ಪುತ್ತೂರು: ಬೊಳುವಾರು ವಿಶ್ವಕರ್ಮ ಯುವ ಸಮಾಜದ ನೇತೃತ್ವದಲ್ಲಿ ವಿಶ್ವಬ್ರಾಹ್ಮಣ ಸೇವಾ ಸಂಘದ ಸಹಕಾರದಲ್ಲಿ ಶ್ರೀ ವಿಶ್ವಕರ್ಮ ಪೂಜೆ, ವಿದ್ಯಾರ್ಥಿವೇತನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಸೆ. 16ರಂದು ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ನಡೆಯಲಿದೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ಹೊರಡಲಿರುವ ಮೆರವಣಿಗೆ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಸಮಾಪನಗೊಳ್ಳಲಿದೆ. ಬಳಿಕ ವಿಶ್ವಕರ್ಮ ಪೂಜೆ ಜರುಗಲಿದೆ.
ಬೆಳಿಗ್ಗೆ 11 ಗಂಟೆಗೆ ನಡೆಯುವ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರದ ಅಧ್ಯಕ್ಷತೆಯನ್ನು ವಿಶ್ವಕರ್ಮ ಯುವ ಸಮಾಜದ ಅಧ್ಯಕ್ಷ ಪ್ರಕಾಶ ಆಚಾರ್ಯ ಕೆ. ವಹಿಸಲಿದ್ದಾರೆ. ಬೆಂಗಳೂರು ಎವಿಪಿ ಡೊಮೆಸ್ಟಿಕ್ ಆಪರೇಷನ್ಸ್ ಪೈರಿಯನ್ ಸರ್ವಿಸಸ್ ನ ಸಿಎ ಮೋಹನ ಆಚಾರ್ಯ ಎಂ. ಕಲ್ಲಿಮಾರ್ ಪುತ್ತೂರು ಮುಖ್ಯ ಅತಿಥಿಯಾಗಿರುವರು. ಮಧ್ಯಾಹ್ನ1 ಗಂಟೆಗೆ ಮಹಾಪೂಜೆ ಜರುಗಲಿದೆ.
ಪೂಜೆ ಮಾಡಲಿಚ್ಚಿಸುವವರು ತಮ್ಮ ಹೆಸರನ್ನು ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕು. ಹೊರೆಕಾಣಿಕೆ ನೀಡುವವರು ಸೋಮವಾರದ ಒಳಗೆ ಸಭಾಭವನಕ್ಕೆ ತಲುಪಿಸಬೇಕು. ವಿಶ್ವಕರ್ಮ ಪೂಜೆಯ ದಿನ ಸಮಾಜ ಬಾಂಧವರು ತಮ್ಮ ಅಂಗಡಿ ವ್ಯವಹಾರಗಳಿಗೆ ಬಿಡುವು ಮಾಡಿಕೊಂಡು ವಿಶ್ವಕರ್ಮ ಪೂಜೆಯಲ್ಲಿ ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.
ವಿಶ್ವಕರ್ಮ ದೇವರ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿರುವ ವಿಶ್ವಕರ್ಮ ಸಮಾಜದ ಸಂಘಸಂಸ್ಥೆಗಳು – ವಿಶ್ವಬ್ರಾಹ್ಮಣ ಸೇವಾ ಸಂಘ ಬೊಳ್ವಾರು, ಪುತ್ತೂರು, ದ.ಕ. ಜಿಲ್ಲಾ ವಿಶ್ವಕರ್ಮ ಹಿತರಕ್ಷಣಾ ಸಂಘ, ಪುತ್ತೂರು, ಶ್ರೀ ಆನೆಗುಂದಿ ಗುರು ಸೇವಾ ಪರಿಷತ್, ಪುತ್ತೂರು ಮಹಾಮಂಡಲ, ವಿಶ್ವಕರ್ಮ ಯುವ ಮಿಲನ್ ಪುತ್ತೂರು, ಪಂಚಮುಖಿ ಗೆಳೆಯರ ಬಳಗ, ಕೋರ್ಟ್ ರಸ್ತೆ, ಪುತ್ತೂರು, ವಿಶ್ವಕರ್ಮ ಮಹಿಳಾ ಮಂಡಳಿ, ಬೊಳ್ವಾರು, ಪುತ್ತೂರು ದ.ಕ., ವಿಶ್ವಕರ್ಮ ಸಮಾಜ ಸಭಾ ಬೀರಮಲೆ, ಪುತ್ತೂರು, ಗಾಯತ್ರಿ ಮಹಿಳಾ ಮಂಡಳಿ, ಬೀರಮಲೆ, ಪುತ್ತೂರು, ವಿಶ್ವಕರ್ಮ ಸೇವಾ ಸಂಘ, ಉಪ್ಪಿನಂಗಡಿ, ಭಾವನಾ ಕಲಾ ಆರ್ಟ್ಸ್, ಬೊಳ್ವಾರು, ಪುತ್ತೂರು, ದ.ಕ. ಜಿಲ್ಲಾ ಕಮ್ಮಾರರ ಗುಡಿ ಕೈಗಾರಿಕಾ ಸಂಘ, ಕಾಳಿಕಾಂಬಾ ಮಹಿಳಾ ಸಂಘ, ಉಪ್ಪಿನಂಗಡಿ, ವಿಶ್ವಕರ್ಮ ಯುವಕ ಸಂಘ ಬೀರಮಲೆ, ವಿಶ್ವಕರ್ಮ ಸಮಾಜ ಸೇವಾ ಸಂಘ, ಭಕ್ತಕೋಡಿ.