಷ ಜಯಪ್ರಕಾಶ್ ಎನ್, ಕಾರ್ಯದರ್ಶಿ ಶಾಮ್ ಪ್ರಸಾದ್ ಕೈಲಾರ್, ಅಧಿವಕ್ತಾ ಪರಿಷತ್ತಿನ ಸುಧೀರ್ ಕುಮಾರ್ ತೋಳ್ಪಡಿ, ಕಕ್ವೆ ಕಷ್ಟಪ್ಪ ಗೌಡ, ಚಿನ್ಮಯ ರೈ ಎನ್, ವೆಂಕಟೇಶ್, ಸಂತೋಷ್ ಕುಮಾರ್ ಎಂ ವಿರೂಪಾಕ್ಷ , ಕೃಷ್ಣಪ್ರಸಾದ್ ನಡ್ಸಾರ್, ಅಕ್ಷಿತ್ ಎಂ ಚಂದ್ರಹಾಸ ಈಶ್ವರಮಂಗಲ, ಸಂತೋಷ್ ಕೆ.ಆರ್ ವಿಮಲೇಶ್ ಶೃಂಗಾರಕೋಡಿ ಶಾಮ್ ಎಸ್., ಅಶೋಕ್ ಮುಂತಾದವರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಸುಬ್ರಹ್ಮಣ್ಯಕ್ಕೆ ದಿನದ 3 ಹೊತ್ತು ರೈಲು ಸೇವೆ| ಮಂಗಳೂರು – ಪುತ್ತೂರು ರೈಲು ಓಡಾಟ ವಿಸ್ತರಣೆ: ಬದಲಾದ ಸಮಯ ಹೀಗಿದೆ

ಮಂಗಳೂರು-ಕಬಕ ಪ್ಯಾಸೆಂಜ‌ರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ