ಕೆದಂಬಾಡಿ: ಮಾದಕ ದ್ರವ್ಯ ವ್ಯಸನಗಳಿಗೆ ಬಲಿಯಾಗಿ ಆರೋಗ್ಯ ಸಮಸ್ಯೆ ತರಿಸಿಕೊಳ್ಳುವುದಕ್ಕಿಂತ ಅದರಿಂದ ದೂರವಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಯುವಜನರು ಅರಿವು ಮೂಡಿಸಿಕೊಳ್ಳಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ತರಬೇತುದಾರ ಶ್ರೀಕಾಂತ್ ಬಿರಾವು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದ.ಕ ಜಿಲ್ಲೆ, ಮೈ ಭಾರತ್ ದಕ್ಷಿಣ ಕನ್ನಡ ಜಿಲ್ಲೆ, ತಾಲ್ಲೂಕು ಯುವಜನ ಒಕ್ಕೂಟ ಪುತ್ತೂರು, ಯುವರಂಗ ಕೆದಂಬಾಡಿ ಸಹಯೋಗದೊಂದಿಗೆ ನಡೆದ ಮಾದಕದ್ರವ್ಯ ವ್ಯಸನ ತಡೆಗಟ್ಟುವಿಕೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಮಾದಕ ವ್ಯಸನ ಮುಕ್ತ ಗ್ರಾಮವಾಗಲು ಯುವಕ ಮಂಡಲಗಳು ತಮ್ಮ ಗ್ರಾಮದ ಜನರಿಗೆ ಅರಿವು ಮೂಡಿಸಬೇಕು. ಇದರಿಂದ ಮಾದಕ ವ್ಯಸನದಿಂದಾಗುವ ಪರಿಣಾಮ ಜನರಿಗೆ ಮನಮುಟ್ಟುವಂತೆ ತಿಳಿಸಬೇಕೆಂದು ಹೇಳಿದರು.
ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲಿಯಾನ್, ವಿವೇಕಾನಂದ ಕಾನೂನು ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಲಕ್ಷ್ಮಿಕಾಂತ ರೈ, ಯುವರಂಗದ ಅಧ್ಯಕ್ಷ ರಕ್ಷಿತ್ ಗೌಡ ಇದ್ಯಪ್ಪೆ, ಪ್ರ.ಕಾರ್ಯದರ್ಶಿ ಲಿಖಿತ್ ಗೌಡ ಇದ್ಯಪ್ಪೆ, ಗೌರವ ಸಲಹೆಗಾರ ಸಂತೋಷ್ ರೈ ಕೋರಂಗ, ನೇಮಣ್ಣಗೌಡ ಇದ್ಯಪ್ಪೆ, ಮಾಜಿ ಅಧ್ಯಕ್ಷ ಅಗರಿ ಯಶೋಧರ ಚೌಟ ಪಟ್ಟೆತ್ತಡ್ಕ, ಅಕ್ಷತ್ ಗೌಡ ಇದ್ಯಪ್ಪೆ, ನಿತೇಶ್ ರೈ ಕೋರಂಗ, ಉಪಾಧ್ಯಕ್ಷ ಮಹೇಶ್ ಗೌಡ ಇದ್ಯಪ್ಪೆ, ಕೋಶಾಧಿಕಾರಿ ಕಿರಣ್ ಕುಮಾರ್ ಬೋಳೋಡಿ, ಕ್ರೀಡಾಧಿಕಾರಿ ಅವಿನಾಶ್ ಪೂಜಾರಿ, ಸಾಂಸ್ಕೃತಿಕ ಕಾರ್ಯದರ್ಶಿ ಪ್ರಣಾಮ್ ರೈ ಬೆದ್ರುಮಾರ್ ಹಾಗೂ ಸರ್ವಸದಸ್ಯರು ಭಾಗವಹಿಸಿದ್ದರು.
ರಕ್ಷಿತ್ ಗೌಡ ಇದ್ಯಪ್ಪೆ ಸ್ವಾಗತಿಸಿ, ಸಂತೋಷ್ ರೈ ವಂದಿಸಿದರು.